ಧಾರವಾಡ : ಅಂತರರಾಷ್ಟ್ರೀಯ ನೀರಾವರಿ ಮತ್ತು ಒಳಚರಂಡಿ ಮಂಡಳಿ (ಐಸಿಐಡಿ) ನೀರಾವರಿ ನಿರ್ವಹಣೆ, ಪ್ರವಾಹ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಉತ್ತೇಜಿಸಲು ವೈಜ್ಞಾನಿಕ ಹಾಗೂ ತಾಂತ್ರಿಕ ಜಾಗೃತಿ ಮೂಡಿಸುವ ಜಾಗತಿಕ ಮಟ್ಟದ ಸಂಸ್ಥೆಯಾಗಿದೆ ಎಂದು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ವಿವಿಧ ವಿಭಾಗಗಳ ತಜ್ಞರನ್ನು ಐಸಿಐಡಿ ಒಗ್ಗೂಡಿಸುತ್ತದೆ. ಪ್ರಸ್ತುತ, ಐಸಿಐಡಿ ಸದಸ್ಯತ್ವ ಜಾಲವು ಪ್ರಪಂಚದ ನೀರಾವರಿ ಪ್ರದೇಶದ ಶೇ. 90 ಕ್ಕಿಂತ ಹೆಚ್ಚು ಆವರಿಸಿದೆ. ಆಫ್ರಿಕಾ, ಏಷ್ಯಾ, ಅಮೇರಿಕಾ ಮತ್ತು ಯುರೋಪ್ ಪ್ರತಿನಿಧಿಸುವ ಪ್ರಾದೇಶಿಕ ಗುಂಪುಗಳು ನಿರ್ದಿಷ್ಟ ಪ್ರದೇಶಗಳಿಗೆ ಸಂಬಂಧಿಸಿದ ಚಟುವಟಿಕೆಯನ್ನು ಕೈಗೊಳ್ಳಲು ಟಾಸ್ಕ್ ಪೋರ್ಸ್ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.
ವಿಶ್ವ ನೀರಾವರಿ ವೇದಿಕೆಯಲ್ಲಿ ಜಾಗತಿಕ, ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಚರ್ಚಿಸಲು ಪ್ರಾದೇಶಿಕ ಸಮ್ಮೇಳನಗಳು, ಮಹಾ ಅಧಿವೇಶನ, ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಅಂತರರಾಷ್ಟ್ರೀಯ ಸಹಕಾರಕ್ಕಾಗಿ ತ್ರೈವಾರ್ಷಿಕ ಕಾಂಗ್ರೆಸ್‍ನಲ್ಲಿ ಜಾಗತಿಕ ತಜ್ಞರ ಉಪನ್ಯಾಸ, ಕೃಷಿ ನೀರಿನ ನಿರ್ವಹಣೆಯಲ್ಲಿ ಯುವ ವೃತ್ತಿಪರರನ್ನು ಪ್ರೊತ್ಸಾಹಿಸುವುದು. ತಜ್ಞರು ತಮ್ಮ ಸೇವೆಗಳು ಮತ್ತು ಪರಿಣತಿಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯದ ಜಲ ಸಂಪನ್ಮೂಲ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯು ಅಂತರರಾಷ್ಟ್ರೀಯ ಮಂಡಳಿ ಇವರಿಂದ ವಾಟ್ಸೇವ್ ಕರ್ನಾಟಕದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ (ಪಿಐಎಮ್)ನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಕೊಂಡ ಕ್ರಮಗಳನ್ನು ಗುರುತಿಸಿ 2024 ರ ಪ್ರಶಸ್ತಿಗೆ ಉನ್ನತ ಮಟ್ಟದ ತೀರ್ಪುಗಾರರ ಸಮಿತಿಯಿಂದ ಆಯ್ಕೆಯಾಗಿದೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಪ್ಟೆಂಬರ್ 3, 2024 ರಂದು ನಡೆದ 75ನೇ ಆಡಳಿತ ಕಾರ್ಯಕಾರಿಣಿ ಸಮಿತಿ (ಐ.ಇ.ಸಿ) ಅಧಿವೇಶನ ಮತ್ತು 9ನೇ ಏಷಿಯನ್ ಪ್ರಾದೇಶಿಕ ಸಮ್ಮೇಳನ ಸಮಾರಂಭದಲ್ಲಿ ಐಸಿಐಡಿ ಅಧ್ಯಕ್ಷರಾದ ಡಾ. ಮಾರ್ಕೊ ಆರ್ಸಿಯೆರಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ವಾಲ್ಮಿ ಸಂಸ್ಥೆಯ ನಿರ್ದೇಶಕರಾದ ಡಾ. ರಾಜೇಂದ್ರ ಪೊದ್ದಾರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಆಯೋಗದ ಸದಸ್ಯತ್ವವು ತಮ್ಮ ದೇಶಗಳನ್ನು ಪ್ರತಿನಿಧಿಸುವ ರಾಷ್ಟ್ರೀಯ ಸಮಿತಿಯ (ಓಅ) ಪ್ರತಿನಿಧಿಗಳು ಮತ್ತು