ಅರೆ ಹುಚ್ಚನ ಅಗಲಿಕೆಗೆ ಹೂವಿನಹಡಗಲಿ ಜನತೆಯ ಕಣ್ಣೀರು: ಅಂತ್ಯಸಂಸ್ಕಾರಕ್ಕೆ ಭಾರೀ ಜನಸ್ತೋಮ

ಹೂವಿನಹಡಗಲಿ ತುಂಬಾ ಓಡಾಡಿ ಭಿಕ್ಷೆ ಬೇಡುತ್ತಿದ್ದ ಈತ ಯಾರೇ ಸಿಗಲಿ 1 ರೂ. ಮಾತ್ರ ಭಿಕ್ಷೆ ಕೇಳುತ್ತಿದ್ದ. 1 ರೂ.ಗಿಂತ ಜಾಸ್ತಿ ಹಣ ಕೊಟ್ಟರೆ ಅದನ್ನು ಸ್ವೀಕರಿಸುತ್ತಿರಲಿಲ್ಲ.

Written by - Puttaraj K Alur | Last Updated : Nov 17, 2021, 04:13 PM IST
  • ಭಿಕ್ಷುಕನ ಅಗಲಿಕೆಗೆ ಕಣ್ಣೀರಿಟ್ಟ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಜನರು
  • 1 ರೂ. ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ವ್ಯಾಪಾರಿಗಳಿಗೆ ಅದೃಷ್ಟ ತಂದುಕೊಡುತ್ತಿದ್ದ
  • ಹುಚ್ಚ ಬಸ್ಯಾನ ಅಂತಿಮಯಾತ್ರೆಗೆ ಭಾರೀ ಜನಸ್ತೋಮವೇ ಹರಿದುಬಂದಿತ್ತು
ಅರೆ ಹುಚ್ಚನ ಅಗಲಿಕೆಗೆ ಹೂವಿನಹಡಗಲಿ ಜನತೆಯ ಕಣ್ಣೀರು: ಅಂತ್ಯಸಂಸ್ಕಾರಕ್ಕೆ ಭಾರೀ ಜನಸ್ತೋಮ title=
ಹುಚ್ಚ ಬಸ್ಯಾನ ಅಂತಿಮಯಾತ್ರೆಗೆ ಭಾರೀ ಜನಸ್ತೋಮ

ಬೆಂಗಳೂರು: ಭಿಕ್ಷುಕನ ಅಗಲಿಕೆಗೆ ಬಳ್ಳಾರಿ(Ballary) ಜಿಲ್ಲೆಯ ಹೂವಿನಹಡಗಲಿಯ ಇಡೀ ಜನತೆಯೇ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ವಿದಾಯ ಹೇಳಲು ಸಾವಿರಾರು ಜನರೇ ಆಗಮಿಸಿದ್ದರು. ಅರೆಹುಚ್ಚ ಬಸ್ಯಾ(Huchcha Basya) ಎಂದೇ ಖ್ಯಾತಿಯಾಗಿ ಭಿಕ್ಷೆ ಬೇಡುತ್ತಾ ಹೂವಿನಹಡಗಲಿ ತುಂಬಾ ಓಡಾಡುತ್ತಿದ್ದ ಈತನ ಹೆಸರು ಬಸವರಾಜ. ಅಪ್ಪಾಜಿ ಅಂತಲೂ ಪ್ರಸಿದ್ಧನಾಗಿದ್ದ ಈತ ಅನೇಕರಿಗೆ ಅದೃಷ್ಟವಂತನಾಗಿದ್ದ.

ಬಸ್ಯಾ ಅಂತಿಮಯಾತ್ರೆಗೆ ಭಾರೀ ಜನಸ್ತೋಮ

ಎಲ್ಲರ ಬಾಯಲ್ಲೂ ಅರೆಹುಚ್ಚು ಬಸ್ಯಾ ಎಂದು ಕರೆಸಿಕೊಳ್ಳುತ್ತಿದ್ದ ಈತ ಏಕೆ  ಹುಚ್ಚ(Beggar)ನಾದ ಎಂಬುದು ಯಾರಿಗೂ ಗೊತ್ತಿಲ್ಲ. ಕೆದರಿದ ಕೂದಲು, ಮೈಮೇಲಿನ ಬಟ್ಟೆ ಕೊಳೆಯಾಗಿದ್ದರೂ ಈತನ ಮೊಗದಲ್ಲಿ ನಗುವಿಗೆ ಕೊರತೆ ಇರಲಿಲ್ಲ. ಹೂವಿನಹಡಗಲಿ ತುಂಬಾ ಓಡಾಡಿ ಭಿಕ್ಷೆ ಬೇಡುತ್ತಿದ್ದ ಈತ ಯಾರೇ ಸಿಗಲಿ 1 ರೂ. ಮಾತ್ರ ಭಿಕ್ಷೆ ಕೇಳುತ್ತಿದ್ದ. 1 ರೂ.ಗಿಂತ ಜಾಸ್ತಿ ಹಣ ಕೊಟ್ಟರೆ ಅದನ್ನು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಹೂವಿನಹಡಗಲಿ(Huvina Hadagali) ಜನರು ಇತನೊಂದಿಗೆ ವಿಶೇಷ ನಂಟು ಹೊಂದಿದ್ದರು. ಅರೆಹುಚ್ಚ ಬಸ್ಯಾನಿಗೆ ಹೂವಿನಹಡಗಲಿಯ ಅನೇಕ ಜನರು ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಏಕೆಂದರೆ ಈತ ಭಿಕ್ಷುಕನಾಗಿದ್ದರೂ ಭಲೇ.. ಅದೃಷ್ಟವಂತನಾಗಿದ್ದನಂತೆ.

