Unmanned DRDO fighter aircraft: ಚಿತ್ರದುರ್ಗದಲ್ಲಿ ಮಾನವ ರಹಿತ ಡ್ರೋನ್ ಮಾದರಿಯ ವಿಮಾನ ಪತನ!

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಸಿದ್ಧಪಡಿಸಿರುವ UAV-TAPAS  07A-14 ಹೆಸರಿನ ಈ ವಿಮಾನವು ಇಂದು ಬೆಳಗ್ಗೆ ಹಾರಾಟ ಆರಂಭಿಸಿತ್ತು. ಆದರೆ ನಿಯಂತ್ರಣ ತಪ್ಪಿ ಜಮೀನಿನಲ್ಲಿ ಪತನವಾಗದ್ದು, ಯಾವುದೇ ರೀತಿಯ ಅನಾಹುತ ಆಗಿಲ್ಲ.

Written by - Puttaraj K Alur | Last Updated : Aug 20, 2023, 03:38 PM IST
  • ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್ ಮಾದರಿಯ ವಿಮಾನ ಪತನ!
  • ಚಿತ್ರದುರ್ಗದ ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಜಮೀನಿನಲ್ಲಿ ಪತನ
  • DRDO ಸಿದ್ಧಪಡಿಸಿರುವ UAV-TAPAS 07A-14 ಹೆಸರಿನ ವಿಮಾನ ಪತನವಾಗಿದೆ
Unmanned DRDO fighter aircraft: ಚಿತ್ರದುರ್ಗದಲ್ಲಿ ಮಾನವ ರಹಿತ ಡ್ರೋನ್ ಮಾದರಿಯ ವಿಮಾನ ಪತನ! title=
ಡ್ರೋನ್ ಮಾದರಿಯ ವಿಮಾನ ಪತನ!

ಚಿತ್ರದುರ್ಗ: ಪರೀಕ್ಷಾರ್ಥವಾಗಿ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್ ಮಾದರಿಯ ವಿಮಾನವೊಂದು ಪತನಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಜಮೀನಿನಲ್ಲಿ ಭಾನುವಾರ ಬೆಳಗ್ಗೆ ಈ ಡ್ರೋನ್ ಮಾದರಿಯ ಪ್ರಾಯೋಗಿಕ ವಿಮಾನ ಪತನವಾಗಿದೆ. ಈ ಮಾನವ ರಹಿತ ಪ್ರಾಯೋಗಿಕ ವಿಮಾನವನ್ನು ಚಳ್ಳಕೆರೆಯ ಡಿಆರ್‍ಡಿಓದಿಂದ ಹಾರಿಬಿಡಲಾಗಿತ್ತು.

ಇದನ್ನೂ ಓದಿ: ಅಯೋಧ್ಯೆಗೆ ಇಂದು ಸಿಎಂ ಯೋಗಿ ಭೇಟಿ: ಮಂದಿರ ನಿರ್ಮಾಣ ಕಾಮಗಾರಿ ಪರಿಶೀಲನೆ

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಸಿದ್ಧಪಡಿಸಿರುವ UAV-TAPAS  07A-14 ಹೆಸರಿನ ಈ ವಿಮಾನವು ಇಂದು ಬೆಳಗ್ಗೆ ಹಾರಾಟ ಆರಂಭಿಸಿತ್ತು. ಆದರೆ ನಿಯಂತ್ರಣ ತಪ್ಪಿ ಜಮೀನಿನಲ್ಲಿ ಪತನವಾಗದ್ದು, ಯಾವುದೇ ರೀತಿಯ ಅನಾಹುತ ಆಗಿಲ್ಲ.

ಡ್ರೋನ್ ಮಾದರಿಯ ಈ ವಿಮಾನ ಪತನವಾದ ಸುದ್ದಿ ತಿಳಿದು ಸ್ಥಳದಲ್ಲಿ ಅಪಾರ ಜನರು ಜಮಾಯಿಸಿದ್ದರು. ವಿಮಾನ ಪತನಕ್ಕೆ ನಿರ್ಧಿಷ್ಟ ಕಾರಣ ತಿಳಿದುಬಂದಿಲ್ಲ. ವದ್ದೀಕೆರೆ ಗ್ರಾಮದ ಸಿದ್ದಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಪತನವಾದ ಈ ವಿಮಾನದ ಪಳಯುಳಿಕೆಯನ್ನು ಜನರು ಕುತೂಹಲದಿಂದ ನೋಡುತ್ತಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಕಟ್ಟಿಹಾಕಲು 'ಕರ್ನಾಟಕ'ದ ಪ್ಲಾನ್ ಸಿದ್ದಪಡಿಸಿದ ಕಾಂಗ್ರೆಸ್ 

‘DRDO ಅಭಿವೃದ್ಧಿಪಡಿಸುತ್ತಿರುವ ತಪಸ್ ಡ್ರೋನ್ ಪ್ರಾಯೋಗಿಕ ಹಾರಾಟದ ವೇಳೆ ಚಿತ್ರದುರ್ಗ ಜಿಲ್ಲೆಯ ಗ್ರಾಮದ ಜಮೀನಿನಲ್ಲಿ ಪತನಗೊಂಡಿದೆ. ಈ ಬಗ್ಗೆ DRDO ರಕ್ಷಣಾ ಸಚಿವಾಲಯಕ್ಕೆ ಮಾಹಿತಿ ನೀಡಿದ್ದು, ಈ ಅಪಘಾತದ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News