Ramesh Jarkiholi: ಮೂಲ-ವಲಸಿಗರ ಕಿತ್ತಾಟಕ್ಕೆ ಫುಲ್‌ ಸ್ಟಾಪ್‌ ಇಟ್ರಾ ರಮೇಶ್‌ ಜಾರಕಿಹೊಳಿ..!?

ನಮ್ಮ ತಂದೆಯವರು ಗೋವಾ ಚಳುವಳಿಯಲ್ಲಿ ಮೂರೂವರೆ ತಿಂಗಳು ಜೈಲಿನಲ್ಲಿದ್ದರು. ಮೊದಲಿಗೆ ದೀಪದ ಚಿತ್ರ ಇತ್ತು. ಅನಿವಾರ್ಯ ಕಾರಣದಿಂದ ನಾವು ಕಾಂಗ್ರೆಸ್‌ಗೆ ಹೋಗಬೇಕಾಯ್ತು

Last Updated : Jan 10, 2021, 08:44 PM IST
  • ನಾವೂ ಓರಿಜನಲ್ ಜನಸಂಘ. ಚಿಕ್ಕವರಿದ್ದಾಗ ನಾವು ಕರಿ ಟೋಪಿ ಹಾಕಿಕೊಳ್ಳುತ್ತಿದ್ದೇವು.
  • ನಮ್ಮ ತಂದೆ ಲಕ್ಷ್ಮಣ್‌ ಜಾರಕಿಹೊಳಿ ಅವರು ಸಂಘಟನೆಯ ಸಲುವಾಗಿ ಮೂರು ತಿಂಗಳು ಜೈಲಿನಲ್ಲಿದ್ದರು ಎಂದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ
  • ನಮ್ಮ ತಂದೆಯವರು ಗೋವಾ ಚಳುವಳಿಯಲ್ಲಿ ಮೂರೂವರೆ ತಿಂಗಳು ಜೈಲಿನಲ್ಲಿದ್ದರು. ಮೊದಲಿಗೆ ದೀಪದ ಚಿತ್ರ ಇತ್ತು. ಅನಿವಾರ್ಯ ಕಾರಣದಿಂದ ನಾವು ಕಾಂಗ್ರೆಸ್‌ಗೆ ಹೋಗಬೇಕಾಯ್ತು
Ramesh Jarkiholi: ಮೂಲ-ವಲಸಿಗರ ಕಿತ್ತಾಟಕ್ಕೆ ಫುಲ್‌ ಸ್ಟಾಪ್‌ ಇಟ್ರಾ ರಮೇಶ್‌ ಜಾರಕಿಹೊಳಿ..!? title=

ಬೆಳಗಾವಿ: ನಾವೂ ಓರಿಜನಲ್ ಜನಸಂಘ. ಚಿಕ್ಕವರಿದ್ದಾಗ ನಾವು ಕರಿ ಟೋಪಿ ಹಾಕಿಕೊಳ್ಳುತ್ತಿದ್ದೇವು. ನಮ್ಮ ತಂದೆ ಲಕ್ಷ್ಮಣ್‌ ಜಾರಕಿಹೊಳಿ ಅವರು ಸಂಘಟನೆಯ ಸಲುವಾಗಿ ಮೂರು ತಿಂಗಳು ಜೈಲಿನಲ್ಲಿದ್ದರು ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಜಿಲ್ಲೆಯ ನಾವಗೆ ಗ್ರಾಮದಲ್ಲಿ ಹಿಂದುತ್ವದ ಏಕತೆಗಾಗಿ ಹಿಂದೂ ಕಾರ್ಯಕರ್ತರ 24ನೇ ವರ್ಷದ ಸ್ನೇಹ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಘ ಪರಿವಾರದಿಂದ ಬಂದಿರುವಂಥ ಕುಟುಂಬ ಜಾರಕಿಹೊಳಿ ಕುಟುಂಬ(Jarkiholi Family). ನಮ್ಮ ತಂದೆ ಜಗನ್ನಾಥ್ ಜೋಶಿ ಅವರ ಫಾಲೋವರ್ಸ್‌ ಎಂದು ಹೇಳಿದರು.

'ತಳಸಮುದಾಯಗಳ ಘನತೆಯ ಬದುಕಿಗೆ ಗುಣಾತ್ಮಕ ಶಿಕ್ಷಣದೆಡೆಗೆ ನಮ್ಮ ನಡಿಗೆ',

ನಮ್ಮ ತಂದೆಯವರು ಗೋವಾ ಚಳುವಳಿಯಲ್ಲಿ ಮೂರೂವರೆ ತಿಂಗಳು ಜೈಲಿನಲ್ಲಿದ್ದರು. ಮೊದಲಿಗೆ ದೀಪದ ಚಿತ್ರ ಇತ್ತು. ಅನಿವಾರ್ಯ ಕಾರಣದಿಂದ ನಾವು ಕಾಂಗ್ರೆಸ್‌ಗೆ ಹೋಗಬೇಕಾಯ್ತು. ಮತ್ತೇ ಸಂಘ ಪರಿವಾರಕ್ಕೆ ಮರಳಿ ಬಂದಿರುವ ಕಾರಣ ರಾಜ್ಯದ ಜನರಿಗೆ ಗೊತ್ತಿದೆ ಎಂದು ಅವರು ತಿಳಿಸಿದರು.

BJP: 'ಕಾಂಗ್ರೆಸ್‌ಗೆ ಕಾಡುತ್ತಿವೆಯಂತೆ ನಾಲ್ಕು ಶಾಪಗಳು'

ಬಿಜೆಪಿಯಲ್ಲಿ ಮೂಲ-ವಲಸಿಗರ ಕಿತ್ತಾಟ ನಡೆಯುತ್ತಿರುವ ವೇಳೆಯಲ್ಲಿ ರಮೇಶ್‌ ಜಾರಕಿಹೊಳಿ ಅವರ ಈ ಹೇಳಿಕೆ ಪಕ್ಷದ ಪಡಸಾಲೆಯಲ್ಲಿ ಮಹತ್ವ ಪಡೆದಿದೆ. ಇನ್ನು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಿದರೂ ಟಿಕೆಟ್ ಆಕಾಂಕ್ಷಿಗಳು ಯಾವುದೇ ಹಣದ ಆಮಿಷಕ್ಕೆ ಒಳಗಾಗಬಾರದು. ಈ ಬಗ್ಗೆ ಕೊಲ್ಲಾಪುರದ ಜ್ಯೋತಿಬಾ ದೇವಿಯ ಪಾದ ಮುಟ್ಟಿ ಆಣೆ ಮಾಡಬೇಕು ಎಂದು ಕರೆ ನೀಡಿದ್ದಾರೆ.

Laxmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್​ಗೆ 'ಬಿಗ್ ಶಾಕ್​' ನೀಡಲು ರಮೇಶ್​ ಜಾರಕಿಹೊಳಿ 'ಮೆಗಾ ಪ್ಲಾನ್'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News