ಬೆಂಗಳೂರು : ಕರೋನಾ ವೈರಸ್‌ನಿಂದ (Coronavirus) ತಮ್ಮನ್ನು ಕಾಪಾಡಿಕೊಳ್ಳಲು ಜನ ಈಗ ತಮ್ಮ ದೇಹದ ರೋಗ ನಿರೋಧಕ (Immunity) ಶಕ್ತಿಯನ್ನು ಹೆಚ್ಚಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಇದಕ್ಕಾಗಿ ವಿಟಮಿನ್ ಸಿ (Vitamin C) ಮಾತ್ರೆಗಳನ್ನು ಕೂಡಾ ಸೇವಿಸಲಾಗುತ್ತದೆ. ಇನ್ನು ವಿಟಮಿನ್ ಸಿ ಹೇರಳವಾಗಿರುವ ಹಣ್ಣಾದ ಕಿತ್ತಳೆಯನ್ನು (Orange) ಕೂಡಾ ಹೆಚ್ಚಾಗಿ ಈ ಸಮಯದಲ್ಲಿ ಜನ ಸೇವಿಸುತ್ತಿದ್ದಾರೆ. ಕಿತ್ತಳೆ ಹಣ್ಣು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಕಿತ್ತಳೆಯಲ್ಲಿ ಆರೋಗ್ಯ ವೃದ್ದಿಗೊಳಿಸುವ ಅನೇಕ ಗುಣಗಳಿವೆ. ಹಾಗಂತ, ಕಿತ್ತಳೆಯನ್ನು ಹೆಚ್ಚು ಸೇವಿಸುವುದರಿಂದ ಕೆಲವು ಹಾನಿ ಕೂಡಾ ಉಂಟಾಗುತ್ತದೆ.
ಮೊದಲೇ ಹೇಳಿದ ಹಾಗೆ ಕಿತ್ತಳೆಯಲ್ಲಿ (Orange) ಉತ್ತಮ ಆರೋಗ್ಯಕ್ಕೆ ಬೇಕಾಗುವ ಅನೇಕ ಅಂಶಗಳಿವೆ. ಆದರೆ ಕೆಲವೊಂದು ಸಂದರ್ಭದಲ್ಲಿ ಕಿತ್ತಳೆ ಹಣ್ಣು ಪ್ರಯೋಜನ ನೀಡುವ ಬದಲು ಹಾನಿಯುಂಟು ಮಾಡಬಹುದು ..
ಇದನ್ನೂ ಓದಿ : Garlic-Pistachios Benefits : ಕೊರೋನಾ ಟೈಂನಲ್ಲಿ ಪುರುಷರು ಈ ಎರಡನ್ನ ತಪ್ಪದೇ ಸೇವಿಸಿ : ಇಲ್ಲಿದೆ ಪ್ರಯೋಜನಗಳು!
ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ :
ಕಿತ್ತಳೆ ಹಣ್ಣನ್ನು ವಿಟಮಿನ್-ಸಿ ಯ (Vitamin C) ಮೂಲ ಎಂದು ಹೇಳಲಾಗುತ್ತದೆ. ವಿಟಮಿನ್ ಸಿಯ ಅಧಿಕ ಪ್ರಮಾಣದ ಸೇವನೆ ದೇಹದ ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗಬಹುದು. ಇದರಿಂದಾಗಿ ನೀವು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾದೀತು. ಕಿತ್ತಳೆ ಹಣ್ಣುಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ತಿನ್ನುವುದು ಬಹಳ ಮುಖ್ಯ. ರೋಗನಿರೋಧಕ ಶಕ್ತಿ (Immunity) ಹೆಚ್ಚುತ್ತದೆ ಎಂದು ಬೇಕ ಬೇಕಾದಂತೆ ತಿಂದರೆ ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಮೂಳೆಗಳ ಸಮಸ್ಯೆ ಇರುವವರು, ಸೀಮಿತ ಪ್ರಮಾಣದಲ್ಲಿ ಕಿತ್ತಳೆ ತಿನ್ನಬೇಕು.
