ತೋಂಟದಾರ್ಯ ಶ್ರೀಗಳು ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಆಚರಣೆ ಬೇಡ ಎಂದಿದ್ದು ಯಾಕೆ?

ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಆಚರಣೆಯನ್ನು ಕೈಬಿಡಬೇಕು ಎಂದು ತೋಂಟದಾರ್ಯ ಶ್ರೀಗಳು ಹೇಳಿದ್ದಾರೆ.

Last Updated : Sep 5, 2018, 09:24 PM IST
ತೋಂಟದಾರ್ಯ ಶ್ರೀಗಳು ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಆಚರಣೆ ಬೇಡ ಎಂದಿದ್ದು ಯಾಕೆ? title=

ಗದಗ: ದೇಶದೆಲ್ಲೆಡೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಆಚರಣೆ ಮಾಡುತ್ತಿದ್ದರೆ ಗದಗದಲ್ಲಿ ತೋಂಟದಾರ್ಯ ಶ್ರೀಗಳು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯನ್ನು ಅಂದರೆ ಶಿಕ್ಷಕರ ದಿನಾಚರಣೆಯನ್ನು ಕೈಬಿಡಬೇಕು ಎಂದಿದ್ದಾರೆ.

ನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ವಪಲ್ಲಿ ರಾಧಾಕೃಷ್ಣನ್ ಅವರು ಬ್ರಾಹ್ಮಣ ಜನಾಂಗದಲ್ಲಿ ಹುಟ್ಟಿದ್ದಾರೆ. ಹಾಗಾಗಿ ಅವರಿಗೆ ಪ್ರಾಧಾನ್ಯತೆ ನೀಡುವುದರಲ್ಲಿ ತಪ್ಪಿಲ್ಲ. ಆದರೆ ಶಿಕ್ಷಕರ ದಿನಾಚರಣೆಯಂದು ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಫುಲೆ ಅವರನ್ನು ನೆನೆಪಿಸಿಕೊಳ್ಳುವುದು ಅತ್ಯಗತ್ಯ ಎಂದು ಶ್ರೀಗಳು ಹೇಳಿದರು.

ದೇಶದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾ ಫುಲೆ ಅವರು ಸಾಕಷ್ಟು ನೋವು ಅನುಭವಿಸಿದ್ದರು. ಆಗಿನ ಕಾಲದಲ್ಲೂ ಸಾಕಷ್ಟು ಮತಾಂಧರು ಅವರಿಗೆ ತೊಂದರೆ, ಕಿರುಕುಳ ನೀಡಿದ್ದರು. ಆದರೂ ಆ ಎಲ್ಲಾ ಕಷ್ಟಗಳನ್ನು ಮೆಟ್ಟಿ ಫುಲೆ ನಿಂತಿದ್ದರು. ಸಮಾಜದಿಂದ ಅಪಮಾನ, ಹಿಂಸೆಗೊಳಗಾದರೂ ಸಹ, ಎಲ್ಲವನ್ನು ಸಹಿಸಿಕೊಂಡು ದೇಶದ ಮೊದಲ ಶಿಕ್ಷಕಿಯಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಅಂತಹ ಮಹಾನ್ ಮಹಿಳೆಯನ್ನು ಈ ದಿನ ನೆನೆಯುವುದು ಸೂಕ್ತ. ಅಷ್ಟೇ ಅಲ್ಲ, ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ತೋಂಟದಾರ್ಯ ಶ್ರೀಗಳು ಕೇಂದ್ರ ಸರ್ಕಾರಕ್ಕೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.

Trending News