Anant Chaturdashi: ಅನಂತ್ ಚತುರ್ದಶಿಯಂದು ನಿಮ್ಮ ಕೈಗೆ ಕಟ್ಟಿಕೊಳ್ಳಿ ಈ ಸೂತ್ರ, ಕಷ್ಟ-ಕಾರ್ಪಣ್ಯಗಳು ದೂರಾಗಲಿವೆ

Anant Chaturdashi 2021: ಅನಂತ ಚತುರ್ದಶಿಯ  (Anant Chaturdashi) ಶುಭ ದಿನದಂದು, ಶ್ರೀ ವಿಷ್ಣುವಿನ ಅನಂತ ರೂಪಕ್ಕೆ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿ ನಂತರ ಅನಂತ ಸೂತ್ರವನ್ನು  (Anant Sutra) ಕಟ್ಟಿಕೊಳ್ಳಿ. ಇದರಿಂದ ವ್ಯಕ್ತಿಯ ಕಷ್ಟ-ಕಾರ್ಪಣ್ಯಗಳು ದೂರಾಗುತ್ತವೆ.

Written by - Nitin Tabib | Last Updated : Sep 18, 2021, 10:37 AM IST
  • ಈ ಬಾರಿ ಸೆಪ್ಟೆಂಬರ್ 19 ರಂದು ಅನಂತ ಚತುರ್ದಶಿ ಬರಲಿದೆ.
  • ಈ ದಿನ ಶ್ರೀ ವಿಷ್ಣುವಿನ ಅನಂತ ರೂಪಕ್ಕೆ ಪೂಜೆ ಸಲ್ಲಿಸಿ.
  • ಪೂಜೆಯ ಬಳಿಕ 14 ಗಂಟುಗಳಿರುವ ಅನಂತರ ಸೂತ್ರವನ್ನು ನಿಮ್ಮ ಕೈಗೆ ಕಟ್ಟಿಕೊಳ್ಳಿ.
Anant Chaturdashi: ಅನಂತ್ ಚತುರ್ದಶಿಯಂದು ನಿಮ್ಮ ಕೈಗೆ ಕಟ್ಟಿಕೊಳ್ಳಿ ಈ ಸೂತ್ರ, ಕಷ್ಟ-ಕಾರ್ಪಣ್ಯಗಳು ದೂರಾಗಲಿವೆ title=
Anant Chaturdashi 2021 (File Photo)

Anant Chaturdashi 2021: ಗಣಪತಿಯ (Ganpati) ವಿಸರ್ಜನೆಗೆ ಇನ್ನು ಕೆಲವೇ ಗಂಟೆ ಬಾಕಿ ಉಳಿದಿವೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಗಣೇಶ ಚತುರ್ಥಿಯ (Anant Chaturdashi) ದಿನ ಪ್ರತಿಷ್ಠಾಪನೆಗೊಂಡ  ಶ್ರೀಗಣೇಶನಿಗೆ 10 ದಿನಗಳ ಬಳಿಕ ಅಂದರೆ ಅನಂತ ಚತುರ್ದಶಿಯ (Anant Chaturdashi 2021) ದಿನ ವಿದಾಯ ಹೇಳಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 19 ಅಂದರೆ ಭಾನುವಾರ ಅನಂತ ಚತುರ್ದಶಿ ಆಚರಿಸಲಾಗುತ್ತಿದೆ. ಈ ದಿನ ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಅನಂತ ಸೂತ್ರವನ್ನು (Anant Sutra) ಮಣಿಕಟ್ಟಿಗೆ ಅಥವಾ ತೋಳಿಗೆ ಕಟ್ಟಿಕೊಳ್ಳಲಾಗುತ್ತದೆ. ಶ್ರೀ ವಿಷ್ಣುವಿಗೆ (Lord Vishnu) ಅತ್ಯಂತ ಪ್ರಿಯ ಎನ್ನಲಾಗುವ ಶೇಷನಾಗನಿಗೆ ಅನಂತ ಎಂದೂ ಕೂಡ ಹೆಸರು.

