ನಾಳೆ ಮೈಸೂರಿನಲ್ಲಿ ಗೃಹಲಕ್ಷ್ಮೀಗೆ ಸೋನಿಯಾ ಚಾಲನೆ.. ಯಾವಾಗ ಎರಡು ಸಾವಿರ ಹಣ ಸಿಗುತ್ತೆ ಗೊತ್ತಾ..?

Gruhalakshmi : ಸರ್ಕಾರದ ಐದು ಪ್ರಮುಖ ಯೋಜನೆಗಳ ಪೈಕಿ ನಾಲ್ಕನೇ ಗ್ಯಾರೆಂಟಿ ಜಾರಿಯಾಗ್ತಿದೆ.ನಾಳೆ ಮೈಸೂರಿನಲ್ಲಿ ನಾಲ್ಕನೇ ಗ್ಯಾರೆಂಟಿ ಗೃಹ ಲಕ್ಷ್ಮಿ‌ಯೋಜನೆಯನ್ನ ಅಧಿಕೃತವಾಗಿ ಚಾಲನೆಗೊಳಿಸಲಾಗ್ತಿದೆ..ಈ ಮೂಲಕ ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ನಡೆದುಕೊಳ್ತಿದೆ..ಉಳಿದೊಂದು ಯೋಜನೆ ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ..  

Written by - Savita M B | Last Updated : Aug 29, 2023, 09:52 PM IST
  • ಸರ್ಕಾರದ ನಾಲ್ಕನೇ ಗ್ಯಾರೆಂಟಿ ಯೋಜನೆ ಅನುಷ್ಠಾನ
  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗೃಹ ಲಕ್ಷ್ಮಿಗೆ ಚಾಲನೆ
  • ಗೃಹ ಲಕ್ಷ್ಮಿಗೆ ಚಾಲನೆ ನೀಡಲಿದ್ದಾರೆ ಸೋನಿಯಾ
ನಾಳೆ ಮೈಸೂರಿನಲ್ಲಿ ಗೃಹಲಕ್ಷ್ಮೀಗೆ ಸೋನಿಯಾ ಚಾಲನೆ.. ಯಾವಾಗ ಎರಡು ಸಾವಿರ ಹಣ ಸಿಗುತ್ತೆ ಗೊತ್ತಾ..? title=

Gruhalakshmi  ಅನ್ನಭಾಗ್ಯ,ಮಹಿಳೆಯರಿಗೆ ಉಚಿತ ಬಸ್ ಪಾಸ್ ಹಾಗೂ 200 ಯೂನಿಟ್ ವಿದ್ಯುತ್ ಫ್ರೀ ಕೊಟ್ಟಿರುವ ಸರ್ಕಾರ ನಾಲ್ಕನೇ ಗ್ಯಾರೆಂಟಿಯನ್ನೂ ನಾಳೆ ಜಾರಿಗೆ ತರ್ತಿದೆ.. ಮೈಸೂರಿನಲ್ಲಿ ನಾಳೆ ಮಹಿಳೆಯರಿಗೆ ಮಾಸಿಕ 2000 ರೂ ನೀಡುವ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ..ಈ ಮೂಲಕ ಐದು ಪ್ರಮುಖ ಗ್ಯಾರೆಂಟಿಗಳಲ್ಲಿ ನಾಲ್ಕನ್ನ ಜಾರಿ ಮಾಡುವ ಮೂಲಕ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ..

ಉಳಿದಿರುವ ನಿರುದ್ಯೋಗಿ ಪದವೀಧರರ 3000 ಹಾಗೂ ಡಿಪ್ಲಮೋ ಪದವೀಧರರ 1500 ರೂಪಾಯಿ ನೀಡುವ ಯುವ ನಿಧಿ ಯೋಜನೆಯಷ್ಟೇ ಬಾಕಿಯಿದೆ. ಬರುವ ತಿಂಗಳು ಆ ಐದನೇ ಗ್ಯಾರೆಂಟಿಯನ್ನೂ ಅನುಷ್ಠಾನಕ್ಕೆ ತರಲು ಸರ್ಕಾರ ಪ್ರಯತ್ನ ನಡೆಸಿದೆ.

ಅಂದುಕೊಂಡಂತೆ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯನ್ನ ಬಹಳ ಅದ್ಧೂರಿಯಾಗಿ ಜಾರಿಗೆ ತರಲು ನಿರ್ಧರಿಸಿತ್ತು..ಅದ್ರಂತೆ ಮೈಸೂರಿನಲ್ಲಿ ನಾಳೆ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯನ್ನ ಮಾಡಿಕೊಳ್ಳಲಾಗಿದೆ..ಇನ್ನು ಈ ಕಾರ್ಯಕ್ರಮವನ್ನ ಜನಮಾನಸದಲ್ಲಿಡಬೇಕು..ಮುಂಬರುವ ಲೋಕಸಭಾ ಚುನಾವಣೆಗೆ ಮತಗಳಿಗೂ ದಾರಿಯಾಗಬೇಕೆಂಬ ಉದ್ದೇಶದಿಂದಲೇ ಸರ್ಕಾರ ಕಾರ್ಯಕ್ರಮ ಆಯೋಜಿಸಿದೆ..ಕಾಂಗ್ರೆಸ್ ನ ಅತಿರಥ ಮಹಾರಥ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ..

