ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಭರದಿಂದ ಸಾಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳೂ ರಾಜ್ಯಾದ್ಯಂತ ಯಾತ್ರೆ, ಸಮಾವೇಶಗಳಲ್ಲಿ ಫುಲ್ ಸೀರಿಯಸ್ ಆಗಿ ಪ್ರಚಾರ ಕೈಗೊಂಡಿವೆ. ಆದರೆ ಬಿಜೆಪಿ ಮಾತ್ರ ತನ್ನ ಸೀರಿಯಸ್ ಪ್ರಚಾರಕ್ಕೆ ಒಂದಿಷ್ಟು ಕಾಮಿಡಿ ಟಚ್ ನೀಡಿ ಪ್ರಚಾರ ಆರಂಭಿಸಿದೆ.
ಕಾಂಗ್ರೆಸ್ ಜನಾಶಿರ್ವಾದ ಯಾತ್ರೆ, ಬಿಜೆಪಿ ಪರಿವರ್ತನಾ ಯಾತ್ರೆ, ಜೆಡಿಎಸ್'ನ ವಿಕಾಸ ವಾಹಿನಿ ಯಾತ್ರೆಗಳು ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿದ್ದರೆ, ಬಿಜೆಪಿ ತನ್ನ ಬಹಿರಂಗ ಸಮಾವೇಶಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ರೀತಿಯಲ್ಲಿ ಪ್ರಚಾರ ಆರಂಭಿಸಿದೆ. ಇದುವರೆಗೂ ಆಡಳಿತ ಪಕ್ಷ ವೈಫಲ್ಯಗಳನ್ನು ಸಮಾವೇಶಗಳಲ್ಲಿ ಎತ್ತಿ ಹಿಡಿಯುತ್ತಿದ್ದ ಬಿಜೆಪಿ, ಇದೀಗ ತನ್ನ ಟ್ವಿಟರ್ ಖಾತೆಯಲ್ಲಿ 'ತರ್ಲೆ ಟಾಮಿ' ಎಂಬ ಹಾಸ್ಯಭರಿತ ವೀಡಿಯೋ ಒಂದನ್ನು ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ನ ಆಡಳಿತದ ದುರ್ಬಳಕೆ ಬಗ್ಗೆ ಸಾಮಾನ್ಯ ಜನ ಹೇಗೆ ಆಲೋಚಿಸುತ್ತಾರೆ ಎಂಬುದನ್ನು `ತರ್ಲೆ ಟಾಮಿ' ತಿಳಿಸಿದ್ದಾನೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಲವು ಪ್ರಶ್ನೆ ಕೇಳುವ ಟಾಮಿ, ಅವರೇ ಆಡಿದ ಮಾತುಗಳನ್ನು ಆ ಪ್ರಶ್ನೆಗಳಿಗೆ ಹೊಂದಿಸಿ, ಅಣಕಿಸಲಾಗಿದೆ. ಆ ವಿಡಿಯೋ ನೀವೂ ನೋಡಿ...
Tarle Tommy is here to not just tickle your funny bone, but to raise awareness of what common Kannadigas think of Congress's misgovernance in Karnataka. pic.twitter.com/wjkVs0gFvL
— BJP Karnataka (@BJP4Karnataka) February 21, 2018