ಪುರಾಣಗಳ ಪ್ರಕಾರ ಪಾಂಡವರು ಎಲ್ಲವನ್ನು ಕಳೆದುಕೊಂಡ ನಂತರ, ಎರಡನೇ ಬಾರಿಗೆ ರಾಜ ಗದ್ದುಗೆಯನ್ನು ಮತ್ತೆ ಪಡೆದುಕೊಳ್ಳಲು ಶ್ರೀಕೃಷ್ಣ ಪಾಂಡವರಿಗೆ ಅನಂತ ಚತುರ್ದಶಿಯಾ ವೃತವನ್ನು ಕೈಗೊಳ್ಳಲು ಹೇಳುತ್ತಾನೆ ಎನ್ನಲಾಗಿದೆ. ಇನ್ನೊಂದು ಧಾರ್ಮಿಕ ನಂಬಿಕೆಯ ಪ್ರಕಾರ ಶ್ರೀವಿಷ್ಣುವಿನ ಈ ರೂಪದ ಆರಂಭ ಎಲ್ಲಾಯ್ತು ಮತ್ತು ಅಂತ ಎಲ್ಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಹೀಗಾಗಿ ಈ ದಿನ ಶ್ರೀ ವಿಷ್ಣುವಿನ ಅನಂತ ರೂಪದ ಪೂಜೆ ಸಲ್ಲಿಸುವುದರಿಂದ ಕಷ್ಟ ಕಾರ್ಪಣ್ಯಗಳು (Pain And Problems) ದೂರಾಗುತ್ತವೆ ಎನ್ನಲಾಗಿದೆ.

ಅನಂತ ಚತ್ರುರ್ದಶಿಯ ದಿನ ಕೈಗೆ ಧರಿಸಿ ಅನಂತ ಸೂತ್ರ 
ಧಾರ್ಮಿಕ ನಂಬಿಕೆಗಳ ಪ್ರಕಾರ, ಅನಂತ ಚತುರ್ದಶಿಯ ದಿನ, ವಿಷ್ಣುವಿನ ಅನಂತ ರೂಪವನ್ನು ಪೂಜಿಸಿದ ನಂತರ, ಕೈಗೆ ಅನಂತ ಸೂತ್ರವನ್ನು ಕಟ್ಟಬೇಕು. ಈ ಪವಾಡದ ದಾರವು ಪ್ರತಿಯೊಂದು ಕಷ್ಟ-ಕಾರ್ಪಣ್ಯಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಅನಂತ ದಾರವನ್ನು ಮಣಿಕಟ್ಟಿಗೆ ಅಥವಾ ತೋಳಿನ ಮೇಲೆ ಕಟ್ಟಲಾಗುತ್ತದೆ. ಇದರಲ್ಲಿ 14 ಗಂಟುಗಳಿವೆ. ಇದನ್ನು ಪುರುಷರ ಬಲಗೈ ಮತ್ತು ಮಹಿಳೆಯರ ಎಡಗೈಯಲ್ಲಿ ಕಟ್ಟಲಾಗುತ್ತದೆ. ಸಂಪೂರ್ಣ ಫಲಿತಾಂಶವನ್ನು ಪಡೆಯಲು, ಅನಂತ ಸೂತ್ರವನ್ನು ಸಂಪೂರ್ಣ ಆಚರಣೆಗಳೊಂದಿಗೆ ಧರಿಸಬೇಕು.

- ಇದಕ್ಕಾಗಿ ಮೊದಲು ಅನಂತ ಚತ್ರುದಶಿಯ ದಿನ , 14 ಗಂಟುಗಳನ್ನು ಕಚ್ಚಾ ದಾರದಲ್ಲಿ ಹಾಕುವ ಮೂಲಕ, ಮೊದಲು ಅದನ್ನು ಹಸಿ ಹಾಲಿನಲ್ಲಿ ಅದ್ದಿ. ಇದರ ನಂತರ, 'ಓಂ ಅನಂತಾಯ ನಮಃ' ಮಂತ್ರವನ್ನು ಪಠಿಸುತ್ತ ಶ್ರೀ ವಿಷ್ಣುವಿಗೆ ವಿಧಿ ವಿಧಾನದಿಂದ ಪೂಜೆ ಸಲ್ಲಿಸಿ.  ಮಾರುಕಟ್ಟೆಯಲ್ಲಿಯೂ ಕೂಡ ಈ ಗಂಟಿಕ್ಕಿದ ಅನಂತ ಸೂತ್ರಗಳು ಸಿಗುತ್ತವೆ. ಅವುಗಳನ್ನು ಕೂಡ ಬಳಸಬಹುದು.

