ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ 2022 ಕೊನೆಯಾಗಲಿದೆ. ಹೊಸ ವರ್ಷದ ಹೊಸ್ತಿಲಲ್ಲಿ ನಾವು ಬಂದು ನಿಂತಿದ್ದೇವೆ. ಪ್ರಸ್ತುತ ವರ್ಷ ಕೆಲವರ ಪಾಲಿಗೆ ಸಂತೋಷವನ್ನೇ ತಂದಿರಬಹುದು. ಇನ್ನು ಕೆಲವರ ಜೀವನದಲ್ಲಿ ಕೆಟ್ಟ ಕ್ಷಣಗಳೇ ತುಂಬಿದ್ದಿರಬಹುದು. ಹೊಸ ವರ್ಷ ಆರಂಭವಾದಾಗ ಕಳೆದು ಹೋದ ವರ್ಷದ ಕಹಿ ನೆನಪುಗಳನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಸಾಗುವುದೇ ಜೀವನ. ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಹೀಗಾಗುವುದಿಲ್ಲ. ಮಕ್ಕಳ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಕ್ಕಳ ಮನಸ್ಸು ತಿಳಿದುಕೊಳ್ಳಬೇಕಾದರೆ ಅವರ ಬಳಿ ಕುಳಿತು ಮಾತನಾಡಬೇಕಾಗುತ್ತದೆ. ಮುಂಬರುವ ವರ್ಷವು ನಿಮ್ಮ ಮಗುವಿನ ಪಾಲಿಗೆ ಉತ್ತಮವಾಗಿರಬೇಕಾದರೆ, 2022ರ ಅಂತ್ಯದ ಮೊದಲು ಈ ಐದು ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕು.
ಸಂತೋಷ ತರಿಸಿರುವ ಘಟನೆ :
2022 ನೇ ವರ್ಷ ಕೊನೆಯಾಗುವುದಕ್ಕೆ ಮೊದಲು ನಿಮ್ಮ ಮಗುವಿಗೆ ಈ ವರ್ಷ ಹೆಚ್ಚು ಸಂತೋಷ ನೀಡಿರುವ ವಿಷಯಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳಿ. ಇದರ ಜೊತೆಗೆ ಮಗುವಿಗೆ ಬೇಸರ ತರಿಸಿರುವ ವಿಚಾರಗಳು ಯಾವುವು ಎನ್ನುವುದರ ಬಗ್ಗೆಯೂ ಚರ್ಹೆಯಾಗಲಿ. ಹೀಗೆ ಮಾಡುವುದರಿಂದ ಮಗುವಿನ ಮನಸ್ಥಿತಿ ತಿಳಿದುಕೊಳ್ಳುವುದು ಸುಲಭವಾಗುತ್ತದೆ.
ಇದನ್ನೂ ಓದಿ : Radish Side Effect: ಮೂಲಂಗಿ ತಿಂದ ಬಳಿಕ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ: ವಿಷವಾಗಿ ಪರಿಣಮಿಸುತ್ತೆ ಎಚ್ಚರ
ಕಲಿತಿರುವ ಪಾಠ :
ಈ ವರ್ಷ ಅವರು ಕಲಿತ ಹೊಸ ವಿಷಯಗಳ ಬಗ್ಗೆ ಮಕ್ಕಳಲ್ಲಿ ಕೇಳಿ ತಿಳಿದುಕೊಳ್ಳಿ. ಅಲ್ಲದೆ ಅವರು ಮಾಡಿರುವ ಯಾವ ತಪ್ಪುಗಳಿಂದ ಯಾವ ಪಾಠ ಕಲಿತಿದ್ದಾರೆ ಎನ್ನುವ ಪ್ರಶ್ನೆ ಕೂಡಾ ಬಹಳ ಮುಖ್ಯವಾಗಿರುತ್ತದೆ. ಮಕ್ಕಳಾಗಲಿ ದೊಡ್ಡವರಾಗಲಿ ತಪ್ಪು ಮಾಡುವುದು ಸಹಜ. ಆದರೆ ತಪ್ಪನ್ನು ಮರುಕಳಿಸಬಾರದು. ಮಾಡಿದ ತಪ್ಪಿನಿಂದ ಪಾಠ ಕಲಿತುಕೊಳ್ಳಬೇಕು. ಹೀಗಾದಾಗ ಮಾತ್ರ ಭವಿಷ್ಯದಲ್ಲಿ ಆಗುವ ತಪ್ಪನ್ನು ತಡೆಯುವುದು ಸಾಧ್ಯ.
