ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಲಾಗಿದೆ. ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆ ರಾಜ್ಯ ಸರ್ಕಾರ ಮಾಡಿದೆ.
ಕಾಂಗ್ರೆಸ್ ನಾಯಕರು ಅಪ್ರಚಾರ ಮಾಡುತ್ತಾರೆ. ಅವರ ಅಪ್ರಚಾರವನ್ನು ಯಾರೂ ನಂಬಬೇಡಿ ಎಂದು ಸಿರುಗುಪ್ಪ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಬಿ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
ಜಿಂದಾಲ್ ಕಂಪನಿ ಯಲ್ಲಿರುವ ಹಯಾತ್ ಹೋಟೆಲ್ ನಲ್ಲಿ ಕೋರ ಕಮೀಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕೋರ ಕಮೀಟಿ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಸಚಿವರು ಭಾಗಿಯಾಗಲಿದ್ದಾರೆ. ಸಂಡೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯ ವಿಧಾನ ಸಭೆಯ ಚುನಾವಣೆ ಹಿನ್ನಲೆ ಅಮಿತ್ ಶಾ ಕೋರ ಕಮೀಟಿ ಸಭೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ಡಿಪೋ ಚಾಲಕ ಕಂ ನಿರ್ವಾಹಕರಾಗಿದ್ದ ಉಮೇಶ್ ಎಂಬುವವರು ಬಸ್ ಚಾಲನೆ ಮಾಡುವ ವೇಳೆ ಅಪಘಾತ ಮೃತ್ತಪಟ್ಟಿದ್ದರು. ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮೂಲಕ ಮೃತ ಉಮೇಶ್ ಕುಟುಂಬ ಕರೆಸಿ ಸಾರಿಗೆ ಸಚಿವ ಶ್ರೀರಾಮುಲು ಅವರು 1 ಕೋಟಿ ರೂ. ಚೆಕ್ ವಿತರಣೆ ಮಾಡಿದರು.
ತಮ್ಮ 1 ವಾರದ ಪ್ರವಾಸದ ಭಾಗವಾಗಿ ನಾಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂಚರಿಸಲಿದ್ದಾರೆ. ಪಕ್ಷ ಘೋಷಣೆಗೂ ಮುನ್ನ ರೆಡ್ಡಿ ರಾಜ್ಯದ ಮಠ-ಮಂದಿರಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಪ್ರತಿಯೊಂದು ಹಂತದಲ್ಲೂ ಕನ್ನಡವನ್ನು ಅನುಷ್ಠಾನ ಮಾಡದಿದ್ದರೆ ದಂಡ ವಿಧಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರಿಂದ ದುಪ್ಪಟ್ಟು ಟಿಕೆಟ್ ವಸೂಲಿ ಆರೋಪ ಹಿನ್ನೆಲೆ ಸಾರಿಗೆ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಗೋವಾದಿಂದ ಹೈದರಾಬಾದ್ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಬೆಂಕಿಗಾಹುತಿ ಆಗಿದೆ. ಕಲಬುರ್ಗಿಯಲ್ಲಿ ನಡೆದ ಘಟನೆಯಲ್ಲಿ ಏಳು ಜನ ಮೃತ ಪಟ್ಟಿದ್ದಾರೆ ಈ ಪೈಕಿ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ವಿವರಿಸಿದರು.
ಪಿಎಸ್ಐ ಅಕ್ರಮ ನೇಮಕಾತಿಯನ್ನ ಬಗ್ಗೆ ನಾವೇ ಕಂಡುಹಿಡಿದಿದ್ದು. ಕಾಂಗ್ರೇಸ್ ನವರೇನು ಕಂಡಿಡಿದಿಲ್ಲ, ಅವರು ಅಧಿಕಾರದಲ್ಲಿದ್ದಾಗ ಈ ರೀತಿ ತನಿಖೆ ಮಾಡಿಲ್ಲ. ನಾವೇ ಕಂಡುಹಿಡಿದು, ನಾವೇ ತನಿಖೆ ಮಾಡ್ತಿದ್ದೇವೆ. ನಾವು ಮಾಡಿದ ತನಿಖೆಯನ್ನ ಅವರು ಮಾಡಿದ್ದೇವೆ ಎನ್ನುವುದಕ್ಕೆ ಅರ್ಥ ಇಲ್ಲ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.