- ಈ 14 ಗಂಟುಗಳು ವಿಷ್ಣುವಿನ ಪ್ರತಿಯೊಂದು ರೂಪವನ್ನು ಸಂಕೇತಿಸುತ್ತವೆ. ಈ ಸೂತ್ರವನ್ನು ಧರಿಸಿದ ನಂತರ 14 ದಿನಗಳವರೆಗೆ ತಾಮಸಿ ಆಹಾರವನ್ನು ಸೇವಿಸುವುದಿಲ್ಲ. ಅಂದರೆ, ನಾನ್ ವೆಜ್-ಆಲ್ಕೋಹಾಲ್, ಬೆಳ್ಳುಳ್ಳಿ-ಈರುಳ್ಳಿ ತಿನ್ನಬೇಡಿ. ಬ್ರಹ್ಮಚರ್ಯವನ್ನು ಸಹ ಪಾಲಿಸಿ

- ತಮ್ಮ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡ ಜನರೂ ಕೂಡ ಒಂದು ವೇಳೆ ಸಂಪೂರ್ಣ ವಿಧಿವಿಧಾನಗಳಿಂದ ಪೂಜೆ ಸಲ್ಲಿಸಿ ಈ ಸೂತ್ರವನ್ನು ಧರಿಸಿದರೆ. ಅವರು ಕಳೆದುಕೊಂಡಿದ್ದನ್ನೆಲ್ಲವನ್ನು ಸಂಪಾದಿಸಬಹುದು. ಈ ಸೂತ್ರ ನಿಮ್ಮ ಜೀವನದಲ್ಲಿನ ಎಲ್ಲ ಕಷ್ಟ ಕಾರ್ಪಣ್ಯಗಳನ್ನೂ ತೊಡೆದು ಹಾಕಿ, ಸುಖ-ಸಂಪನ್ನತೆಯಿಂದ ಕೂಡಿದ ಜೀವನ ನಿಮ್ಮದಾಗಿಸುತ್ತದೆ.

ಇದನ್ನೂ ಓದಿ-ಅಡುಗೆ ಮನೆಯ ಉಪ್ಪು ಜಾತಕ ದೋಷ ನಿವಾರಣೆಗೂ ಸಹಕಾರಿ, ಅಳವಡಿಸುವುದು ಹೇಗೆ ತಿಳಿಯಿರಿ

- ಒಂದು ವೇಳೆ ನಿಮ್ಮಿಂದ ಸಾಧ್ಯವಾದಲ್ಲಿ ಅನಂತಚತುರ್ದಶಿಯ ದಿನ ವೃತವನ್ನು ಕೈಗೊಂಡು ಶ್ರೀವಿಷ್ಣುವಿನ ಸಹಸ್ತ್ರನಾಮ ಸ್ತೋತ್ರವನ್ನು ಪಠಿಸಿ.  ಇದರಿಂದ ಫಲಪ್ರಾಪ್ತಿ ಹೆಚ್ಚಾಗಲಿದ್ದು. ವ್ಯಕ್ತಿಯ ಜೀವನದಲ್ಲಿ ಧನಾದಾಯದ ಜೊತೆಗೆ ಸುಖ-ಸಮೃದ್ಧಿ ಹಾಗೂ ಸಂತಾನ  ಪ್ರಾಪ್ತಿಯಾಗುತ್ತದೆ. 

ಇದನ್ನೂ ಓದಿ - ನಿಮ್ಮ ಅಡುಗೆ ,ಮನೆಯಲ್ಲಿ ಎಂದೂ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )

ಇದನ್ನೂ ಓದಿ-ಈ ಮೂರು ರಾಶಿಯವರು ವಿಶ್ವಾಸಕ್ಕೆ ಅರ್ಹರು, ಏನೇ ಆದರೂ ಸಾಯುವವರೆಗೂ ಸಂಬಂಧ ನಿಭಾಯಿಸುತ್ತಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News