ಈ ಹೆಸರಿನ ಹುಡುಗರ ಮೇಲೆ ಜೀವನ ಪೂರ್ತಿ ಇರುತ್ತದೆ ಧನ ಕುಬೇರನ ಆಶೀರ್ವಾದ..!

Lucky Boy by  Astrology:  ಸಂಪತ್ತಿನ ದೇವರಾದ ಕುಬೇರನ ಅನುಗ್ರಹ ಯಾರ ಮೇ ಲಿರುತದೆಯೋ ಅವರೂ ತಮ್ಮ ಜೀವನದಲ್ಲಿ ಬಹಳಷ್ಟು ಸಂಪತ್ತು ಮತ್ತು ವೈಭವವನ್ನು ಪಡೆಯುತ್ತಾರೆ. ಅವರ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ. ಕುಬೇರ ಇವರ ಮೇಲೆ ಹೆಚ್ಚಿನ ಕೃಪೆ ಇಟ್ಟಿರುತ್ತಾನೆ.  

Written by - Ranjitha R K | Last Updated : May 14, 2022, 11:11 AM IST
  • ಹೆಸರಿನ ಮೂಲಕ ತಿಳಿದುಕೊಳ್ಳಬಹುದು ವ್ಯಕ್ತಿಯ ಭವಿಷ್ಯ
  • ಹೆಸರೇ ಸೂಚಿಸುತ್ತದೆ ವ್ಯಕ್ತಿಯ ಗುಣ ಸ್ವಭಾವ
  • ಅದೃಷ್ಟವಂತ ಹೆಸರಿನವರು ಇವರು
ಈ ಹೆಸರಿನ ಹುಡುಗರ ಮೇಲೆ ಜೀವನ ಪೂರ್ತಿ ಇರುತ್ತದೆ ಧನ ಕುಬೇರನ ಆಶೀರ್ವಾದ..!  title=
Lucky Boy by Astrology (file photo)

ಬೆಂಗಳೂರು : Lucky Boy by Name Astrology: ಜ್ಯೋತಿಷ್ಯದಲ್ಲಿ ಹೆಸರು ಬಹಳ ಮುಖ್ಯವಾಗಿದೆ. ಇದನ್ನು ಆಂಗ್ಲ ಭಾಷೆಯಲ್ಲಿ ನೇಮ್ ಅಸ್ಟ್ರಾಲಜಿ ಎಂದು ಕರೆಯುತ್ತಾರೆ.  ಈ ಮೂಲಕ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯಬಹುದು. ವ್ಯಕ್ತಿಯ ಗುಣ ಸ್ವಭಾವ ಹೇಗಿದೆ ಎನ್ನುವುದನ್ನು ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದ ಸುಲಭವಾಗಿ ತಿಳಿಯಬಹುದು. 

ಈ ಕೆಳಗಿನ ಅಕ್ಷರಗಳಿಂದ ಹೆಸರು ಆರಂಭವಾಗುವವರು ಬಹಳ ಅದೃಷ್ಟವಂತರಂತೆ. ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಮತ್ತು ಯಾವಾಗಲೂ ಬಹಳಷ್ಟು ಸಂಪತ್ತನ್ನು ಹೊಂದಿರುತ್ತಾರೆ ಎನ್ನಲಾಗಿದೆ. 

ಇದನ್ನೂ ಓದಿ :  Chandra Grahan 2022: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಚಂದ್ರಗ್ರಹಣ ಪ್ರಾರಂಭವಾದ ಕೂಡಲೇ ಈ ಕ್ರಮಗಳನ್ನು ಕೈಗೊಳ್ಳಿ

ಹೆಸರಿನ ಮೊದಲ ಅಕ್ಷರ N : N ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಯಾವಾಗಲೂ ಆರಾಮದಾಯಕ ಜೀವನವನ್ನು ನಡೆಸುತ್ತಾರೆ. ಈ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಮಾತ್ರವಲ್ಲ ಗೌರವವನ್ನು ಸಹ ಪಡೆಯುತ್ತಾರೆ.  ಇವರು ಧೈರ್ಯಶಾಲಿಗಳು ಮತ್ತು ನಿರ್ಭೀತರಾಗಿರುತ್ತಾರೆ.   ಅವರು ವ್ಯಾಪಾರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. 

ಹೆಸರಿನ ಮೊದಲ ಅಕ್ಷರ P : P ಯಿಂದ ಹೆಸರು ಪ್ರಾರಂಭವಾಗುವ ಜನರು ಯಾವಾಗಲೂ ಆರಾಮದಾಯಕ ಜೀವನವನ್ನು ನಡೆಸುತ್ತಾರೆ. ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇದಕ್ಕಾಗಿ ಅವರು ಕಷ್ಟಪಡಬೇಕಾಗಿಲ್ಲ. ತಮಗೆ ಜೀವನದಲ್ಲಿ ಬೇಕಾಗುವ ಎಲ್ಲಾ ಸವಲತ್ತುಗಳನ್ನು ಬಹಳ ಸುಲಭವಾಗಿ ಪಡೆಯುತ್ತಾರೆ. ಕುಬೇರ ದೇವನ ಆಶೀರ್ವಾದ ಇವರ ಮೇಲಿರುತ್ತದೆ. 

ಇದನ್ನೂ ಓದಿ :  Surya Gochar 2022: ಸೂರ್ಯ ಸಂಚಾರದಿಂದ ಬಂಪರ್ ಲಾಭ-24 ಗಂಟೆಗಳಲ್ಲಿ ಬದಲಾಗಲಿದೆ ಇವರ ಭವಿಷ್ಯ

ಹೆಸರಿನ ಮೊದಲ ಅಕ್ಷರ  S : S ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರುಶ್ರಮಪಟ್ಟು ಕೆಲಸ ಮಾಡುತ್ತಾರೆ.  ಬುದ್ಧಿವಂತರು ಕೂಡಾ. ಚಿಕ್ಕ ವಯಸ್ಸಿನಲ್ಲೇ ತಾವು ಸಾದಿಸಬೇಕಾದ ಗುರಿಯನ್ನು ನಿರ್ಧರಿಸುತ್ತಾರೆ. ಮಾತ್ರವಲ್ಲ ತಮ್ಮ ಗುರಿ ಸಾಧನೆಗೆ ಶಕ್ತಿ ಮೀರಿ ಶ್ರಮಿಸುತ್ತಾರೆ.  ಅದೃಷ್ಟ ಕೂಡ ಅವರನ್ನು ಬೆಂಬಲಿಸುತ್ತದೆ.  ಅವರು ತಮ್ಮ ಜೀವನದಲ್ಲಿ ಅಪಾರ ಸಂಪತ್ತು, ಗೌರವ ಮತ್ತು ಉನ್ನತ ಸ್ಥಾನಮಾನವನ್ನು ಪಡೆಯುತ್ತಾರೆ. ಕುಬೇರ ದೇವನ ಕೃಪೆ ಸದಾ ಅವರ ಮೇಲಿರುತ್ತದೆ. 

ಹೆಸರಿನ ಮೊದಲ ಅಕ್ಷರ V :V ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಅವರು ಜೀವನದಲ್ಲಿ ಎಲ್ಲಾ  ಸೌಕರ್ಯಗಳನ್ನು ಸುಲಭವಾಗಿ ಪಡೆಯುತ್ತಾರೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News