Vastu Tips: ನಿಮ್ಮ ಪರ್ಸ್‌ನಲ್ಲಿರುವ ಈ ವಸ್ತುಗಳು ಬಡತನಕ್ಕೆ ಕಾರಣವಾಗಬಹುದು!

Vastu tips for money: ಕೈತುಂಬಾ ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ. ಸದಾ ಆರ್ಥಿಕ ಸಂಕಷ್ಟದಿಂದ ಪರದಾಡುವಂತಹ ಸ್ಥಿತಿ ಇದೆ ಎಂದು ಹಲವರು ಹೇಳುತ್ತಾರೆ. ಇದಕ್ಕೆ ದುಂದುಗಾರಿಕೆ ಮಾತ್ರ ಕಾರಣವಲ್ಲ, ಕೆಲವು ವಾಸ್ತು ದೋಷಗಳೂ ಸಹ ಇದಕ್ಕೆ ಕಾರಣವಾಗಿರಬಹುದು. ಈ ಪರಿಸ್ಥಿತಿಯನ್ನು ತಪ್ಪಿಸಲು ನಮ್ಮ  ಪರ್ಸ್‌ನಲ್ಲಿ ಇಡುವ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ. ಏಕೆಂದರೆ ಪರ್ಸ್‌ನಲ್ಲಿ ಇಡುವ ಕೆಲವು ವಸ್ತುಗಳು ಬಡತನಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Jun 7, 2022, 09:06 AM IST
  • ಪರ್ಸ್‌ನಲ್ಲಿ ಇಡುವ ಕೆಲವು ವಸ್ತುಗಳು ಬಡತನಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ.
  • ಹಾಗಾಗಿಯೇ, ಕೆಲವು ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದನ್ನು ತಪ್ಪಿಸಬೇಕು ಎನ್ನಲಾಗುತ್ತದೆ.

    ಪರ್ಸ್ ಅಥವಾ ವ್ಯಾಲೆಟ್‌ನಲ್ಲಿ ಯಾವ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು ಎಂದು ತಿಳಿಯಿರಿ...
Vastu Tips: ನಿಮ್ಮ ಪರ್ಸ್‌ನಲ್ಲಿರುವ ಈ ವಸ್ತುಗಳು ಬಡತನಕ್ಕೆ ಕಾರಣವಾಗಬಹುದು! title=
Vastu Tips For Purse

ಪರ್ಸ್‌ಗಾಗಿ ವಾಸ್ತು ಸಲಹೆಗಳು:  ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಅಯ್ಯೋ, ಎಷ್ಟೇ ದುಡಿದರೂ ಹಣಕಾಸಿನ ಸಮಸ್ಯೆಯಿಂದ ಹೊರಬರಲು ಆಗುತ್ತಲೇ ಇಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ಹಣದ ಸಮಸ್ಯೆ ಅಥವಾ ಆರ್ಥಿಕ ಸಂಕಷ್ಟ ಎಂದೊಡನೆ ನಾವು ಮೊದಲು ಎಲ್ಲಿ ದುಂದುವೆಚ್ಚ ಆಗುತ್ತಿದೆ ಎಂಬ ಬಗ್ಗೆ ಯೋಚಿಸುತ್ತೇವೆ. ಆದರೆ, ನಿಮಗೆ ಗೊತ್ತೇ.. ಕೈತುಂಬಾ ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲದಿರಲು ದುಂದುವೆಚ್ಚ ಮಾತ್ರವಲ್ಲ ಅವರ ಪರ್ಸ್‌ನ ವಾಸ್ತು ದೋಷವೂ ಕಾರಣವಾಗಿರಬಹುದು. 

