ವೈಕುಂಠ ಏಕಾದಶಿ ಸಂಭ್ರಮ.. ಝಗಮಗಿಸಿದ ಬೆಂಗಳೂರು ದೇವಾಲಯಗಳು..!

ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ. ಈ ಹಬ್ಬವನ್ನು ಬೆಂಗಳೂರಿಗರು ಪ್ರತಿವರ್ಷ ಸಡಗರದಿಂದ ಆಚಾರಿಸುತ್ತಾರೆ. ಈ ವರ್ಷ ಕೂಡ ಅದ್ದೂರಿಯಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದ್ದು, ನಗರದ ದೇವಸ್ಥಾನಗಳಲ್ಲಿ ಶುಕ್ರವಾರವೇ ಹಬ್ಬದ ವಾತಾವರಣ ಮನೆಮಾಡಿತ್ತು.ಮಲ್ಲೇಶ್ವರದ ಟಿಟಿಡಿ ದೇವಸ್ಥಾನದಲ್ಲಂತೂ ಸಂಭ್ರಮ ಮುಗಿಲುಮುಟ್ಟಿದೆ. 

Written by - Manjunath N | Last Updated : Dec 23, 2023, 10:39 PM IST
  • ಮಧ್ಯರಾತ್ರಿಯವರೆಗೂ ಭಕ್ತದಿಗಳು ದೇವಸ್ಥಾನಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ.
  • ಈ ದಿನ ದೇವಸ್ಥಾನಕ್ಕೆ ಬಂದು ವೈಕುಂಠ ದರ್ಶನ ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನೋದು ನಂಬಿಕೆ
  • ವಿವಿಧ ದೇಗುಲಗಳಲ್ಲಿ‌ ಸ್ವರ್ಗದ ಬಾಗಿಲು ನಿರ್ಮಾಣ ಮಾಡಿ ಆರಾಧನೆ ನಡೆಸಲಾಗುತ್ತಿದೆ
ವೈಕುಂಠ ಏಕಾದಶಿ ಸಂಭ್ರಮ.. ಝಗಮಗಿಸಿದ ಬೆಂಗಳೂರು ದೇವಾಲಯಗಳು..! title=
file photo

ಬೆಂಗಳೂರು: ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ. ಈ ಹಬ್ಬವನ್ನು ಬೆಂಗಳೂರಿಗರು ಪ್ರತಿವರ್ಷ ಸಡಗರದಿಂದ ಆಚಾರಿಸುತ್ತಾರೆ. ಈ ವರ್ಷ ಕೂಡ ಅದ್ದೂರಿಯಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದ್ದು, ನಗರದ ದೇವಸ್ಥಾನಗಳಲ್ಲಿ ಶುಕ್ರವಾರವೇ ಹಬ್ಬದ ವಾತಾವರಣ ಮನೆಮಾಡಿತ್ತು.ಮಲ್ಲೇಶ್ವರದ ಟಿಟಿಡಿ ದೇವಸ್ಥಾನದಲ್ಲಂತೂ ಸಂಭ್ರಮ ಮುಗಿಲುಮುಟ್ಟಿದೆ. 

ಇದನ್ನೂ ಓದಿ: 56ನೇ ವಯಸ್ಸಿನಲ್ಲಿ ತನಗಿಂತ 22 ವರ್ಷ ಕಿರಿಯ ಯುವತಿ ಜೊತೆ 2ನೇ ಬಾರಿ ಮದುವೆಗೆ ಸಿದ್ಧರಾದ ಸ್ಟಾರ್ ನಟ

ಇಂದು ಎಲ್ಲಾ ಕಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಇದು ಭಗವಾನ್ ಮಹಾವಿಷ್ಣು ನಿದ್ರೆಯಿಂದ ಎಚ್ಚರವಾಗಿ ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಟ್ಟ ಪುಣ್ಯ ದಿನ. ಆದ್ದರಿಂದ ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ.ವೈಕುಂಠ ಏಕಾದಶಿಯನ್ನ ಬೆಂಗಳೂರಿನಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತದೆ.ವೈಕುಂಠ ಏಕಾದಶಿ ಪ್ರಯುಕ್ತವಾಗಿ ನಗರದ ಮಲ್ಲೇಶ್ವರಂ ನ ಟಿಡಿಡಿ  ದೇವಸ್ಥಾನದ ಸುತ್ತಲೂ ದಕ್ಷಿಣ ಶೈಲಿಯ ಚಪ್ಪರ ಹಾಕಿ ಹೂವಿನಿಂದ ಅಲಾಂಕಾರ ಮಾಡಲಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೇ ವಿಶೇಷ ಪೂಜೆ ಆರಂಭವಾಗಿತ್ತು.ವೆಂಕಟೇಶ್ವರನಿಗೆ ಪಂಚಾಭಿಷೇಕ ಮಾಡಿ, ಪುಷ್ಪಾಭಿಷೇಕ ಮಾಡಿ ನಂತರ ವಿಶೇಷ ಅಲಂಕಾರ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಇದನ್ನೂ ಓದಿ: RCBಗೆ ಕಪ್ ಗೆಲ್ಲಲು ಸಹಾಯ ಮಾಡಿ ಎಂದ ಅಭಿಮಾನಿಗೆ ಧೋನಿ ಕೊಟ್ಟ ಉತ್ತರವೇನು ಗೊತ್ತಾ?

ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದ್ದು, ನೂಕು ನುಗ್ಗಲಾಗದಂತೆ ದೇವಸ್ಥಾನದ ಸುತ್ತಲೂ ಬ್ಯಾರೀಕೇಟ್ ಅಳವಡಿಸಲಾಗಿದೆ. ಇನ್ನು, ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ ಮಾಸ್ಕ್ ಹಾಕಿಕೊಂಡು ಭಕ್ತದಿಗಳು ದೇವಸ್ಥಾನಕ್ಕೆ ಬರಲು ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ‌.‌ ಅಲ್ಲದೇ ಟ್ರಾಫಿಕ್ ಜಾಮ್ ಆಗುವ ಸಾಧ್ಯಾತೆಗಳು ಇರುವುದರಿಂದ ಟ್ರಾಪಿಕ್ ಪೋಲಿಸರನ್ನೂ ನಿಯೋಜನೆ ಮಾಡಲಾಗಿದೆ.‌

ವೈಕುಂಠನಿಗೆ ಬೆಳಗ್ಗೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ವಿಶೇಷ ಪೂಜೆ, ಹೊಮ, ಹವನಗಳು ನೆರವೇರಲಿದ್ದು,ಮಧ್ಯರಾತ್ರಿಯವರೆಗೂ ಭಕ್ತದಿಗಳು ದೇವಸ್ಥಾನಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ. ವೈಕುಂಠ ಏಕಾದಶಿ ಅಂದರೆ ಹಿಂದೂಗಳಿಗೆ ಒಂದು ಸಂಭ್ರಮ. ಈ ದಿನ ದೇವಸ್ಥಾನಕ್ಕೆ ಬಂದು ವೈಕುಂಠ ದರ್ಶನ ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನೋದು ನಂಬಿಕೆ.‌ವಿವಿಧ ದೇಗುಲಗಳಲ್ಲಿ‌ ಸ್ವರ್ಗದ ಬಾಗಿಲು ನಿರ್ಮಾಣ ಮಾಡಿ ಆರಾಧನೆ ನಡೆಸಲಾಗುತ್ತಿದೆ.ಸ್ವರ್ಗದ ಬಾಗಿಲು ಮೂಲಕ‌ ತೆರಳಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News