ಯಾವ ತಪ್ಪನ್ನು ಪುನರಾವರ್ತಿಸಬಾರದು :
ಈ ವರ್ಷದಲ್ಲಿ ನಿಮ್ಮ ಮಗು ಮಾಡಿದ ಯಾವ ತಪ್ಪನ್ನು ಪುನರಾವರ್ತಿಸಲು ಇಷ್ಟವಿಲ್ಲ ಎನ್ನುವುದನ್ನು ಕೇಳಿ ತಿಳಿದುಕೊಳ್ಳಿ. ಈ ಬಗ್ಗೆ ಕುಳಿತು ಮಕ್ಕಳ ಜೊತೆ ಮಾತನಾಡುವುದರಿಂದ ಅವರ ನಡವಳಿಕೆ ಬಗ್ಗೆ ಅವರು ಜವಾಬ್ದಾರಿಯಿಂದ ವರ್ತಿಸುವಂತೆ ಮಾಡುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Men Health : ಪುರುಷರ ಈ ಸಮಸ್ಯೆಗೆ ಹಾಲು ಮತ್ತು ಖರ್ಜೂರದಲ್ಲಿದೆ ಮದ್ದು
ಅತ್ಯಂತ ಕಷ್ಟಕರವಾದ ವಿಷಯ ಯಾವುದು ?
ಈ ವರ್ಷದಲ್ಲಿ ನಿಮ್ಮ ಮಕ್ಕಳ ಪಾಲಿಗೆ ಎದುರಾದ ಅತ್ಯಂತ ಕಷ್ಟಕರವಾದ ಕೆಲಸ ಯಾವುದು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಯಾಕೆಂದರೆ ಆ ಕಷ್ಟಕರ ಸನ್ನಿವೇಶವನ್ನು ಅವರು ಗೆದ್ದು ಬಂದಿದ್ದರೆ ಅವರ ಆತ್ಮ ವಿಶ್ವಾಸ ಹೆಚ್ಚುತ್ತದೆ. ಒಂದು ವೇಳೆ ಅದನ್ನು ಅವರು ಎದುರಿಸುವಲ್ಲಿ ಸೋತಿದ್ದರೆ, ಅಂಥಹ ಘಟನೆಗಳನ್ನು ಎದುರಿಸುವುದು ಹೇಗೆ ಎನ್ನುವುದನ್ನು ತಿಳಿ ಹೇಳಿ. ಜೀವನದಲ್ಲಿ ಎಂಥಹ ಪರಿಸ್ಥಿತಿ ಬಂದರೂ ಹೆತ್ತವರಾದ ನೀವು ಮಕ್ಕಳ ಜೊತೆ ನಿಲ್ಲುತ್ತೇವೆ ಎನ್ನುವುದನ್ನು ಅವರ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಿ.
ಮುಂದಿನ ವರ್ಷದ ಯೋಜನೆ :
ಮುಂದಿನ ವರ್ಷದ ಬಗ್ಗೆ ನಿಮ್ಮ ಮಗುವಿನ ಮನಸ್ಸಿನಲ್ಲಿ ಯಾವ ರೀತಿಯ ಯೋಜನೆಗಳಿವೆ ಎನ್ನುವುದರ ಬಗ್ಗೆಯೂ ಚರ್ಚೆ ಮಾಡಿ. ಈ ಪ್ರಶ್ನೆಗಳು ಮಕ್ಕಳಿಗೆ ತಮ್ಮ ಭವಿಷ್ಯದ ಬಗ್ಗೆ ಯೋಚಿಸಲು ಸಹಾಯ ಮಾಡುತ್ತದೆ. ನಾವು ನಾಳೆಯ ಬಗ್ಗೆಯೂ ಪ್ಲಾನಿಂಗ್ ಇಟ್ಟು ಕೊಳ್ಳಬೇಕು ಎನ್ನುವುದನ್ನು ತಿಳಿಸುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.