ಮಹಾಮಾರಿ ಡೆಂಗ್ಯೂಗೆ ನವವಿವಾಹಿತೆ ಬಲಿ : ಕುಟುಂಬದಲ್ಲಿ ನೀರವ ಮೌನ

ರಾಜ್ಯದಲ್ಲಿ ಡೆಂಗ್ಯೂ ಪೀಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೆ ಹೊತ್ತಲ್ಲಿ ಕಳೆದ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ಮಾಹಾಮಾರಿಗೆ ಬಲಿಯಾಗಿರುವ ಘಟನೆ ನಡೆದಿದೆ.

Written by - Krishna N K | Last Updated : Oct 8, 2023, 12:37 PM IST
  • ಮಾಹಾಮಾರಿ ಡೆಂಗ್ಯೂಗೆ ನವವಿವಾಹಿತೆ ಬಲಿ.
  • ಮಧುರ ಡೆಂಗ್ಯೂಗೆ ಮೃತ ಪಟ್ಟ ನವ ವಿವಾಹಿತೆ.
  • ಮಧುರ ಕಳೆದ 6 ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು.
ಮಹಾಮಾರಿ ಡೆಂಗ್ಯೂಗೆ ನವವಿವಾಹಿತೆ ಬಲಿ : ಕುಟುಂಬದಲ್ಲಿ ನೀರವ ಮೌನ title=

ಶಿವಮೊಗ್ಗ : ಮಾಹಾಮಾರಿ ಡೆಂಗ್ಯೂಗೆ ನವವಿವಾಹಿತೆ ಬಲಿಯಾಗಿರುವ ಘಟನೆ ನಗರದಲ್ಲಿ ನಡೆದಿದ್ದು, ಕಳೆದ 6 ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಮಧುರ ಮೃತಪಟ್ಟಿದ್ದು, ಕುಟುಂಬ ಆಘಾತಕ್ಕೊಳಗಾಗಿದೆ.

ಮಧುರ (31) ಮೃತಪಟ್ಟ ಮಹಿಳೆ. ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು ಮಧುರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೆಳಗ್ಗೆ ಸಾಗರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಾಳಗುಪ್ಪದ ತಾಯಿ ಮನೆಗೆ ವಾಪಾಸ್ ಆಗಿದ್ದರು. ಸಂಜೆ ವೇಳೆ ಮತ್ತೆ ತಲೆ ನೋವು, ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: ಅತ್ತಿಬೆಲೆಯಲ್ಲಿ ಪಟಾಕಿ ದುರಂತ: ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆ..!

ನಂತರ ವೈದ್ಯರ ಸಲಹೆಯಂತೆ ಬೆಳಗ್ಗೆ 5 ಗಂಟೆಗೆ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸುವುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮಧುರ ಕಳೆದ 6 ತಿಂಗಳ ಹಿಂದಷ್ಟೆ ಖಾಸಗಿ ಕಂಪನಿ ಉದ್ಯೋಗಿ ಮಂಜುನಾಥ ಎಂಬುವವರೊಂದಿಗೆ ಇವರು ಸಪ್ತಪದಿ ತುಳಿದಿದ್ದರು.

ಇದೀಗ ಶಬರೀಶ ನಗರದಲ್ಲಿ ನೀರವಮೌನ ಆವರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಮಧ್ಯಾಹ್ನ ರಿಪ್ಪನ್‌ಪೇಟೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News