ಇದನ್ನೂ ಓದಿ: BTS 2021 : 'ಬೆಂಗಳೂರು ಟೆಕ್ ಸಮ್ಮಿಟ್' 2021 ಚಾಲನೆ : ಕನ್ನಡದಲ್ಲಿ ಭಾಷಣ ಆರಂಭಿಸಿದ ಉಪರಾಷ್ಟ್ರಪತಿಗಳು

ಅರೆಹುಚ್ಚು ಬಸ್ಯಾ(Huchcha Basya) ಏನಾದರೂ ಅಂಗಡಿಗೆ ಬಂದು ಭಿಕ್ಷೆ ಕೇಳಿದರೆ ಸಾಕು ಅಂದು ಆ ಅಂಗಡಿ ವ್ಯಾಪಾರ ಭರ್ಜರಿ ಆಗುತ್ತಿತ್ತು ಅಂತಾ ಅನೇಕರು ಹೇಳಿದ್ದಾರೆ. ಹೀಗಾಗಿ ಅಂಗಡಿ ವ್ಯಾಪಾರಸ್ಥರಿಗೆ ಬಸ್ಯಾನನ್ನು ಕಂಡರೆ ತುಂಬಾ ಪ್ರೀತಿ. ಆತನಿಗೆ ಪ್ರೀತಿಯಿಂದ ಸತ್ಕರಿಸಿ ಭಿಕ್ಷೆ ನೀಡುತ್ತಿದ್ದರಂತೆ. ಆದರೆ ಬಸ್ಯಾ 1 ರೂ. ಮೇಲೆ ಬಿಡಿಗಾಸು ಮುಟ್ಟುತ್ತಿರಲಿಲ್ಲವಂತೆ.

ಉಪಮುಖ್ಯಮಂತ್ರಿಯಾಗಿದ್ದ ದಿ. ಎಂ.ಪಿ.ಪ್ರಕಾಶ್, ಶಾಸಕರಾಗಿದ್ದ ಎಂ.ಪಿ.ರವೀಂದ್ರ ಅವರು ಕೂಡ ಬಸ್ಯಾನಿಗೆ ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದರಂತೆ. ಹೂವಿನಹಡಗಲಿ ಜನತೆಯ ಪ್ರೀತಿಗೆ ಪಾತ್ರನಾಗಿದ್ದ ಬಸ್ಯಾ KSRTC ಬಸ್ ಹರಿದು ಸಾವನ್ನಪ್ಪಿದ್ದಾನೆ. ಈತನ ಸಾವಿಗೆ ಇಡೀ ಹೂವಿನಹಡಗಲಿಯಲ್ಲಿ ದುಃಖವೇ ಮಡುಗಟ್ಟಿತ್ತು. ತಮ್ಮ ಕುಟುಂಬ ಸದಸ್ಯನನ್ನೇ ಕಳೆದುಕೊಂಡಂತೆ ಇಲ್ಲಿನ ಜನರು ದುಃಖಿಸಿದ್ದಾರೆ.

ಇದನ್ನೂ ಓದಿ: Heavy Rain : ರಾಜ್ಯಾದ್ಯಂತ ಇದೇ 20ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ!

ಭಿಕ್ಷುಕನಾದರೂ ಅದೃಷ್ಟವಂತ ವ್ಯಕ್ತಿಯಾಗಿದ್ದ ಬಸ್ಯಾನ ಅಂತ್ಯಸಂಸ್ಕಾರವನ್ನು ಅದ್ದೂರಿಯಾಗಿ ಮಾಡಲು ಹೂವಿನಹಡಗಲಿ ಜನರು ನಿರ್ಧರಿಸಿದ್ದರು. ಅದರಂತೆ ಯಾವ ಗಣ್ಯ ವ್ಯಕ್ತಿಗೂ ಕಡಿಮೆ ಇಲ್ಲದಂತೆ ಬಸ್ಯಾನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈತನ ಅಂತಿಮ ದರ್ಶನಕ್ಕೆ ಇಡೀ ಊರಿನ ಜನರೇ ಆಗಮಿಸಿದ್ದರು. ಅಂತ್ಯಸಂಸ್ಕಾರದ ವೇಳೆ ನರೆದಿದ್ದ ಜನಸ್ತೋಮದ ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News