ನವದೆಹಲಿ: ಜೀವನದಲ್ಲಿ ಒಳ್ಳೆಯ ಸ್ನೇಹಿತರು ಇರುವುದು ಬಹಳ ಮುಖ್ಯ. ಅದರಲ್ಲೂ ವಿಶ್ವಾಸಾರ್ಹ ಜಗತ್ತಿನಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ವಿಶ್ವಾಸಾರ್ಹ ಸ್ನೇಹಿತರನ್ನು ಹೊಂದುವುದು ಇನ್ನೂ ಮುಖ್ಯ. ಅನೇಕರು ನಮಗೆ ಬಹಳ ಮಂದಿ ಸ್ನೇಹಿತರಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಆ ಬಹಳಷ್ಟು ಮಂದಿಯಲ್ಲಿ ನಂಬಿಕೆಗೆ ಅರ್ಹರಾಗಿರುವವರು ಎಷ್ಟು ಮಂದಿ ಎನ್ನುವ ಪ್ರಶ್ನೆಯೂ ಏಳುತ್ತದೆ.
ಹಾಗಾದರೆ ನಂಬಿಕಸ್ಥರು ಎಂದರೆ ಅವರನ್ನು ಗುರತಿಸುವುದು ಹೇಗೆ? ಜ್ಯೋತಿಷ್ಯದಲ್ಲಿ ಈ ಪ್ರಶ್ನೆಗೆ ಉತ್ತರ ಇದೆ. ಜ್ಯೋತಿಷ್ಯದಲ್ಲಿ (Astrology) ಕೆಲವು ರಾಶಿಗಳನ್ನು ಅತೀ ನಂಬಿಕಸ್ಥ ರಾಶಿಚಕ್ರಗಳೆಂದು (Zodiac Sign) ಹೇಳಲಾಗಿದೆ. ಈ ರಾಶಿಯವರು ಯಾವುದೇ ಸಂದರ್ಭದಲ್ಲಿಯೂ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ : ನಿಮ್ಮ ಅಡುಗೆ ,ಮನೆಯಲ್ಲಿ ಎಂದೂ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ
ಮಕರ ರಾಶಿ :
ಮಕರ ರಾಶಿಯವರು (Capricorn) ತಮ್ಮ ಮಾತಿನ ಬಗ್ಗೆ ದೃಢವಾಗಿರುತ್ತಾರೆ. ಅವರು ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ಬೇಕಾದರೂ ಅರ್ಪಿಸುತ್ತಾರೆ. ಇವರ ಬಳಿ ಎಷ್ಟು ರಹಸ್ಯವಾದ ವಿಷಯಗಳನ್ನು ಹಂಚಿಕೊಂಡರೂ ಅದು ಬಹಿರಂಗವಾಗದಂತೆ ನೋಡಿಕೊಳ್ಳುತ್ತಾರೆ. ಯಾವತ್ತೂ ನಂಬಿಕೆ ದ್ರೋಹ ಮಾಡುವುದಿಲ್ಲ. ನೈತಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ವೃಷಭ ರಾಶಿ :
ವೃಷಭ ರಾಶಿಯವರು (Taurus) ನಿಷ್ಠಾವಂತರು ಮತ್ತು ಅಗತ್ಯವಿದ್ದಾಗ ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಈ ರಾಶಿಚಕ್ರದ (Zodiac sign) ಜನರು ನಂಬಿಕೆಯನ್ನು ಮುರಿಯುವುದಿಲ್ಲ. ನಿಮ್ಮ ಯಾವ ವಿಷಯಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಬಹುದು. ತಾವು ಪ್ರೀತಿಸುವವರಿಗಾಗಿ ಮತ್ತು ತಮ್ಮನ್ನು ಪ್ರೀತಿಸುವವರಿಗಾಗಿ ಏನನ್ನೂ ಬೇಕಾದರೂ ಮಾಡುತ್ತಾರೆ.
ಇದನ್ನೂ ಓದಿ : ಅಡುಗೆ ಮನೆಯ ಉಪ್ಪು ಜಾತಕ ದೋಷ ನಿವಾರಣೆಗೂ ಸಹಕಾರಿ, ಅಳವಡಿಸುವುದು ಹೇಗೆ ತಿಳಿಯಿರಿ
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ (Scorpio) ಜನರು ತಮ್ಮ ಸಂಗಾತಿಗೆ ಬದ್ಧರಾಗಿರುತ್ತಾರೆ. ಈ ರಾಶಿ ಹೊಂದಿರುವ ಜನರು ಬೇಗನೆ ಯಾರೊಂದಿಗೂ ಸ್ನೇಹಿತರಾಗುವುದಿಲ್ಲ. ಆದರೆ ಒಮ್ಮೆ ಯಾರೊಡನೆಯಾದರೂ ಸ್ನೇಹ ಬೆಳೆಸಿದರೆ ಕೊನೆಯವರೆಗೂ ನಿಭಾಯಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.