ಇದನ್ನೂ ಓದಿ-ಬಂಗಾರದ ಮನುಷ್ಯ ಸಿನಿಮಾಗೆ ಡಾ.ರಾಜ್‌ ಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ನಾಯಕಿ ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಆಹ್ವಾನ ನೀಡಲಾಗಿದೆ.. ಖರ್ಗೆ,ಸೋನಿಯಾ,ರಾಹುಲ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.. ಇನ್ನು ವೇಣುಗೋಪಾಲ್, ಸುರ್ಜೇವಾಲಾ ಸೇರಿದಂತೆ ಎಐಸಿಸಿ ಗಣ್ಯರಿಗೂ ಬುಲಾವ್ ನೀಡಿದ್ದು ಅವರು ಭಾಗವಹಿಸಲಿದ್ದಾರೆ..

ಈಗಾಗಲೇ ಅನ್ನಭಾಗ್ಯ 10ಕೆ.ಜಿ ಅಕ್ಕಿ,ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ‌ಉಚಿತ ಪ್ರಯಾಣದ ಯೋಜನೆಗಳಿಂದ ಸರ್ಕಾರ ಸಾಕಷ್ಟು ಪ್ರಶಂಸೆಗಳಿಸಿದೆ..ಹಾಗೆಯೇ ಉಚಿತ 200 ಯೂನಿಟ್ ವಿದ್ಯುತ ಫ್ರೀ ಸ್ಕೀಂ ಮೂಲಕವೂ ಅರ್ಧ ಮತದಾರರನ್ನ ಸೆಳೆದಿರುವ ಕಾಂಗ್ರೆಸರ..  ಇದೀಗ ಗೃಹ ಲಕ್ಷ್ಮಿ ಮೂಲಕ ಮಹಿಳಾ ಮತದಾರರನ್ನ ಸೆಳೆಯುವ ಸ್ಕೆಚ್ ಇದ್ರ ಹಿಂದಿದೆ..ಉಚಿತ ಬಸ್ ಪ್ರಯಾಣ ಹಾಗೂ ಗೃಹ ಲಕ್ಷ್ಮಿ‌ಯೋಜನೆಗಳೇ ಶೇ60 ರಷ್ಟು‌ಮತಗಳನ್ನ ಕಾಂಗ್ರೆಸ್ ಗೆ ತಂದುಕೊಡಲಿದೆ ಎನ್ನಲಾಗ್ತಿದೆ.. 

ಹೀಗಾಗಿ ಲೋಕಸಭಾ ಚುನಾವಣೆಯಲ್ಲಿಯೂ ಅತಿನಹೆಚ್ಚಿನ ಸೀಟು ಗೆಲ್ಲಬಹುದೆಂಬ ಲೆಕ್ಕಾಚಾರ ಕೈ ನಾಯಕರಲ್ಲಿದೆ. ಒಟ್ನಲ್ಲಿ ನಾಳೆ ಗೃಹ ಲಕ್ಷ್ಮಿ ಯೋಜನೆ ಜಾರಿಯ ಮೂಲಕ ಸರ್ಕಾರ ನಾಲ್ಕು ಗ್ಯಾರೆಂಟಿಗಳನ್ನ ಅನುಷ್ಠಾನ ಮಾಡಿದಂತಾಗ್ತಿದೆ..ಮುಂದಿನ ತಿಂಗಳು ಉಳಿದಿರುವ ಯುವನಿಧಿ ಕಾರ್ಯಕ್ರಮ ಚಾಲನೆಗೂ ಸರ್ಕಸ್ ನಡೆದಿದೆ..ಹಲವು ಅಡ್ಡಿ ಆತಂಕಗಳ ನಡುವೆಯೂ ನಾಲ್ಕು ಗ್ಯಾರೆಂಟಿಗಳನ್ನ ಅನುಷ್ಠಾನ ಮಾಡಿರುವ ಸರ್ಕಾರಕ್ಕೆ ರಾಜ್ಯದ ಬರ ಪರಿಸ್ಥಿತಿ ಮಾತ್ರ ಸಂಕಷ್ಟ ತಂದಿಟ್ಟಿದೆ..

ಇದನ್ನೂ ಓದಿ-Kantara 2 : 'ಕಾಂತಾರ'ಗಿಂತ 7 ಪಟ್ಟು ಹೆಚ್ಚು ಬಜೆಟ್‌ನಲ್ಲಿ ತಯಾರಾಗ್ತಿದೆ 'ಕಾಂತಾರ 2'

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News