WATCH: ಬೆಂಗಳೂರಿನಲ್ಲಿ ರನ್ ವೇಯಿಂದ ಹುಲ್ಲಿನ ಪ್ರದೇಶಕ್ಕೆ ಇಳಿದ ಗೋ ಏರ್ ವಿಮಾನ..!

ವಿಮಾನದಲ್ಲಿ ಸುಮಾರು 180 ಪ್ರಯಾಣಿಕರನ್ನು ಹೊಂದಿರುವ ಗೋ ಏರ್ ವಿಮಾನವು ಸೋಮವಾರದಂದು ವಿಮಾನ ನಿಲ್ದಾಣದ ರನ್‌ವೇಯಿಂದ ಬದಿಯಲ್ಲಿರುವ ಹುಲ್ಲಿನಿಂದ ಆವೃತವಾದ ಭೂಪ್ರದೇಶಕ್ಕೆ ಇಳಿದಿರುವ ಘಟನೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

Updated: Nov 15, 2019 , 01:12 PM IST
 WATCH: ಬೆಂಗಳೂರಿನಲ್ಲಿ ರನ್ ವೇಯಿಂದ ಹುಲ್ಲಿನ ಪ್ರದೇಶಕ್ಕೆ ಇಳಿದ ಗೋ ಏರ್ ವಿಮಾನ..!
Photo courtesy: Twitter

ನವದೆಹಲಿ: ವಿಮಾನದಲ್ಲಿ ಸುಮಾರು 180 ಪ್ರಯಾಣಿಕರನ್ನು ಹೊಂದಿರುವ ಗೋ ಏರ್ ವಿಮಾನವು ಸೋಮವಾರದಂದು ವಿಮಾನ ನಿಲ್ದಾಣದ ರನ್‌ವೇಯಿಂದ ಬದಿಯಲ್ಲಿರುವ ಹುಲ್ಲಿನಿಂದ ಆವೃತವಾದ ಭೂಪ್ರದೇಶಕ್ಕೆ ಇಳಿದಿರುವ ಘಟನೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

ಎ 320 ಜೆಟ್ ಸೋಮವಾರದಂದು ನಾಗ್ಪುರದಿಂದ ಹೊರಟು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ನಿರ್ಧರಿಸಲಾಗಿತ್ತು, ಆದರೆ, ಕೆಳಗೆ ಮುಟ್ಟಿದ ನಂತರ, ವಿಮಾನವು ನೇರವಾಗಿ ಏರ್‌ಸ್ಟ್ರಿಪ್‌ನಿಂದ ಮತ್ತು ಪಕ್ಕದ ಹುಲ್ಲಿನ ಪ್ರದೇಶದಲ್ಲಿ ಬಂದು ಇಳಿದಿದೆ.ಅದೃಷ್ಟವಶಾತ್ ವಿಮಾನದಲ್ಲಿರುವ ಪ್ರಯಾಣಿಕರೆಲ್ಲರೂ ಕೂಡ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. 

ಗೋ ಏರ್ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದ ಸುತ್ತ ಸುತ್ತುತ್ತಿದ್ದರೂ, ಹವಾಮಾನ ವೈಪರೀತ್ಯದಿಂದಾಗಿ ಇಳಿಯಲು ಸಾಧ್ಯವಾಗಲಿಲ್ಲ, ಮತ್ತು ನಂತರ ಹೈದರಾಬಾದ್‌ಗೆ ತೆರಳಿ ಅಲ್ಲಿ ಸುರಕ್ಷಿತವಾಗಿ ಇಳಿಯಿತು. ಈಗ ಈ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಈಗ ತಾವು ಪಾರಾಗಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈಗ ಈ ಘಟನೆ ವಿಚಾರವಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.