Orange Peel Benefits: ಕಿತ್ತಳೆ ಸಿಪ್ಪೆ ಎಸೆಯುವ ಮುನ್ನ ಅದರ ಈ ಐದು ಪ್ರಯೋಜನಗಳ ಬಗ್ಗೆ ತಿಳಿಯಿರಿ

Orange Peel Benefits: ಸಾಮಾನ್ಯವಾಗಿ ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಎಸೆಯಲಾಗುತ್ತದೆ. ಆದರೆ ನಾವು ಅದರ ಒಳಗಿನ ಹಣ್ಣನ್ನು ತಿನ್ನುತ್ತೇವೆ, ಆದರೆ ಕಿತ್ತಳೆ ಹಣ್ಣು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಅಷ್ಟೇ ಲಾಭದಾಯಕವಾಗಿದೆ ಅದರ ಸಿಪ್ಪೆ. 

Written by - Ranjitha R K | Last Updated : May 14, 2022, 09:05 AM IST
  • ಕಿತ್ತಳೆ ಸಿಪ್ಪೆಯ 5 ಅದ್ಭುತ ಪ್ರಯೋಜನಗಳು
  • ಹೊಳೆಯುವ ತ್ವಚೆ ಹೊಂದಲು ಸಹಕಾರಿ
  • ರಾತ್ರಿ ನಿದ್ದೆ ಸಮಸ್ಯೆ ಎದುರಾದರೆ ಕಿತ್ತಳೆ ಸಿಪ್ಪೆಯನ್ನು ಬಳಸಬಹುದು
Orange Peel Benefits: ಕಿತ್ತಳೆ ಸಿಪ್ಪೆ ಎಸೆಯುವ ಮುನ್ನ ಅದರ ಈ ಐದು ಪ್ರಯೋಜನಗಳ ಬಗ್ಗೆ ತಿಳಿಯಿರಿ  title=
Orange Peel Benefits (file photo)

ಬೆಂಗಳೂರು : Orange Peel Benefits: ಭಾರತದಲ್ಲಿ ಕಿತ್ತಳೆಯ ಉತ್ಪಾದನೆಯು ತುಂಬಾ ಹೆಚ್ಚಾಗಿರುತ್ತದೆ.  ಈ ಹಣ್ಣಿನ ಹುಳಿ-ಸಿಹಿ ರುಚಿಯ ಕಾರಣದಿಂದ ಬಹಳಷ್ಟು ಮಂದಿ ಕಿತ್ತಳೆಯನ್ನು ಇಷ್ಟಪಟ್ಟು ಸೇವಿಸುತ್ತಾರೆ. ಇದರಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಫೋಲೇಟ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಎಸೆಯಲಾಗುತ್ತದೆ. ಆದರೆ ನಾವು ಅದರ ಒಳಗಿನ ಹಣ್ಣನ್ನು ತಿನ್ನುತ್ತೇವೆ, ಆದರೆ ಕಿತ್ತಳೆ ಹಣ್ಣು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಅಷ್ಟೇ ಲಾಭದಾಯಕವಾಗಿದೆ ಅದರ ಸಿಪ್ಪೆ. 

ಕಿತ್ತಳೆ ಸಿಪ್ಪೆಯ 5 ಅದ್ಭುತ ಪ್ರಯೋಜನಗಳು  :
1. ಚರ್ಮಕ್ಕೆ ಒಳ್ಳೆಯದು :
ಕಿತ್ತಳೆ ಸಿಪ್ಪೆಯು ನಮ್ಮ ಚರ್ಮಕ್ಕೆ ವರದಾನವೇ  ಸರಿ. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ಯಾವುದೇ ಔಷಧಿಯಾ ಮೊರೆ ಹೋಗುವ ಅಗತ್ಯವಿಲ್ಲ. ಕಿತ್ತಳೆ ಸಿಪ್ಪೆಯ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಹಚ್ಚುತ್ತ ಬಂದರೆ ಮುಖದ ಕಾಂತಿ ಹೆಚ್ಚುತ್ತದೆ. ಮುಖದಲ್ಲಿ ಕಲೆ ಳೆಗಳಿದ್ದರೆ ಅದು ಮಾಯವಾಗುತ್ತದೆ.  

