RCB Fan Demand To MS Dhoni: ಕಳೆದ ಋತುವಿನಲ್ಲಿ ಅಂದರೆ 2023ರಲ್ಲಿ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರೋಚಕ ಗೆಲುವು ಸಾಧಿಸುವ ಮೂಲಕ IPL ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಮೂಲಕ ಮುಂಬೈ ಜೊತೆ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡ ಎಂಬ ಹೆಗ್ಗಳಿಕೆ ಪಾತ್ರವಾಯಿತು.
ಇದನ್ನೂ ಓದಿ: ನ್ಯೂ ಇಯರ್ ಮೂಡ್ನಲ್ಲಿ ಏಡಿ ಬಿಯರ್ ಹಿಡಿದು ಸಿಗರೇಟ್ ಸೇದುತ್ತಿರುವ ವಿಡಿಯೋ ವೈರಲ್!
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈವರೆಗೆ ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಮಧ್ಯೆ, ಆರ್’ಸಿಬಿ ಅಭಿಮಾನಿಯೊಬ್ಬ ಬೆಂಗಳೂರು ತಂಡಕ್ಕೆ ಟ್ರೋಫಿ ಗೆಲ್ಲಲು ಸಹಾಯ ಮಾಡುವಂತೆ ಎಂಎಸ್ ಧೋನಿಗೆ ಮನವಿ ಮಾಡಿದ್ದಾರೆ. ಆತನ ಕೋರಿಕೆಗೆ ಸಿಎಸ್’ಕೆ ನಾಯಕ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಆರ್’ಸಿಬಿಯ ಅಭಿಮಾನಿಯೊಬ್ಬ ಬೆಂಗಳೂರು ತಂಡಕ್ಕೆ ಟ್ರೋಫಿ ಗೆಲ್ಲಲು ಸಹಾಯ ಮಾಡಲು ಮನವಿ ಮಾಡುತ್ತಿರುವುದನ್ನು ಕಾಣಬಹುದು. "ನಾನು 16 ವರ್ಷಗಳಿಂದ RCBಯ ದೊಡ್ಡ ಅಭಿಮಾನಿಯಾಗಿದ್ದೇನೆ. ನೀವು CSKಗಾಗಿ ಐದು ಪ್ರಶಸ್ತಿಗಳನ್ನು ಗೆದ್ದಂತೆ, RCB ತಂಡಕ್ಕೆ ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡಿ" ಎಂದು ಹೇಳಿದ್ದಾರೆ. ಈ ಬೇಡಿಕೆಯನ್ನು ಕೇಳಿದ ಅಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ.
ಆರ್’ಸಿಬಿ ಅಭಿಮಾನಿಯ ಕೋರಿಕೆಗೆ ಪ್ರತಿಕ್ರಿಯಿಸಿದ ಧೋನಿ, "ಆರ್ ಸಿ ಬಿ ತುಂಬಾ ಒಳ್ಳೆಯ ತಂಡ. ಆದರೆ ಕ್ರಿಕೆಟ್’ನಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ. ಎಲ್ಲಾ 10 ತಂಡಗಳಲ್ಲಿ ಸಂಪೂರ್ಣ ಆಟಗಾರರು ಇದ್ದರೆ ಅದನ್ನು ತುಂಬಾ ಬಲಿಷ್ಠ ತಂಡಗಳು ಎನ್ನಬಹುದು. ಆದರೆ ಗಾಯದಿಂದಲೋ ಅಥವಾ ಯಾವುದೋ ಇತರ ಕಾರಣದಿಂದಲೋ ಕೆಲವು ಆಟಗಾರರು ತಂಡದಿಂದ ಹೊರಗುಳಿದಾಗ ಅಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ” ಎಂದಿದ್ದಾರೆ.
ಇದನ್ನೂ ಓದಿ: ರಾಜಕೀಯ ಲಾಭಕ್ಕಾಗಿ ಹಿಜಾಬ್ ಪ್ರಸ್ತಾಪ ಖಂಡನೀಯ: ಬಸವರಾಜ ಬೊಮ್ಮಾಯಿ
ಮಾತು ಮುಂದುವರೆಸಿದ ಮಾಹಿ, "ಅವರದು ಉತ್ತಮ ತಂಡ, ಎಲ್ಲರಿಗೂ ಐಪಿಎಲ್’ನಲ್ಲಿ ಉತ್ತಮ ಅವಕಾಶವಿದೆ. ಇದೀಗ ನನ್ನ ಸ್ವಂತ ತಂಡದ ಬಗ್ಗೆ ಚಿಂತಿಸಲು ನನಗೆ ಸಾಕಷ್ಟು ವಿಷಯಗಳಿವೆ. ಹಾಗಾಗಿ, ಪ್ರತಿ ತಂಡಕ್ಕೂ ನಾನು ಶುಭ ಹಾರೈಸುತ್ತೇನೆ. ಆದರೆ ಇದನ್ನು ಹೊರತುಪಡಿಸಿ, ನಾನು ಹೆಚ್ಚು ಮಾಡಲು ಸಾಧ್ಯವಿಲ್ಲ, ಏಕೆಂದರೆ ನಾನು ಇನ್ನೊಂದು ತಂಡಕ್ಕೆ ಸಹಾಯ ಮಾಡಲು ಬಂದರೆ ನಮ್ಮ ಅಭಿಮಾನಿಗಳು ಹೇಗೆ ಭಾವಿಸುತ್ತಾರೆ ಎಂದು ಒಮ್ಮೆ ಊಹಿಸಿ" ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ ಕ್ಯಾಪ್ಟನ್ ಕೂಲ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.