ಕಿತ್ತಳೆ ತೂಕ ಹೆಚ್ಚಿಸಬಹುದು :
ವಿಟಮಿನ್ ಸಿ ದೇಹದ ಚಯಾಪಚಯ ಕ್ರಿಯೆಯನ್ನು ಸರಿಯಾಗಿಡಲು ಬಹಳ ಮುಖ್ಯವಾಗಿರುತ್ತದೆ. ಆದರೆ ದೇಹದಲ್ಲಿ ವಿಟಮಿನ್ ಸಿ ಪ್ರಮಾಣವು ಅಧಿಕವಾದರೆ, ಅದು ಚಯಾಪಚಯ ಕ್ರಿಯೆಯನ್ನು ಹಾಳುಮಾಡುತ್ತದೆ. ಇದರಿಂದ ದೇಹ ತೂಕ ಇಳಿಯುವ (Weight loss) ಬದಲು ಹೆಚ್ಚಾಗಬಹುದು.
ಇದನ್ನೂ ಓದಿ : ನಿಮಗೂ ಈ ಸಮಸ್ಯೆಗಳಿದ್ದರೆ ರಾಗಿ ಸೇವನೆ ಖಂಡಿತಾ ಒಳ್ಳೆಯದಲ್ಲ
ಎದೆಯುರಿ ಸಮಸ್ಯೆ ಎದುರಾಗಬಹುದು :
ಕಿತ್ತಳೆ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದು ನಿಮ್ಮ ಕಣ್ಣುಗಳಿಗೂ (good for eyes) ಪ್ರಯೋಜನಕಾರಿಯಾಗಿದೆ. ಆದರೆ ಹೆಚ್ಚು ಕಿತ್ತಳೆ ತಿನ್ನುವುದರಿಂದ ಎದೆಯುರಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ಹಲ್ಲುಗಳಿಗೆ ಹಾನಿಕಾರಕ :
ಕಿತ್ತಳೆ ಹಲ್ಲುಗಳಿಗೂ ಹಾನಿಕಾರಕ. ದಂತಕವಚವು ಹಲ್ಲುಗಳನ್ನು ರಕ್ಷಿಸುತ್ತದೆ. ಆದರೆ ಕಿತ್ತಳೆಯಲ್ಕಿರುವ ಆಮ್ಲವು ಹಲ್ಲುಗಳ ದಂತಕವಚದಲ್ಲಿರುವ ಕ್ಯಾಲ್ಸಿಯಂನೊಂದಿಗೆ ಪ್ರತಿಕ್ರಿಯಿಸುತ್ತದೆ. ಕಿತ್ತಳೆ ತಿನ್ನುವುದರಿಂದ ಹಲ್ಲುಗಳನ್ನು ರಕ್ಷಿಸುವ ಪದರ ಹಾನಿಗೊಳಗಾಗಬಹುದು. ಕಿತ್ತಳೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲ ಇರುವುದರಿಂದ, ಈ ಆಮ್ಲವು ಹಲ್ಲುಗಳಲ್ಲಿರುವ ಕ್ಯಾಲ್ಸಿಯಂನೊಂದಿಗೆ ಪ್ರತಿಕ್ರಿಯಿಸುತ್ತದೆ. ಈ ಕಾರಣದಿಂದಾಗಿ ಹಲ್ಲುಗಳು ನಿಧಾನವಾಗಿ ಕ್ಷೀಣಿಸಲು ಪ್ರಾರಂಭಿಸುತ್ತವೆ.
ಇದನ್ನೂ ಓದಿ : Juices : ನೀವು ಕೊರೋನಾದಿಂದ ಗುಣಮುಖರಾಗಿದ್ದೀರಾ? ಹಾಗಿದ್ರೆ ತಪ್ಪದೆ ಈ ಜ್ಯೂಸ್ ಗಳನ್ನ ಸೇವಿಸಿ!
ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ:
ಈ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ಜೀರ್ಣಾಂಗ (Digestion) ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕಿತ್ತಳೆ ಹಣ್ಣಿನ ಹೆಚ್ಚುವರಿ ಸೇವನೆಯು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ಹಣ್ಣಿನಲ್ಲಿ ಫೈಬರ್ (Fiber) ಹೆಚ್ಚಾಗಿ ಕಂಡು ಬರುತ್ತದೆ. ಈ ಕಾರಣದಿಂದಾಗಿ ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳು ಉದ್ಭವಿಸಬಹುದು..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.