Astrology: ತುಂಬಾ ಅಸಡ್ಡೆ ಸ್ವಭಾವದವರಾಗಿರುತ್ತಾರಂತೆ ಈ 5 ರಾಶಿಯ ಜನ!

Astrology:  ಯಾವಾಗಲಾದರೂ ಕೆಲಸದಲ್ಲಿ ಸ್ವಲ್ಪ ಎಚ್ಚರ ತಪ್ಪುವುದು ಸಹಜ, ಆದರೆ ಪ್ರತಿ ಕೆಲಸದಲ್ಲೂ ನಿರ್ಲಕ್ಷ್ಯ ವಹಿಸುವುದು ನಿಮ್ಮ ಕೈಯಿಂದಲೇ ಅನೇಕ ತೊಂದರೆಗಳನ್ನು ಆಹ್ವಾನಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 5 ರಾಶಿಚಕ್ರ ಚಿಹ್ನೆಗಳ ಜನರು ತುಂಬಾ ಅಸಡ್ಡೆ ಸ್ವಾಭಾವದವರಾಗಿರುತ್ತಾರೆ ಎಂದು ಹೇಳಲಾಗುತ್ತದೆ.

Written by - Zee Kannada News Desk | Last Updated : Mar 9, 2022, 12:41 PM IST
  • ಈ 5 ರಾಶಿಗಳ ಜನರು ತುಂಬಾ ಅಸಡ್ಡೆ ಸ್ವಭಾವ ಹೊಂದಿರುತ್ತಾರೆ
  • ಇದರಿಂದ ವೈಯಕ್ತಿಕ ಜೀವನದಿಂದ ವೃತ್ತಿಜೀವನದವರೆಗೆ ಎಲ್ಲದರಲ್ಲೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
  • ಈ ಸ್ವಭಾವದಿಂದಲೇ ಅವರು ಹಲವು ಬಾರಿ ದೊಡ್ಡ ನಷ್ಟವನ್ನೂ ಅನುಭವಿಸಬೇಕಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ.
Astrology: ತುಂಬಾ  ಅಸಡ್ಡೆ ಸ್ವಭಾವದವರಾಗಿರುತ್ತಾರಂತೆ ಈ 5 ರಾಶಿಯ ಜನ! title=
Nature By Zodiac Signs

Astrology: ಸಾಮಾನ್ಯವಾಗಿ ನಾವು ಏನಾದರು ಕೆಲಸ ಹೇಳಿದಾಗ ಅಥವಾ ಏನನ್ನಾದರೂ ಮಾತನಾಡುವಾಗ ಕೆಲವರು ಅಸಡ್ಡೆಯಿಂದ ವರ್ತಿಸುವುದನ್ನು ಗಮನಿಸಿರಬಹುದು. ಇಂತಹವರು ತಮ್ಮ ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಿಲ್ಲ ಅಥವಾ ಅವರಿಗೆ ವಹಿಸಿದ ಯಾವುದೇ ಕೆಲಸವನ್ನು ಸಹ ಅವರು ಜವಾಬ್ದಾರಿಯುತವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ತಮ್ಮ ವೈಯಕ್ತಿಕ ಜೀವನದಿಂದ ಹಿಡಿದು ವೃತ್ತಿಜೀವನದವರೆಗೆ ಎಲ್ಲದರಲ್ಲೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಜ್ಯೋತಿಷ್ಯದಲ್ಲಿಯೂ ರಾಶಿಗನುಗುಣವಾಗಿ ಜನರ ಸ್ವಭಾವವನ್ನು ತಿಳಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 5 ರಾಶಿಚಕ್ರ ಚಿಹ್ನೆಗಳ ಜನರು ತುಂಬಾ ಅಸಡ್ಡೆ ಸ್ವಾಭಾವದವರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅವರ ಈ ಸ್ವಭಾವದಿಂದಲೇ ಅವರು ಹಲವು ಬಾರಿ ದೊಡ್ಡ ನಷ್ಟವನ್ನೂ ಅನುಭವಿಸಬೇಕಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ. ಅಂತಹ ರಾಶಿಗಳ ಬಗ್ಗೆ ತಿಳಿಯೋಣ.

ಮಿಥುನ ರಾಶಿ : ಮಿಥುನ ರಾಶಿಯ ಜನರು ಇಚ್ಛಾಶಕ್ತಿಯ ಒಡೆಯರು. ಅವರು ಪರಿಣಾಮಗಳ ಬಗ್ಗೆ ಯೋಚಿಸದೆ ಕೆಲಸ ಮಾಡುತ್ತಾರೆ ಮತ್ತು ಕೆಲವೊಮ್ಮೆ ಇದರಿಂದ ತೊಂದರೆಗೆ ಒಳಗಾಗುತ್ತಾರೆ. ಆದಾಗ್ಯೂ, ಜನರು ಅವರ ಹರ್ಷಚಿತ್ತದ ಸ್ವಭಾವ ಮತ್ತು ಸ್ನೇಹಪರ ಸ್ವಭಾವವನ್ನು ತುಂಬಾ ಇಷ್ಟಪಡುತ್ತಾರೆ. 

ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಸಿಂಹ ರಾಶಿಯವರೂ ಅಜಾಗರೂಕರಾಗಿರುತ್ತಾರೆ. ಅಂದಹಾಗೆ, ಅವರು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ ಮತ್ತು ಉತ್ತಮ ನಾಯಕರು ಎಂದು ಸಾಬೀತುಪಡಿಸುತ್ತಾರೆ. ಆದರೆ ಯಾವುದೇ ರಹಸ್ಯವನ್ನು ಕಾಪಾಡುವುದು ಅಥವಾ ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುವ ವಿಷಯದಲ್ಲಿ ಅವರು ತುಂಬಾ ಅಸಡ್ಡೆ ತೋರುತ್ತಾರೆ. 

ಇದನ್ನೂ ಓದಿ- Interesting Mythological Stories: ಶಿವನ ಈ ಎರಡು ಅವತಾರಗಳು ಇಂದಿಗೂ ಜೀವಂತವಾಗಿವೆಯಾ!
 
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ ಜನರು ತುಂಬಾ ಅಸಡ್ಡೆ ಸ್ವಭಾವವನ್ನು (Nature By Zodiac) ಹೊಂದಿರುತ್ತಾರೆ ಮತ್ತು ಕೆಲವೊಮ್ಮೆ ಇದರಿಂದ ತೊಂದರೆಗಳನ್ನು ಎದುರಿಸುತ್ತಾರೆ. ಯಾವುದೇ ಒಂದು ಕೆಲಸ ಇದು ಮುಖ್ಯ ಎಂದು ತಮಗೇ ಅನಿಸುವವರೆಗೂ ಇವರು ಆ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಕೋಣೆಯಲ್ಲಿ ಯಾದೃಚ್ಛಿಕವಾಗಿ ಹರಡಿರುವ ವಸ್ತುಗಳನ್ನು  ಸಾಮಾನ್ಯವಾಗಿ ಕಾಣಬಹುದ. ಅದಾಗ್ಯೂ, ಅವರಿಗೆ ಒಳ್ಳೆಯ ಹೆಸರು ಮತ್ತು ಮನ್ನಣೆ ನೀಡುವ ಇಂತಹ ಹಲವು ಗುಣಗಳು ಅವರಲ್ಲಿವೆ. 

ಧನು ರಾಶಿ: ಧನು ರಾಶಿಯವರು ಸೋಮಾರಿಗಳಾಗಿದ್ದು, ಪ್ರತಿಯೊಂದು ಕೆಲಸವನ್ನು ಕುತ್ತಿಗೆಗೆ ಬರುವವರೆಗೆ ಅದನ್ನು ಮುಂದೂಡುತ್ತಾರೆ. ಈ ಕಾರಣದಿಂದಾಗಿ, ಅವರನ್ನು ಅಸಡ್ಡೆ ಸ್ವಭಾವದವರು ಎನ್ನಲಾಗುತ್ತದೆ. ಇವರ ಈ ಅಭ್ಯಾಸವು  ಹಲವು ಬಾರಿ ಅವರನ್ನು ತೊಂದರೆಗೆ ಸಿಲುಕಿಸುತ್ತದೆ ಮತ್ತು ಇಮೇಜ್ ಅನ್ನು ಸಹ ಹಾಳು ಮಾಡುತ್ತದೆ. 

ಇದನ್ನೂ ಓದಿ- Women Secrets: ತಮ್ಮ ಈ ಸಿಕ್ರೆಟ್ ಗಳನ್ನು ಪುರುಷರು ಖುದ್ದಾಗಿ ತಿಳಿದುಕೊಳ್ಳಬೇಕು ಎಂದು ಬಯಸುತ್ತಾರೆ ಮಹಿಳೆಯರು

ಮೀನ ರಾಶಿ: ಮೀನ ರಾಶಿಯವರಿಗೆ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಅಭ್ಯಾಸವಿರುತ್ತದೆ. ಅಲ್ಲದೆ ಅವರು ತುಂಬಾ ಆಶಾವಾದಿಗಳು. ಆದರೆ, ಕೆಲಸವನ್ನು ತುಂಬಾ ನೀಟ್ ಆಗಿ ಮಾಡಬೇಕು ಎಂದು ಅದಕ್ಕಾಗಿ ಅಧಿಕ ಸಮಯ ತೆಗೆದುಕೊಳ್ಳುತ್ತಾರೆ. ಹಾಗಾಗಿಯೇ ಅವರು ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದೆ ಅಸಡ್ಡೆ ಜನರ ಲೆಕ್ಕಕ್ಕೆ ಸೇರುತ್ತಾರೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News