ವಾಸ್ತು ಶಾಸ್ತ್ರವು ಪರ್ಸ್ ಅಥವಾ ವಾಲೆಟ್‌ಗೆ ಸಂಬಂಧಿಸಿದ ವಾಸ್ತು ದೋಷಗಳ ಬಗ್ಗೆಯೂ ಉಲ್ಲೇಖಿಸುತ್ತದೆ. ನಾವು ಪರ್ಸ್ ವಿಷಯದಲ್ಲಿ ಮಾಡುವ ಕೆಲವು ನಿರ್ಲಕ್ಷಗಳು ಕ್ರಮೇಣ ಬಡತನಕ್ಕೆ ಕಾರಣವಾಗಬಹುದು. ಹೌದು, ಒಬ್ಬ ವ್ಯಕ್ತಿ ಉತ್ತಮ ಆದಾಯವನ್ನು ಹೊಂದಿದ್ದರೂ ಅವರ ಪರ್ಸ್ ಅಥವಾ ವ್ಯಾಲೆಟ್  ಖಾಲಿಯಾಗಿರಲು ಮುಖ್ಯ ಕಾರಣವೆಂದರೆ ಅದರಲ್ಲಿ ಇರಿಸಲಾಗುವ ಕೆಲವು ನಕಾರಾತ್ಮಕ ವಸ್ತುಗಳು. ಪರ್ಸ್‌ನಲ್ಲಿ ಇಡುವ ಕೆಲವು ವಸ್ತುಗಳು ಬಡತನಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಕೆಲವು ವಸ್ತುಗಳನ್ನು  ಪರ್ಸ್‌ನಲ್ಲಿ ಇಡುವುದನ್ನು ತಪ್ಪಿಸಬೇಕು ಎನ್ನಲಾಗುತ್ತದೆ. ಹಾಗಿದ್ದರೆ,  ಪರ್ಸ್ ಅಥವಾ ವ್ಯಾಲೆಟ್‌ನಲ್ಲಿ ಯಾವ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು ಎಂದು ತಿಳಿಯಿರಿ... 

ಪರ್ಸ್‌ನಲ್ಲಿ ಕೆಲವು ವಸ್ತುಗಳು ತುಂಬಾ ಅಶುಭ ಮತ್ತು ನಕಾರಾತ್ಮಕತೆಯನ್ನು ತರುತ್ತವೆ, ಅವುಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ದೊಡ್ಡ ಹಾನಿ ಉಂಟಾಗುತ್ತದೆ. ಆದ್ದರಿಂದ, ಎಂದಿಗೂ ತಿಳಿದೋ ಅಥವಾ ತಿಳಿಯದೆಯೋ ಅಂತಹ ವಸ್ತುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಡಿ ಮತ್ತು ಅವುಗಳನ್ನು ಇಟ್ಟುಕೊಂಡಿದ್ದರೆ, ತಕ್ಷಣ ಅವುಗಳನ್ನು ತೆಗೆದುಹಾಕುವುದು ಒಳ್ಳೆಯದು.

ಇದನ್ನೂ ಓದಿ- Sleeping Rules: ಮಲಗುವಾಗ ನಿಮ್ಮ ಪಕ್ಕದಲ್ಲಿಡುವ ಈ ವಸ್ತುವು ದುರದೃಷ್ಟಕ್ಕೆ ಕಾರಣವಾಗಬಹುದು!

ಈ ಅಶುಭ ವಸ್ತುಗಳನ್ನು ಪರ್ಸ್‌ನಲ್ಲಿ ಎಂದಿಗೂ ಇಡಬೇಡಿ:
ತೀಕ್ಷ್ಣವಾದ ವಸ್ತುಗಳು: ಚಾಕುಗಳು, ಪಿನ್ಗಳು, ಕೀಗಳು ಮುಂತಾದ ಚೂಪಾದ ಅಥವಾ ಲೋಹದ ವಸ್ತುಗಳನ್ನು ಎಂದಿಗೂ ಪರ್ಸ್‌ನಲ್ಲಿ ಇರಿಸಬೇಡಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಕ್ರಮೇಣ ವ್ಯಕ್ತಿಯ ಜೀವನದಲ್ಲಿ ಬಡತನವು ಹೆಚ್ಚಾಗಲು ಪ್ರಾರಂಭಿಸುತ್ತದೆ ಎಂಬ ನಂಬಿಕೆ ಇದೆ.

