ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಣ್ಣುಗಳು ಜೀವನದ ಎಲ್ಲಾ ರಹಸ್ಯಗಳನ್ನು ತಿಳಿಸುತ್ತವೆಯಂತೆ. ವ್ಯಕ್ತಿಯ ಕಣ್ಣುಗಳನ್ನು ನೋಡುವುದರಿಂದ ಅವನ ವ್ಯಕ್ತಿತ್ವವನ್ನು ಕಂಡುಹಿಡಿಯಬಹುದಂತೆ. ಕಣ್ಣುಗಳ ಆಕಾರದ ಜೊತೆಗೆ, ವ್ಯಕ್ತಿಯ ಪಾತ್ರವನ್ನು ಬಣ್ಣಗಳಿಂದ ಕಂಡುಹಿಡಿಯಲು ಸಾಧ್ಯ. ಕಣ್ಣುಗಳು ಮನಸ್ಸಿನ ಕನ್ನಡಿ ಎಂದು ಹೇಳಲಾಗುತ್ತದೆ.
ಕಪ್ಪು ಕಣ್ಣು: ಸಾಮುದ್ರಿಕ ಶಾಸ್ತ್ರ ತಿಳಿಸುವಂತೆ ಕಪ್ಪು ಕಣ್ಣುಗಳನ್ನು ಹೊಂದಿರುವ ಜನರು ಬಲವಾದ ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ. ಅಂತಹವರು ಯಾರಿಗೂ ಮೋಸ ಮಾಡುವುದಿಲ್ಲ. ಅಲ್ಲದೆ, ಅಂತಹ ಕಣ್ಣುಗಳನ್ನು ಹೊಂದಿರುವ ಜನರ ವ್ಯಕ್ತಿತ್ವವು ಸ್ವಲ್ಪ ವಿಭಿನ್ನವಾಗಿರುತ್ತದೆ. ಇದಲ್ಲದೆ, ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಇನ್ನು ಕಪ್ಪು ಕಣ್ಣು ಹೊಂದಿರುವ ಜನರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಗಳನ್ನು ಗಳಿಸುತ್ತಾರೆ.
ಇದನ್ನು ಓದಿ: Sukanya Samriddhi ಯೋಜನೆಯಲ್ಲಿ ಸರ್ಕಾರದಿಂದ 5 ಪ್ರಮುಖ ಬದಲಾವಣೆಗಳು!
ಕಂದು ಕಣ್ಣು: ಸಾಮುದ್ರಿಕ ಶಾಸ್ತ್ರದ ಪ್ರಕಾರ ಕಂದು ಕಣ್ಣಿನ ಜನರು ಉತ್ತಮ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಅವರು ತಮ್ಮ ಜೀವನದಲ್ಲಿ ಇತರರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಅವರು ಬಹಳ ಉದಾರವೆಂದು ಪರಿಗಣಿಸಲಾಗಿದ್ದರೂ ಸಹ, ಇಂತಹ ಕಣ್ಣುಗಳಿರುವವರು ಬಹುಬೇಗ ಯಾರೊಂದಿಗಾದರೂ ಬೆರೆಯುವುದಿಲ್ಲ. ಪ್ರತಿ ಕ್ಷಣವೂ ಹೊಸದನ್ನು ಮಾಡುವ ಉತ್ಸಾವನ್ನು ಅವರು ಹೊಂದಿರುತ್ತಾರೆ. ಅಂತಹ ಜನರು ತುಂಬಾ ಆಕರ್ಷಕವಾಗಿರುತ್ತಾರೆ. ಪ್ರೀತಿಯ ವಿಚಾರದಲ್ಲಿ ಅವರನ್ನು ನಂಬಲು ಸಾಧ್ಯವಿಲ್ಲ. ಇದಲ್ಲದೆ, ಈ ಜನರು ಯಾವುದೇ ಪರಿಸ್ಥಿತಿಯಲ್ಲಿ ಸಂತೋಷವಾಗಿರಲು ಇಷ್ಟಪಡುತ್ತಾರೆ.
ಹಸಿರು ಕಣ್ಣು: ಸಾಮುದ್ರಿಕ ಶಾಸ್ತ್ರ ಹೇಳುವಂತೆ, ಹಸಿರು ಕಣ್ಣುಗಳನ್ನು ಹೊಂದಿರುವ ಜನರು ತುಂಬಾ ಗಂಭೀರ ಸ್ವಭಾವದವರು. ಅಂತಹ ಜನರು ಯಾವಾಗಲೂ ಫಿಟ್ ಮತ್ತು ಫ್ರೆಶ್ ಆಗಿರಲು ಬಯಸುತ್ತಾರೆ. ಈ ಜನರು ತಮ್ಮ ಮನಸ್ಸಿನ ಮಾತಿನ ಬಗ್ಗೆ ಬೇಗ ಯಾರಿಗೂ ಹೇಳುವುದಿಲ್ಲ. ಇದಲ್ಲದೆ, ಅವರು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಮರ್ಥರಾಗಿರುತ್ತಾರೆ.
ಇದನ್ನು ಓದಿ: IIFA 2022: ಅತ್ಯುತ್ತಮ ನಟಿ ಕೃತಿ, ನಟ ವಿಕ್ಕಿ ಕೌಶಲ್.. ಯಾರಿಗೆ ಯಾವ ಪ್ರಶಸ್ತಿ, ಇಲ್ಲಿದೆ ಕಂಪ್ಲೀಟ್ ಲಿಸ್ಟ್
ನೀಲಿ ಕಣ್ಣು: ನೀಲಿ ಕಣ್ಣುಗಳನ್ನು ಹೊಂದಿರುವವರು ಅತೀ ಸುಂದರವಾಗಿರುತ್ತಾರೆ. ಇನ್ನು ಈ ಸುಂದರ ಕಣ್ಣುಗಳನ್ನು ಹೊಂದಿರುವ ಜನರು ಜೀವನದಲ್ಲಿ ಬಹಳ ಸ್ಥಿರವಾಗಿರುತ್ತಾರೆ. ಈ ಜನರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಅಷ್ಟೇ ಅಲ್ಲದೆ, ಅವರು ಶಾಂತ ಜೀವನವನ್ನು ನಡೆಸಲು ಇಚ್ಚಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