ಶನಿವಾರ ಮಾಡುವ ಈ ತಪ್ಪಿನಿಂದ ಶನಿದೇವನ ಕೋಪಕ್ಕೆ ಪಾತ್ರವಾಗಬೇಕಾಗುತ್ತದೆ

ಶನಿವಾರವನ್ನು ಶನಿ ಮತ್ತು ಭೈರವನಿಗೆ ಸಮರ್ಪಿಸಲಾಗಿದೆ. ಶನಿದೇವನ ಆಶೀರ್ವಾದ ಯಾರ ಮೇಲೆ ಇರುತ್ತದೆಯೋ, ಅವರಿಗೆ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಆದರೆ ಶನಿವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.   

Written by - Ranjitha R K | Last Updated : May 14, 2022, 12:01 PM IST
  • ಶನಿವಾರದ ದಿನ ಶನಿದೇವನಿಗೆ ಅರ್ಪಣೆ
  • ಶನಿದೇವನ ಆಶೀರ್ವಾದ ಇದ್ದರೆ ಕೆಲಸದಲ್ಲಿ ಸಿಗುತ್ತದೆ ಯಶಸ್ಸು
  • ಶನಿವಾರ ಕೆಲವು ಕೆಲಸಗಳನ್ನು ಮಾದುವುದನ್ನಿ ನಿಷೇಧಿಸಲಾಗಿದೆ
ಶನಿವಾರ ಮಾಡುವ ಈ ತಪ್ಪಿನಿಂದ ಶನಿದೇವನ ಕೋಪಕ್ಕೆ ಪಾತ್ರವಾಗಬೇಕಾಗುತ್ತದೆ  title=
Saturday Vrat Vidhi (file photo)

ಬೆಂಗಳೂರು : ಹಿಂದೂ ಧರ್ಮದಲ್ಲಿ, ಶನಿವಾರವನ್ನು ಶನಿ ಮಹಾತ್ಮ ಮತ್ತು ಭೈರವ ದೇವರಿಗೆ ಸಮರ್ಪಿಸಲಾಗಿದೆ. ಶನಿದೇವನ ಆಶೀರ್ವಾದವಿದ್ದರೆ, ಯಾವ ವಿಚಾರದಲ್ಲಿಯೂ ಕುಂದು ಕೊರತೆಗಳು ಎದುರುಗಾವುದಿಲ್ಲ ಎನ್ನಲಾಗುತ್ತದೆ.  ಅಲ್ಲದೆ, ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಶನಿ ಮಹಾತ್ಮನ ಕೃಪೆಯಿದ್ದರೆ, ಹಣಕಾಸಿನ ಕೊರತೆಯು ಎದುರಾಗುವುದಿಲ್ಲ.  ಶನಿವಾರದಂದು ಶನೀಶ್ವರನಿಗೆ ಎಳ್ಳೆಣ್ಣೆ, ಕಪ್ಪು ಎಳ್ಳು, ಇತ್ಯಾದಿಗಳನ್ನು ಅರ್ಪಿಸಿದರೆ ಶನಿ ಮಹಾತ್ಮ ಸಂತುಷ್ಟನಾಗುತ್ತಾನೆ ಎನ್ನುವುದು ನಂಬಿಕೆ. 

ಶನಿವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಶನಿವಾರದಂದು ಈ ಕೆಲಸಗಳನ್ನು ಮಾಡಿದರೆ ಆ ವ್ಯಕ್ತಿಯ ಮೇಲೆ ಶನೀಶ್ವರ ಕೋಪಗೊಳ್ಳುತ್ತಾನೆ. ಅಷ್ಟೇ ಅಲ್ಲ ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನ ದುರ್ಬಲವಾಗುತ್ತದೆ. ಕೈ ಹಾಕಿರುವ ಕೆಲಸ ಮುಂದುವರಿಯುವುದೇ ಇಲ್ಲ. ಏನೇ ಕೆಲಸ ಮಾಡಿದರೂ ಅಡೆ ತಡೆ ಎದುರಾಗುತ್ತಲೇ ಇರುತ್ತದೆ.   ಹಾಗಾಗಿ ಶನಿವಾರದ ದಿನ ಕೆಲವು ಕೆಲಸಗಳನ್ನು ತಪ್ಪಿಯೂ ಮಾಡಬಾರದು ಎನ್ನಲಾಗಿದೆ. 

ಇದನ್ನೂ ಓದಿ :  ಈ ಹೆಸರಿನ ಹುಡುಗರ ಮೇಲೆ ಜೀವನ ಪೂರ್ತಿ ಇರುತ್ತದೆ ಧನ ಕುಬೇರನ ಆಶೀರ್ವಾದ..!