ಇದನ್ನೂ ಓದಿ : Cancer Treatment: ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಔಷಧಿ ಲಭ್ಯ

2. ನಿದ್ರೆಗೆ ಸಹಾಯ ಮಾಡುತ್ತದೆ :
ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಈ ಸಮಸ್ಯೆ ಇದ್ದವರಿಗೆ ಕಿತ್ತಳೆ ಸಿಪ್ಪೆ ಸಹಕಾರಿ. ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಈ ನೀರನ್ನು ಕುಡಿಯಿರಿ. ಹೀಗೆ ನಿಯಮಿತವಾಗಿ ಮಾಡುತ್ತಾ ಬಂದರೆ, ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. 

3. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : 
ಕಿತ್ತಳೆ ಸಿಪ್ಪೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು  ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಆಂಟಿ ಇಂಫ್ಲಮೇಟರಿ ಗುಣವಿರುತ್ತದೆ.  ಈ ಕಾರಣದಿಂದಾಗಿ ಕಿತ್ತಳೆ ಸಿಪ್ಪೆಯನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.  ಕಿತ್ತಳೆ ಸಿಪ್ಪೆಯನ್ನು ಸಕ್ಕರೆ ಮತ್ತು ನಿಂಬೆಯೊಂದಿಗೆ ತಿನ್ನಬಹುದು. 

ಇದನ್ನೂ ಓದಿ :  Coffee Side Effects: ಕಾಫಿ ಪ್ರಿಯರೇ... ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ!

4. ಹೇರ್ ಕಂಡಿಷನರ್ ಆಗಿ ಬಳಸಬಹುದು : 
ಕೂದಲಿನ ಪೋಷಣೆಗಾಗಿ ಮಾರುಕತ್ತ್ಗೆಯಲ್ಲಿ ಸಿಗುವ ಉತ್ಪನ್ನಗಳ ಮೊರೆ ಹೋಗುವುದೇ ಹೆಚ್ಚು. ಇವುಗಳಲ್ಲಿ ಹಾನಿಕಾರಕ ರಾಸಾಯನಿಕಗಳು ತುಂಬಿರುತ್ತವೆ. ಸಾಮಾನ್ಯವಾಗಿ ಹೆಚ್ಚಿನವರು ದುಬಾರಿ ಕಂಡೀಷನರ್ ಗಳನ್ನೂ ತಲೆ ಕೂದಲಿಗೆ ಬಳಸುತ್ತಾರೆ. ಇದರ ಬದಲಿಗೆ ಕಿತ್ತಳೆ ಸಿಪ್ಪೆಯು ತುಂಬಾ ಪರಿಣಾಮಕಾರಿಯಾಗಿರುತ್ತದೆ.  ಈ ಹಣ್ಣಿನ ಸಿಪ್ಪೆಯಲ್ಲಿ ಕೂದಲಿಗೆ ಪ್ರಯೋಜನಕಾರಿಯಾದ ಕ್ಲೆನ್ಸಿಂಗ್ ಗುಣಗಳು ಇರುತ್ತವೆ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ನಂತರ ಅದರಲ್ಲಿ ಜೇನು ತುಪ್ಪವನ್ನು ಬೆರೆಸಿ ತಲೆ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ತಲೆ ಕೂದಲು ತೊಳೆದರೆ  ಕೂದಲು ಹೊಳೆಯುತ್ತದೆ.

5. ಡ್ಯಾಂಡ್ರಫ್ ನಿಂದ ಮುಕ್ತಿ :
ಕೂದಲಿನಲ್ಲಿ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಂಡರೆ, ಕಿತ್ತಳೆ ಹಣ್ಣಿನ ಸಿಪ್ಪೆ ಇದಕ್ಕೆ ಪರಿಹಾರ ನೀಡುತ್ತದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿಯನ್ನು ತಯಾರಿಸಿ ನಂತರ ಅದರಲ್ಲಿ ತೆಂಗಿನ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ದೂರವಾಗುತ್ತದೆ.

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News