ಕನ್ನಡ ಭಾಷೆ ಉಲ್ಲಂಘಿಸಿದರೆ ಬೀಳುತ್ತೆ ದಂಡ! ಸರ್ಕಾರದಿಂದ ಐತಿಹಾಸಿಕ ನಿರ್ಧಾರ

ಪ್ರತಿಯೊಂದು ಹಂತದಲ್ಲೂ ಕನ್ನಡವನ್ನು ಅನುಷ್ಠಾನ ಮಾಡದಿದ್ದರೆ ದಂಡ ವಿಧಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

Written by - Channabasava A Kashinakunti | Last Updated : Sep 24, 2022, 05:07 PM IST
  • ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು
  • ಜಾಹಿರಾತಿನಲ್ಲಿ ಕನ್ನಡ ಕಡ್ಡಾಯ
  • ಕನ್ನಡವನ್ನು ಅನುಷ್ಠಾನ ಮಾಡದಿದ್ದರೆ ದಂಡ
ಕನ್ನಡ ಭಾಷೆ ಉಲ್ಲಂಘಿಸಿದರೆ ಬೀಳುತ್ತೆ ದಂಡ! ಸರ್ಕಾರದಿಂದ ಐತಿಹಾಸಿಕ ನಿರ್ಧಾರ title=

ಬೆಂಗಳೂರು : ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು, ಜಾಹಿರಾತಿನಲ್ಲಿ ಕನ್ನಡ ಕಡ್ಡಾಯ, ಉನ್ನತ ಶಿಕ್ಷಣದಲ್ಲಿ  ಮಾತೃ ಭಾಷೆಗೆ  ಆದ್ಯತೆ, ಪ್ರತಿಯೊಂದು ಹಂತದಲ್ಲೂ ಕನ್ನಡವನ್ನು ಅನುಷ್ಠಾನ ಮಾಡದಿದ್ದರೆ ದಂಡ ವಿಧಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಶ್ರೀರಾಮುಲು,

ಕನ್ನಡಕ್ಕಾಗಿ ಕೈ ಎತ್ತು 
ನಿನ್ನ ಕೈ ಕಲ್ಪವೃಕ್ಷವಾಗುವುದು
ಕನ್ನಡಕ್ಕಾಗಿ ಧ್ವನಿ ಎತ್ತು
ಅಲ್ಲಿ ಪಾಂಚಜನ್ಯ ಮೊಳಗುವುದು
ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕು
ಅದೇ ಗೋವರ್ಧನಗಿರಿಯಾಗುವುದು.

ಇದನ್ನೂ ಓದಿ : ಬಿಜೆಪಿ ಲಿಂಗಾಯತ ವಿರೋಧಿ ಮಾತ್ರವಲ್ಲ, ಇಡೀ ಮನುಕುಲದ ವಿರೋಧಿ: ಕಾಂಗ್ರೆಸ್

ಕನ್ನಡದ ಬಗೆಗಿನ ಅಭಿಮಾನ ಮೊಳೆಯುವಂತೆ ಮಾಡಲು ರಸಋಷಿ ಕುವೆಂಪು ಅವರು ಆಡಿದ ಮಾತುಗಳಿವು. ಈ ಕವಿ ವಾಣಿಗೆ ಪೂರಕ ಎಂಬಂತೆ, ನಮ್ಮ ಸರ್ಕಾರ ಕನ್ನಡವನ್ನು ಪ್ರತಿಯೊಂದು ಆಡಳಿತ ಹಂತದಲ್ಲಿ ಅನುಷ್ಠಾನ ಮಾಡಲು  ಮುಂದಾಗಿದೆ.

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು, ಜಾಹಿರಾತಿನಲ್ಲಿ ಕನ್ನಡ ಕಡ್ಡಾಯ, ಉನ್ನತ ಶಿಕ್ಷಣದಲ್ಲಿ  ಮಾತೃ ಭಾಷೆಗೆ  ಆದ್ಯತೆ, ಪ್ರತಿಯೊಂದು ಹಂತದಲ್ಲೂ ಕನ್ನಡವನ್ನು ಅನುಷ್ಠಾನ ಮಾಡದಿದ್ದರೆ ದಂಡ ವಿಧಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ

ಕನ್ನಡ ಜಾರಿ, ಕನ್ನಡದ ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿ ಪ್ರಾಕಾರ ರಚನೆ, ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ಮೀಸಲು ಮಾಡಲೇಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತಾಂತ್ರಿಕ  ಹಾಗೂ ವೃತ್ತಿ  ಶಿಕ್ಷಣದಲ್ಲಿ ಮೀಸಲು ಸೌಲಭ್ಯ ಸಿಗಲಿದೆ.

ನಿಯಮ ಉಲ್ಲಂಘಿಸಿದ ವ್ಯಕ್ತಿ, ಕಾರ್ಖಾನೆ, ಸಂಘಟನೆಗಳಿಗೆ ಮೊದಲಿಗೆ 5 ಸಾವಿರ, 2ನೇ ಹಂತದಲ್ಲಿ 10 ಸಾವಿರ, 3ನೇ ಹಂತದಲ್ಲಿ 20 ಸಾವಿರ ದಂಡ ವಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದ್ದಾರೆ. ಇದುವರೆಗೂ ಆಡಳಿತ ನಡೆಸಿದವರು ಕನ್ನಡ ಎಂದರೆ ಕೇವಲ ಅನುಷ್ಠಾನ ಕಡ್ಡಾಯ ಎಂಬ  ಹೇಳಿಕೆಗೆ ಸೀಮೀತವಾಗಿದ್ದರು. 

ಇದನ್ನೂ ಓದಿ : ಬಂಧಿತ PFI ಪ್ರಮುಖರ ಮನೆಯಲ್ಲಿತ್ತು ಸಾವರ್ಕರ್ ಪುಸ್ತಕ : ಕೆಲ ರಾಜಕಾರಣಿಗಳ ಜೊತೆ ಇತ್ತಂತೆ ನಂಟು‌‌

ನಮ್ಮ ಜನಪ್ರಿಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇದಕ್ಕಾಗಿಯೇ ವಿಧೇಯಕ ತಂದಿರುವುದು ದಾಖಲೆಯೇ ಸರಿ. ಇದಕ್ಕಾಗಿ  ನನ್ನ ಸಂಪುಟದ ಸಚಿವರು, ಶಾಸಕರು ಹಾಗೂ ನಮ್ಮ ಪಕ್ಷದ ಎಲ್ಲ ಮುಖಂಡರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News