ಶನಿವಾರ ಈ ಕೆಲಸ ಮಾಡಬೇಡಿ : 
ಎಣ್ಣೆಯನ್ನು ಖರೀದಿ ಬೇಡ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರವೂ  ಯಾವುದೇ ಎಣ್ಣೆಯನ್ನು ಖರೀದಿಸಬೇಡಿ. ಈ ದಿನ ಎಣ್ಣೆ ಖರೀದಿ ಮಾಡುವುದರಿಂದ ಮನೆಯಲ್ಲಿ ಬಡತನ ಎದುರಾಗುತ್ತದೆ. ಈ ದಿನ ಎಣ್ಣೆಯನ್ನು ದಾನ ಮಾಡಬೇಕು. ವಿಶೇಷವಾಗಿ ಎಳ್ಳೆಣ್ಣೆ ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶನಿದೇವನು ಸಂತುಷ್ಟನಾಗುತ್ತಾನೆ. 

ಶನಿವಾರ ತಲೆ ಸ್ನಾನ ಮಾಡಬಾರದು : 
ಕೆಲವರಿಗೆ ನಿಯಮಿತವಾಗಿ ತಲೆಗೆ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಆದರೆ ಶನಿವಾರದಂದು ತಪ್ಪಿಯೂ ತಲೆಗೆ ಸ್ನಾನ ಮಾಡಬಾರದು. ಶನಿವಾರದ ದಿನ ತಲೆಗೆ ಸ್ನಾನ ಮಾಡುವುದರಿಂದ ಮನೆಯಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : Chandra Grahan 2022: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಚಂದ್ರಗ್ರಹಣ ಪ್ರಾರಂಭವಾದ ಕೂಡಲೇ ಈ ಕ್ರಮಗಳನ್ನು ಕೈಗೊಳ್ಳಿ

ಕಬ್ಬಿಣವನ್ನು ಖರೀದಿಸಬೇಡಿ :
ಶನಿವಾರದಂದು ಯಾವುದೇ ರೀತಿಯ ಕಬ್ಬಿಣದ ವಸ್ತುಗಳನ್ನು ಖರೀದಿಸಿ ಮನೆಗೆ ತರಬಾರದು. ಹೀಗೆ ಮಾಡುವುದನ್ನು ಜ್ಯೋತಿಷ್ಯದಲ್ಲಿ ಅಶುಭವೆಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ಶನಿ ದೇವನ ಬಾಲಿ ಕಬ್ಬಿಣ ಆಯುಧವಿದೆ ಎನ್ನಲಾಗಿದೆ. ಹಾಗಾಗಿ ಶನಿವಾರದ ದಿನ ಕಬ್ಬಿಣದ ವಸ್ತುಗಳನ್ನು ಖರೀಸುವುದನ್ನು ನಿಷೇಧಿಸಲಾಗಿದೆ.

ಮಾಂಸ ತಿನ್ನಬಾರದು : 
ಶನಿವಾರದಂದು ಯಾವುದೇ ಪ್ರಾಣಿಗಳಿಗೆ ತೊಂದರೆ ನೀಡಬಾರದು ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಾಂಸಾಹಾರ ಸೇವಿಸಿದರೆ ಶನಿದೇವನ ಕ್ರೋಧಕವನ್ನು ಎದುರಿಸಬೇಕಾಗುತ್ತದೆ. ಈ ದಿನ ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಹೀಗೆ ಮಾಡುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ. 

ಇದನ್ನೂ ಓದಿ : Surya Gochar 2022: ಸೂರ್ಯ ಸಂಚಾರದಿಂದ ಬಂಪರ್ ಲಾಭ-24 ಗಂಟೆಗಳಲ್ಲಿ ಬದಲಾಗಲಿದೆ ಇವರ ಭವಿಷ್ಯ

ಉಪ್ಪು ಖರೀದಿಸಬೇಡಿ :
ಶನಿವಾರದ ದಿನ ಎಳ್ಳೆಣ್ಣೆ ಮಾತ್ರವಲ್ಲ ಉಪ್ಪನ್ನು ಕೂಡಾ ಮನೆಗೆ ತರಬಾರದು. ಈ ದಿನ ಉಪ್ಪನ್ನು ಮನೆಗೆ ತರುವುದು ಅಶುಭವೆಂದು ಪರಿಗಣಿಸಲಾಗಿದೆ. ಈ ದಿನ ಉಪ್ಪನ್ನು ತಂದರೆ ಮನೆಯಲ್ಲಿ ಋಣಭಾರ ಹೆಚ್ಚುತ್ತದೆ ಮತ್ತು ವ್ಯಕ್ತಿಯನ್ನು ಅನೇಕ ರೋಗಗಳು ಸುತ್ತುವರಿಯುತ್ತವೆ ಎನ್ನಲಾಗಿದೆ. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News