ಅಷಾಢ ಮಾಸದಲ್ಲಿ ರೂಪುಗೊಳ್ಳುವ ಈ ಅಪಾಯಕಾರಿ ಯೋಗ.! ಜೀವನದಲ್ಲಿ ಉಂಟು ಮಾಡಲಿದೆ ಅಲ್ಲೋಲ ಕಲ್ಲೋಲ ..!

ಆಷಾಢ ಮಾಸವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾದ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳಿನಿಂದ ಚಾತುರ್ಮಾಸ ಆರಂಭವಾಗುತ್ತದೆ. ಈ ಬಾರಿ ಈ ಮಾಸದಲ್ಲಿ ಅಶುಭ ಯೋಗವೊಂದು ರೂಪುಗೊಳ್ಳುತ್ತಿದೆ. 

Written by - Ranjitha R K | Last Updated : Jun 20, 2022, 11:29 AM IST
  • ಜೂನ್ 15 ರಿಂದ ಪ್ರಾರಂಭವಾಗಿದೆ ಆಷಾಢ ಮಾಸ
  • ಚಾತುರ್ಮಾಸ ಕೂಡ ಆಷಾಢ ಮಾಸದಿಂದ ಪ್ರಾರಂಭ
  • ಈ ಬಾರಿ ಈ ಮಾಸದಲ್ಲಿ ಅಶುಭ ಯೋಗ
ಅಷಾಢ ಮಾಸದಲ್ಲಿ ರೂಪುಗೊಳ್ಳುವ ಈ ಅಪಾಯಕಾರಿ ಯೋಗ.! ಜೀವನದಲ್ಲಿ ಉಂಟು ಮಾಡಲಿದೆ ಅಲ್ಲೋಲ ಕಲ್ಲೋಲ ..!  title=
Ashadh 2022 (file photo)

ಬೆಂಗಳೂರು  : ಆಷಾಢ ಮಾಸವು ಜೂನ್ 15 ರಿಂದ ಪ್ರಾರಂಭವಾಗಿದೆ. ಈ ಮಾಸದಲ್ಲಿ ಉಪವಾಸ ವೃತಗಳನ್ನು ಆಚರಿಸಲಾಗುತ್ತದೆ. ಚಾತುರ್ಮಾಸ ಕೂಡ ಆಷಾಢ ಮಾಸದಿಂದ ಪ್ರಾರಂಭವಾಗುತ್ತದೆ. ಗುರು ಪೂರ್ಣಿಮೆಯನ್ನು ಈ ತಿಂಗಳ ಕೊನೆಯ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಆಷಾಢ ಮಾಸ ಜುಲೈ 13ರವರೆಗೆ ಇರುತ್ತದೆ. ಒಟ್ಟಿನಲ್ಲಿ ಧಾರ್ಮಿಕ ದೃಷ್ಟಿಯಿಂದ ಈ ಮಾಸ ಬಹಳ ಪ್ರಾಮುಖ್ಯತೆ ಹೊಂದಿದೆ. ಈ ಬಾರಿ ಈ ಮಾಸದಲ್ಲಿ ಅಶುಭ ಯೋಗ ಉಂಟಾಗುವುದರಿಂದ ಜನರು ಎಚ್ಚರಿಕೆ ವಹಿಸಬೇಕಾಗಿದೆ ಎನ್ನಲಾಗಿದೆ. 

ಆಷಾಢದಲ್ಲಿ 5 ಬರುತ್ತಿವೆ ಬುಧವಾರಗಳು ಮತ್ತು 5 ಗ್ರಹಗಳ ಬದಲಾವಣೆಗಳು  :
ಈ ವರ್ಷ ಆಷಾಢ ಮಾಸದಲ್ಲಿ 5 ಬುಧವಾರಗಳಿವೆ. ಇದಲ್ಲದೇ ಈ ಅವಧಿಯಲ್ಲಿ 5 ಗ್ರಹಗಳ ಬದಲಾವಣೆಯೂ ಆಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸಂಯೋಜನೆ ಮತ್ತು 5 ಬುಧವಾರಗಳನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ತಿಂಗಳು ಸೂರ್ಯ, ಶುಕ್ರ, ಮಂಗಳ, ಬುಧ ಮತ್ತು ಶನಿ ಗ್ರಹಗಳ ಸ್ಥಾನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತವೆ.ಈ ಪಾಕಿ ಕೆಲವೊಂದು ಬದಲಾವಣೆಗಳು ಅಶುಭ ಎನ್ನಲಾಗಿದೆ. 5 ಬುಧವಾರಗಳು ಮತ್ತು ಗ್ರಹಗಳ ಅಶುಭ ಸ್ಥಾನವು ಈ ಅವಧಿಯಲ್ಲಿ ಜನರ ಜೀವನದ ಮೇಲೆ ಭಾರೀ ಪ್ರಭಾವ ಬೀರಲಿದೆ ಎನ್ನಲಾಗಿದೆ. ಗಲಭೆ, ಅಗ್ನಿಸ್ಪರ್ಶ ಮತ್ತು ನೈಸರ್ಗಿಕ ವಿಕೋಪಗಳು ಎದುರಾಗುವ ಸಂಭವ ಇದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ :  ಇನ್ನು ಏಳು ದಿನಗಳಲ್ಲಿ ಈ ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಮಂಗಳ

ಈ ಕ್ರಮಗಳನ್ನು  ಕೈಗೊಂಡರೆ ಬುಧದ ಪ್ರಕೋಪದಿಂದ ತಪ್ಪಿಸಬಹುದು : 
ಈ ಸಂದರ್ಭದಲ್ಲಿ ಬುಧ ಗ್ರಹವು ಅನೇಕ ಜನರಿಗೆ ತೊಂದರೆ ನೀಡಬಹುದು. ಅಶುಭ ಬುಧನಿಂದ ಉಂಟಾಗುವ ತೊಂದರೆಗಳನ್ನು ತೊಡೆದುಹಾಕಲು, ಆಷಾಢ ಮಾಸದಲ್ಲಿ ಬುಧ ಗ್ರಹಕ್ಕೆ ಸಂಬಂಧಿಸಿದ ಕೆಲವು ಪರಿಹಾರ ಕಾರ್ಯ ಗಳನ್ನು ಕೈ ಗೊಳ್ಳಬೇಕು . 
1.ಬುಧವಾರ ವಿಘ್ನವಿನಾಶಕ ಗಣೇಶನ ಪೂಜೆಯನ್ನು ಮಾಡಬೇಕು. 
2. ಬುಧವಾರ ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ. 
3. ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ. ಬುಧವಾರದಂದುಕಿನ್ನರರು ಅಥವಾ ತೃತೀಯ ಲಿಂಗಿಗಳಿಗೆ ಹಸಿರು ಬಟ್ಟೆ ಅಥವಾ ಹಸಿರು ಬಳೆಗಳನ್ನು ದಾನ ಮಾಡುವುದು ಶುಭ ಫಲವನ್ನು ನೀಡುತ್ತದೆ. 

ಇದನ್ನೂ ಓದಿ:   Shani Dev Vehicle: ಶನಿ ದೇವನ ಈ 9 ವಾಹನಗಳು ಭಾಗ್ಯ ನಿರ್ಧರಿಸುತ್ತವೆ, ಯಾವ ವಾಹನ ಯಾವ ಶುಭ-ಅಶುಭ ಸಂಕೇತಗಳನ್ನು ನೀಡುತ್ತದೆ

 

 (ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News