Vegetable Price Hike : ರಾಜ್ಯದ ಜನತೆಗೆ ಬಿಗ್ ಶಾಕ್ : ತರಕಾರಿಗಳ ಬೆಲೆ ಏರಿಕೆ!

ಈರುಳ್ಳಿ, ಬೀನ್ಸ್, ಕ್ಯಾರೆಟ್ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ

Last Updated : Jun 24, 2021, 10:03 AM IST
  • ಅನ್ ಲಾಕ್ ಖುಷಿಯಲ್ಲಿದ್ದ ಜನತೆಗೆ ಇದೀಗ ಬೆಲೆ ಏರಿಕೆಯ ಬಿಗ್ ಶಾಕ್
  • ಈರುಳ್ಳಿ, ಬೀನ್ಸ್, ಕ್ಯಾರೆಟ್ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ
  • ತರಕಾರಿಗಳ ಬೆಲೆಗಳು ಗಗನಕ್ಕೇರಿರುವುದರಿಂದ ಜನ ತತ್ತರಿಸಿ ಹೋಗಿದ್ದಾರೆ
Vegetable Price Hike : ರಾಜ್ಯದ ಜನತೆಗೆ ಬಿಗ್ ಶಾಕ್ : ತರಕಾರಿಗಳ ಬೆಲೆ ಏರಿಕೆ! title=

ಬೆಂಗಳೂರು : ಅನ್ ಲಾಕ್ 2.O ಖುಷಿಯಲ್ಲಿದ್ದ ಜನತೆಗೆ ಇದೀಗ ಬೆಲೆ ಏರಿಕೆಯ ಬಿಗ್ ಶಾಕ್ ಎದುರಾಗಿದ್ದು, ತರಕಾರಿ ಬೆಲೆಗಳು ಗಗನಕ್ಕೇರುತ್ತಿವೆ. ಮೊದಲೇ ದುಡಿಮೆ ಇಲ್ಲದೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿರುವ ಬೆನ್ನಲ್ಲೇ ಇದೀಗ ತರಕಾರಿಗಳ ಬೆಲೆಗಳು ಗಗನಕ್ಕೇರಿರುವುದರಿಂದ ಜನ ತತ್ತರಿಸಿ ಹೋಗಿದ್ದಾರೆ.

ರಾಜಧಾನಿಯಲ್ಲಿ ಅನ್ ಲಾಕ್(Unlock 2.O) ಗೂ ಮುನ್ನ ಇದ್ದ ತರಕಾರಿಗಳ ಬೆಲೆ ಇದೀಗ ದುಪ್ಪಟ್ಟು ಆಗಿದೆ. ಈರುಳ್ಳಿ, ಬೀನ್ಸ್, ಕ್ಯಾರೆಟ್ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. 1 ಕೆಜಿಗೆ 40 ರೂ. ಇದ್ದ ಹುರುಳಿಕಾಯಿ 70-80 ರೂ.ಗೆ ತಲುಪಿದ್ದು, ಕ್ಯಾರೆಟ್ 20 ರೂ. ಇದ್ದದ್ದು 60 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ : SSLC Exam 2021 : ಶಿಕ್ಷಣ ಇಲಾಖೆಯಿಂದ 'SSLC ಪರೀಕ್ಷೆಗೆ 'ಮಾರ್ಗಸೂಚಿ ಬಿಡುಗಡೆ' : ಇಲ್ಲಿದೆ ಮಾಹಿತಿ

ಆಲೂಗಡ್ಡೆ 20 ರೂ. ಇದ್ದದ್ದು, ಇದೀಗ 30 ರೂ.ಆಗಿದೆ. ನವಿಲುಕೋಸು 20 ರೂ. ಇದ್ದದ್ದು 40 ರೂ. ಇದೆ ಬೀಟ್ರೂಟ್ 20 ರೂ. ಯಿಂದ 30 ರೂ.ಗೆ ಏರಿಕೆಯಾಗಿದೆ. ಕೆಜಿ ಈರುಳ್ಳಿ(Onion Price) 20 ರೂ. ಇದ್ದದ್ದು ಇದೀಗ 30-35 ರೂ. ಗೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಅನ್ ಲಾಕ್ ಖುಷಿಯಲ್ಲಿದ್ದ ಗ್ರಾಹಕರಿಗೆ ಇದೀಗ ತರಕಾರಿ ಬೆಲೆ ಏರಿಕೆ ಬಿಗ್ ಶಾಕ್ ನೀಡಿದೆ.

ಇದನ್ನೂ ಓದಿ : Govt Employees : ರಾಜ್ಯ ಸರ್ಕಾರಿದಿಂದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News