ಆಂಧ್ರದಲ್ಲಿ ಗಾಂಜಾ ಬೆಳೆದು, ಕರ್ನಾಟಕದಲ್ಲಿ ಮಾರಾಟ; ಇಬ್ಬರು ಆರೋಪಿಗಳ ಬಂಧನ

ಆಂಧ್ರಪ್ರದೇಶದ ಪಶ್ಚಿಮ  ಗೋದಾವರಿಯಲ್ಲಿ ಗಾಂಜಾ ಬೆಳೆಯನ್ನು ಕೃಷಿಯಂತೆ ಬೆಳೆದು, ಅದನ್ನು ಒಣಗಿಸಿದ ನಂತರ ಪ್ಯಾಕ್ ಮಾಡಿ ವ್ಯವಸ್ಥಿತವಾಗಿ ನೆಲಮಂಗಲದ ಸುತ್ತಮುತ್ತ ಮಾರಾಟ ಮಾಡುತ್ತಿದ್ದ  ಜಾಲಕ್ಕಾಗಿ ಬಲೆ ಬೀಸಿದ್ದ ತ್ಯಾಮಗೊಂಡ್ಲು  ಪೊಲೀಸರು  ಭರ್ಜರಿ  ಕಾರ್ಯಚರಣೆ  ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Written by - Zee Kannada News Desk | Last Updated : Feb 3, 2022, 11:01 AM IST
  • ತ್ಯಾಮಗೊಂಡ್ಲು ಪೊಲೀಸರ ಭರ್ಜರಿ ಕಾರ್ಯಚರಣೆ
  • ನೆಲಮಂಗಲ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
  • ಬಂಧಿತ ಆರೋಪಿಗಳಿಂದ 15 ಲಕ್ಷ 90 ಸಾವಿರ ರೂ. ಮೌಲ್ಯದ 53 ಕೆ ಜಿ ಗಾಂಜಾ ವಶ
ಆಂಧ್ರದಲ್ಲಿ ಗಾಂಜಾ ಬೆಳೆದು, ಕರ್ನಾಟಕದಲ್ಲಿ ಮಾರಾಟ; ಇಬ್ಬರು ಆರೋಪಿಗಳ ಬಂಧನ title=
Two accused have been arrested allegedly selling cannabis near nelmangla

ನೆಲಮಂಗಲ : ನೆರೆಯ ರಾಜ್ಯ ಆಂಧ್ರಪ್ರದೇಶದ ಪಶ್ಚಿಮ  ಗೋದಾವರಿಯಲ್ಲಿ ಭತ್ತದ ಗದ್ದೆಯ ರೀತಿ ಗಾಂಜಾ ಬೆಳೆದು ಅದನ್ನು ಒಣಗಿಸಿ ಕರ್ನಾಟಕದ ನೆಲಮಂಗಲ  ಸುತ್ತಮುತ್ತ  ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ಕ್ರಮ ಕೈಗೊಂಡಿರುವ ತ್ಯಾಮಗೊಂಡ್ಲು ಪೊಲೀಸರು ಇಬ್ಬರು  ಆರೋಪಿಗಳನ್ನು ಬಂಧಿಸಿ  53 ಕೆ.ಜಿ ಗಾಂಜಾ  ವಶಪಡಿಸಿಕೊಂಡಿದ್ದಾರೆ. 

ಆಂಧ್ರಪ್ರದೇಶದ (Andhra Pradesh) ಪಶ್ಚಿಮ  ಗೋದಾವರಿಯಲ್ಲಿ ಗಾಂಜಾ ಬೆಳೆಯನ್ನು ಕೃಷಿಯಂತೆ ಬೆಳೆದು, ಅದನ್ನು ಒಣಗಿಸಿದ ನಂತರ ಪ್ಯಾಕ್ ಮಾಡಿ ವ್ಯವಸ್ಥಿತವಾಗಿ ನೆಲಮಂಗಲದ ಸುತ್ತಮುತ್ತ ಮಾರಾಟ ಮಾಡುತ್ತಿದ್ದ  ಜಾಲಕ್ಕಾಗಿ ಬಲೆ ಬೀಸಿದ್ದ ತ್ಯಾಮಗೊಂಡ್ಲು  ಪೊಲೀಸರು  ಭರ್ಜರಿ  ಕಾರ್ಯಚರಣೆ  ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ- JOBS: ಡೇ-ನಲ್ಮ್ ಯೋಜನೆ: ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ

ಬಂಧಿತ ಆರೋಪಿಗಳಿಂದ 15 ಲಕ್ಷ 90 ಸಾವಿರ ರೂ. ಮೌಲ್ಯದ 53 ಕೆ ಜಿ ಗಾಂಜಾ (Cannabis) ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ಕುಲುವನಹಳ್ಳಿ ಮೂಲದ ಉಮೇಶ್ ಮತ್ತು ಪಶ್ಚಿಮ ಗೋದಾವರಿಯ ರಾಮ್ ಪ್ರಸಾದ್  ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ  ಗಾಂಜಾ ಪೇಡ್ಲರ್ ಸಲೀಂ ಪಾಷ ತಲೆಯ ಮರೆಸಿಕೊಂಡಿದ್ದು ಪೊಲೀಸರು ಈತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಇದನ್ನೂ ಓದಿ- JOBS: ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ

ನೆಲಮಂಗಲ ತಾಲೂಕಿನ ಅರಿವೇಸಂದ್ರ ಗೇಟ್ ಬಳಿಯ ಸುಬ್ಬಯ್ಯ ಲಾರಿ ಪಾರ್ಕಿಂಗ್ ಬಳಿ ಗಾಂಜಾ ಮಾರಾಟ ಮಾಡುವ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಆರೋಪಿಗಳಿಂದ   ಮಾರುತಿ 800 ಕೆಎ 01.ಎನ್‌. 0156
ಎರಡು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಸರ್ಕಲ್‌ ಇನ್ಪೇಕ್ಟರ್ ರಾಜೀವ್, ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪಿಎಸ್ಐ ಚಿಕ್ಕನರಸಿಂಹಯ್ಯ ತಂಡದವರ ಒಂದು ವಾರದ ಕಾರ್ಯಾಚರಣೆಯಿಂದ ಗಾಂಜಾ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News