Naturally Black Hair : ಎಳ್ಳೆಣ್ಣೆಗೆ ಈ ಒಂದು ವಸ್ತು ಸೇರಿಸಿ ಹಚ್ಚಿದರೆ ಬುಡದಿಂದಲೇ ಕಪ್ಪಾಗುವುದು ಬಿಳಿ ಕೂದಲು !

Hair Care Tips : ಕೂದಲು ಕಪ್ಪಾಗಲು ಕರಿಬೇವಿನ ಸೊಪ್ಪು ಮತ್ತು ಗೋರಂಟಿ ಎಲೆಗಳನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು.

Written by - Ranjitha R K | Last Updated : Dec 27, 2023, 04:22 PM IST
  • ಕಾಲ ಬದಲಾದಂತೆ ನಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳು ಕೂಡಾ ಹೆಚ್ಚುತ್ತಿವೆ.
  • ಕಿರಿಯ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಕೂಡಾ ಈ ಸಮಸ್ಯೆಗಳಲ್ಲಿ ಒಂದು.
  • ರಾಸಾಯನಿಕಗಳು ಕೂದಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುತ್ತದೆ,
Naturally Black Hair : ಎಳ್ಳೆಣ್ಣೆಗೆ ಈ ಒಂದು ವಸ್ತು ಸೇರಿಸಿ ಹಚ್ಚಿದರೆ ಬುಡದಿಂದಲೇ ಕಪ್ಪಾಗುವುದು ಬಿಳಿ ಕೂದಲು !  title=

ಬೆಂಗಳೂರು :  ಕಾಲ ಬದಲಾದಂತೆ ನಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳು ಕೂಡಾ ಹೆಚ್ಚುತ್ತಿವೆ. ಅದರಲ್ಲಿ ಕೂದಲಿನ ಆರೋಗ್ಯ ಕೂಡಾ ಒಂದು. ಕಿರಿಯ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಕೂಡಾ ಈ ಸಮಸ್ಯೆಗಳಲ್ಲಿ ಒಂದು. ಕಿರಿಯ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ನಾವು ಅನೇಕ ವಸ್ತುಗಳನ್ನು ಬಳಸುತ್ತೇವೆ. ಇದರಲ್ಲಿ ಬಹುತೇಕ ವಸ್ತುಗಳು ರಾಸಾಯನಿಕಗಳೇ ಆಗಿವೆ. ಈ ರಾಸಾಯನಿಕಗಳು ಕೂದಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುತ್ತದೆ, ಶಾಶ್ವತ ಪರಿಹಾರವಲ್ಲ. ಬದಲಾಗಿ ಕೂದಲಿನ ಆರೋಗ್ಯ ಮತ್ತು ಅಂದ ಎರಡನ್ನೂ ಕೆಡಿಸುತ್ತದೆ. ಆದರೆ, ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಕೂದಲಿಗೆ ಹಚ್ಚುವ ಮೂಲಕ ಬಿಳಿ ಕೂದಲಿನ ಸಮಸ್ಯೆಯನ್ನು ಬುಡದಿಂದಲೇ  ಪರಿಹರಿಸಬಹುದು.  ಹೌದು,  ಎಳ್ಳಿನ ಎಣ್ಣೆಯನ್ನು ಬಳಸುವುದರಿಂದ ಕೂದಲನ್ನು ಕಪ್ಪಾಗಿಸಬಹುದು. ಎಳ್ಳಿನ ಎಣ್ಣೆಯು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ, ಇದು ನಿಮ್ಮ ಕೂದಲನ್ನು ಕಪ್ಪಾಗಿಸುವಲ್ಲಿ ಪರಿಣಾಮಕಾರಿಯಾಗಿದೆ. 

ಎಳ್ಳಿನ ಎಣ್ಣೆಯಲ್ಲಿ ಗೋರಂಟಿ ಮಿಶ್ರಣ ಮಾಡಿ : 
ಕೂದಲು ಕಪ್ಪಾಗಲು ಗೋರಂಟಿಗೆ ಎಳ್ಳೆಣ್ಣೆ ಬೆರೆಸಿ ಹಚ್ಚಿಕೊಳ್ಳಬಹುದು. ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ . ಇದರಿಂದ ಕೂದಲಿನ ಹೊಳಪನ್ನು ಸುಧಾರಿಸಬಹುದು. ಇದು ಕೂದಲು ಮತ್ತು ನೆತ್ತಿಯ ಸೋಂಕನ್ನು ತಡೆಯುತ್ತದೆ.  ಇದರ ನಿಯಮಿತ  ಬಳಕೆಯಿಂದ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. 

ಇದನ್ನೂ ಓದಿ : ಪ್ರತಿದಿನ ಇದನ್ನು ಕುಡಿಯುವುದರಿಂದ ಕಠೋರ ಚಳಿಯಲ್ಲಿಯೂ ಯಾವುದೇ ರೋಗ ನಿಮ್ಮ ಹತ್ತಿರ ಸುಳಿಯುವುದಿಲ್ಲ

ಇದಕ್ಕಾಗಿ, 1 ಕಪ್ ಎಳ್ಳೆಣ್ಣೆಯನ್ನು ತೆಗೆದುಕೊಂಡು, ಅದರಲ್ಲಿ 1 ಚಮಚ ಗೋರಂಟಿ ಪುಡಿ ಅಥವಾ ಗೋರಂಟಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ನಂತರ, ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ವಾರಕ್ಕೆ ಎರಡು ಬಾರಿ ಹಚ್ಚಿ. ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ  ನಿಮ್ಮ ಕೂದಲು ಕ್ರಮೇಣ ಕಪ್ಪಾಗುತ್ತದೆ. 

ಕರಿಬೇವಿನ ಎಲೆಯೊಂದಿಗೆ ಎಳ್ಳಿನ ಎಣ್ಣೆ : 
ಕೂದಲು ಕಪ್ಪಾಗಲು ಕರಿಬೇವಿನ ಎಲೆಯನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಚ್ಚಬಹುದು. ಕರಿಬೇವಿನ ಎಲೆಗಳ ಸಹಾಯದಿಂದ ಕೂದಲು ಉದುರುವಿಕೆಯನ್ನು ಕೂಡಾ ತಡೆಯಬಹುದು. ಅಲ್ಲದೆ ಇದು ಕೂದಲನ್ನು ಬಲಪಡಿಸುತ್ತದೆ. ಕೂದಲು ಬಿಳಿಯಾಗದಂತೆ ತಡೆಯುತ್ತದೆ. 

ಇದನ್ನೂ ಓದಿ : ಅತಿಯಾದ ಕೊಬ್ಬು ಕರಗಿಸಲು ಚಳಿಗಾಲವೇ ಬೆಸ್ಟ್ ! ಚಳಿಗಾಲದ ಈ ಹಣ್ಣಿನ ಮೂಲಕ ಫ್ಯಾಟ್ ಬರ್ನ್ ಬಲು ಸುಲಭ!

ಕೂದಲಿಗೆ ಇದನ್ನು ಬಳಸಲು, ಮೊದಲು 1 ಕಪ್ ಎಣ್ಣೆಯನ್ನು ತೆಗೆದುಕೊಳ್ಳಿ.  ಅದರಲ್ಲಿ ಸುಮಾರು ಅರ್ಧ ಕಪ್ ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಈ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ನಿಯಮಿತವಾಗಿ  ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಬಿಳಿ ಕೂದಲು ಕ್ರಮೇಣ ಕಪ್ಪಾಗಬಹುದು.

ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News