ಅಂತರಾಷ್ಟ್ರೀಯ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಧಾರವಾಡದ ವಾಲ್ಮಿ ಸಂಸ್ಥೆಯು 1985 ರಲ್ಲಿ ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕಿನ ನಿರ್ದೇಶನ ಹಾಗೂ ಸಹಕಾರಗಳೊಂದಿಗೆ ಕರ್ನಾಟಕದ ಜಲಸಂಪನ್ಮೂಲ ಇಲಾಖೆ ಅಡಿಯಲ್ಲಿ ಧಾರವಾಡದ ವಾಲ್ಮಿ ಸಂಸ್ಥೆಯು ಸ್ಥಾಪನೆಯಾಗಿದೆ. ಬದುಕಿನ ಮೂಲ ಸಂಪನ್ಮೂಲಗಳಾದ ಜಲ, ನೆಲ ಅಭಿವೃದ್ಧಿ, ಸಂರಕ್ಷಣೆ, ಹಾಗೂ ನಿರ್ವಹಣೆ ವಿಷಯಗಳಲ್ಲಿ ಭಾಗೀದಾರರಾದ ರೈತರ ಮತ್ತು ಅಭಿಯಂತರರ ಸಾಮಥ್ರ್ಯವರ್ಧನೆಯಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯು ತರಬೇತಿ, ಸಂಶೋಧನೆ, ಪ್ರಾತ್ಯಕ್ಷಿಕೆ, ಪ್ರಕಟಣೆ, ಕ್ಷೇತ್ರ ಭೇಟಿ, ಒಡಂಬಡಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ನೀರಾವರಿ ನಿರ್ವಹಣಾ ಸುಧಾರಣೆಗಾಗಿ ಸಂಸ್ಥೆಯು ಕರ್ನಾಟಕದ ಮುಂಚೂಣಿ ಕಾರ್ಯಕ್ರಮವಾದ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಾಗೃತಿ ಮೂಡಿಸುತ್ತಿದೆ.
ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ: ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಜಾಗತಿಕ ಹಾಗೂ ರಾಷ್ಟ್ರೀಯ ಮನ್ನಣೆ ಪಡೆದ ಪರಿಕಲ್ಪನೆಯಾಗಿದ್ದು, ಭಾರತದ ಅನೇಕ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ 2000 ಇಸ್ವಿಯಿಂದ ರೈತರ ಸಹಭಾಗಿತ್ವದ ನೀರಾವರಿ ಪದ್ದತಿ ಜಾರಿಯಲ್ಲಿದ್ದು, ಈ ಪದ್ಧತಿ ಅಡಿಯಲ್ಲಿ ಸಾವಿರಾರು ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದೆ. ಇವುಗಳ ಮೂಲಕ ಸಮರ್ಥ, ಸಮಾನ ಮತ್ತು ಸುಸ್ಥಿರ ನೀರಾವರಿಯನ್ನು ಸಾಧಿಸಬಹುದಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಬಂಡವಾಳ ಹೂಡಿ ಅದ್ಭುತ ಮೂಲಭೂತ ನೀರಾವರಿ ಸೌಕರ್ಯವನ್ನು ನಿರ್ಮಿಸಲಾಗಿದೆ. ಇದೀಗ ಬೇಕಾಗಿರುವುದು ರೈತ ಇಂಜನೀಯರಗಳ ಸಹಕಾರ ಮತ್ತು ಸಹಭಾಗಿತ್ವ. ರೈತ ಇಂಜನೀಯರಗಳ ಜ್ಞಾನ, ಕೌಶಲ್ಯ ಹಾಗೂ ಧೋರಣೆಗಳ ಬಲವರ್ಧನೆ ಮೂಲಕ ವಾಲ್ಮಿ ಸಂಸ್ಥೆಯು ಸಹಭಾಗಿತ್ವದ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅನುμÁ್ಠನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಾಲ್ಮಿ ಸಂಸ್ಥೆಯು ಮೂಲತಃ ಸಾಮಥ್ರ್ಯವರ್ಧನೆ ಹಾಗೂ ನೀತಿ ನಿರೂಪಕ ಸಂಸ್ಥೆಯಾಗಿದೆ. ವೈಜ್ಞಾನಿಕ ಜಲ ಮತ್ತು ನೆಲ ನಿರ್ವಹಣೆ ತರಬೇತಿ ಮತ್ತು ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರಮುಖವಾಗಿ ಅಖಿಲ ಭಾರತ ವಾಲ್ಮಿಗಳ ಸಮ್ಮೇಳನ, ಜಲ ಸಂಪನ್ಮೂಲ ಹಾಗೂ ಹವಾಮಾನ ವೈಪರೀತ್ಯ ಕುರಿತ ಅಂತರಾಷ್ಟ್ರೀಯ ಸಮ್ಮೇಳನ, ಕಾರ್ಯಾಗಾರಗಳು, ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ಇಂಜಿನೀಯರ್‍ಗಳಿಗೆ ಜಲ, ನೆಲ, ಬೆಳೆ ನಿರ್ವಹಣೆ ಕುರಿತು ಒಂದು ತಿಂಗಳ ತರಬೇತಿ ಹಾಗೂ ನೂರಾರು ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರಿಗೆ ಸೂಕ್ಷ್ಮ ನೀರಾವರಿ ಮಹತ್ವವನ್ನು ತಿಳಿಸಿಕೊಡಲಾಗಿದೆ. ಅನೇಕ ಹಳ್ಳಿಗಳಲ್ಲಿ ನರೇಗಾ ಮೂಲಕ ಕಾಲುವೆ ಸ್ವಚ್ಛತೆಗೆ ಪ್ರೋತ್ಸಾಹ, ಸವಳು-ಜವಳು ನಿರ್ವಹಣೆಗಾಗಿ ಸಾಮಥ್ರ್ಯವರ್ಧನೆ ಕಾರ್ಯಕ್ರಮಗಳು, ರಾಜ್ಯದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ವೇತನಕ್ಕಾಗಿ ಸಮಗ್ರ ದತ್ತಾಂಶ (ಮಾಹಿತಿಯನ್ನು) ಕ್ರೋಢೀಕರಣ, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ತಲುಪಲು ಮುದ್ರಿತ, ಧ್ವನಿಮುದ್ರಿತ, ರೇಡಿಯೋ, ಯುಟ್ಯೂಬ್, ಫೆÇೀನ್ ಇನ್ ಕಾರ್ಯಕ್ರಮ, ದೂರದರ್ಶನ ಹಾಗೂ ಉಪಗ್ರಹ ಆಧಾರಿತ (ಸ್ಯಾಟ್‍ಕಾಂ) ಮಾಧ್ಯಮಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಸಂಸ್ಥೆಯು ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಅನುಷ್ಠಾನಗೊಂಡು ರಜತ ಮಹೋತ್ಸವವನ್ನು ಆಚರಿಸಬೇಕಾದ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಶೃಂಗ ಮಹಾಮಂಡಳ ರಚನೆಯಲ್ಲಿ ಸಹಯೋಗ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಧಾರವಾಡದ ವಾಲ್ಮಿ ಸಂಸ್ಥೆಯ ನಿರಂತರ ಪ್ರಯತ್ನದಿಂದ ರೈತರಲ್ಲಿ ವೈಜ್ಞಾನಿಕ ನೀರು ಮತ್ತು ಮಣ್ಣಿನ ನಿರ್ವಹಣೆಯಿಂದ ನೀರಿನ ಸಮರ್ಪಕ ಬಳಕೆ ಹಾಗೂ ಹೆಚ್ಚಿನ ಯೋಜನಾ ಪ್ರದೇಶಕ್ಕೆ ನೀರು ತಲುಪಿಸುವ ಪ್ರಯತ್ನ ಯಶಸ್ವಿಯಾಗುತ್ತಿದ್ದು, ಪ್ರತಿ ಹನಿ ನೀರಿನ ಸದುಪಯೋಗದಿಂದ ರೈತರ ಕೃಷಿ ಉತ್ಪಾದನೆ ಹೆಚ್ಚಾಗಿ ಆದಾಯವೂ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಪ್ರಶಸ್ತಿ ಲಭಿಸಿದ ಬಗ್ಗೆ ವಿಷಯವನ್ನು ಹಂಚಿಕೊಂಡು ವಾಲ್ಮಿ ಸಂಸ್ಥೆಗೆ ಸಹಾಯ, ಸಹಕಾರ, ಮಾರ್ಗದರ್ಶನ ನೀಡಿದ ರಾಜ್ಯದ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ವಾಲ್ಮೀ ಸಂಸ್ಥೆಯ ಅಧ್ಯಕ್ಷರು ಹಾಗೂ ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವಗುಪ್ತ, ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ, ಜಲ ಸಂಪನ್ಮೂಲ ಇಲಾಖೆ ಹಾಗೂ ವಾಲ್ಮಿ ಸಂಸ್ಥೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ನಾಡಿನ ಜನ ಪ್ರತಿನಿಧಿಗಳು ಮತ್ತು ಸಮಸ್ತ ರೈತ ಸಮುದಾಯಕ್ಕೆ, ವಿಶೇಷವಾಗಿ ನೀರು ಬಳಕೆದಾರರ ಸಹಕಾರಿ ಸಂಘಗಳ ಪದಾಧಿಕಾರಿಗಳಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.ಮಾಧ್ಯಮಗೊಷ್ಠಿಯಲ್ಲಿ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.