ಬಿಲ್‌ಗಳು ಅಥವಾ ರಸೀದಿಗಳು: ಕೆಲವರಿಗೆ ಬಿಲ್‌ಗಳು ಅಥವಾ ರಸೀದಿಗಳು ಇತ್ಯಾದಿಗಳನ್ನು ಪರ್ಸ್ ಅಥವಾ ವ್ಯಾಲೆಟ್‌ನಲ್ಲಿ ಇಡುವ ಅಭ್ಯಾಸ ಇರುತ್ತದೆ. ಆದರೆ, ಇವುಗಳನ್ನು ಎಂದಿಗೂ ನಿಮ್ಮ ಪರ್ಸ್ ಅಥವಾ ವ್ಯಾಲೆಟ್‌ನಲ್ಲಿ ಇರಿಸಬೇಡಿ. ಒಂದೊಮ್ಮೆ ನಿಮಗೆ ನಿಜವಾಗಿಯೂ ಇವುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಅಗತ್ಯವಿದ್ದರೆ ಆ ಕೆಲಸ ಆಗುವವರೆಗೂ ಮಾತ್ರ ಅವುಗಳನ್ನು ಪರ್ಸ್‌ನಲ್ಲಿ ಇರಿಸಿ. ಅನೇಕ ಜನರು ಮನೆಯ ಎಲ್ಲಾ ಬಿಲ್‌ಗಳನ್ನು ಪರ್ಸ್‌ನಲ್ಲಿ ಇಟ್ಟುಕೊಂಡು ತಿರುಗುತ್ತಿರುತ್ತಾರೆ, ಅದು ತಪ್ಪು. ಇಂತಹ ವಸ್ತುಗಳು ರಾಹುವಿನ ರೂಪ ಪಡೆದು ಧನಹಾನಿ, ಅನಾವಶ್ಯಕ ಖರ್ಚುಗಳಿಗೆ ಕಾರಣರಾಗಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Rahu Ketu: ಅಡುಗೆಮನೆಯಲ್ಲಿ ರಾಹು-ಕೇತು ಪ್ರಭಾವ- ಸ್ವಲ್ಪ ಅಜಾಗರೂಕತೆಯೂ ಭಾರವಾಗಬಹುದು

ಪೂರ್ವಜರ ಚಿತ್ರಗಳು : ಪರ್ಸ್‌ನಲ್ಲಿ ಪೂರ್ವಜರ ಚಿತ್ರಗಳನ್ನು ಇಡುವುದು ಸಹ ತಪ್ಪು ಎನ್ನಲಾಗುತ್ತದೆ. ಪೂರ್ವಜರನ್ನು ಗೌರವಿಸಬೇಕು, ಆದರೆ ಅವರ ಫೋಟೋಗಳನ್ನು ಈ ರೀತಿ ಪರ್ಸ್‌ನಲ್ಲಿ ಇಡುವುದು ತಪ್ಪು. ಪೂರ್ವಜರ ಚಿತ್ರಗಳನ್ನು ನಿಮ್ಮ ಮನೆಯ ನೈಋತ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. 

ದೇವಾನುದೇವತೆಗಳ ಚಿತ್ರ: ಅದೇ ರೀತಿ ಪರ್ಸ್ ನಲ್ಲಿ ದೇವರ ಚಿತ್ರ ಇಡುವುದು ಕೂಡ ತಪ್ಪು. ಪೂಜೆಯ ಮನೆಯಲ್ಲಿ ದೇವರ ಫೋಟೋವನ್ನು ಗೌರವದಿಂದ ಇಡಬೇಕು, ಇಲ್ಲದಿದ್ದರೆ ದೇವರು ಕೋಪಗೊಳ್ಳಬಹುದು ಎನ್ನಲಾಗುತ್ತದೆ.

ಅರಿದ ನೋಟುಗಳು: ಇದರ ಹೊರತಾಗಿ, ಪರ್ಸ್ ಅಥವಾ ವ್ಯಾಲೆಟ್‌ನಲ್ಲಿ ಎಂದಿಗೂ ಅರಿದ ನೋಟನ್ನು ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ಯಾವಾಗಲೂ ಹಣವನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳುವುದು ಸೂಕ್ತ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News