Brahma Muhurta Importance: ನಮ್ಮಲ್ಲಿ ಬಹುತೇಕ ಜನರು ಬ್ರಹ್ಮ ಮುಹೂರ್ತದ ಬಗ್ಗೆ ಕೇಳಿರಬಹುದು. ಹಿಂದೂ ಧರ್ಮ ಶಾಸ್ತ್ರದಲ್ಲಿ ಈ ಸಮಯಕ್ಕೆ ವಿಎಶೆಶ ಮಹತ್ವವನ್ನು ಕಲ್ಪಿಸಲಾಗಿದೆ. ಧಾರ್ಮಿಕ ಗ್ರಂಥಗಳಿಂದ ಹಿಡಿದು ಋಷಿಮುನಿಗಳು ಮತ್ತು ಹಿರಿಯರವರೆಗೂ ಈ ಮುಹೂರ್ತವನ್ನು ಅತ್ಯಂತ ಪ್ರಯೋಜನಕಾರಿ ಎಂದು ವಿವರಿಸಲಾಗಿದೆ. ಇದನ್ನು ದೇವತೆಗಳ ಸಮಯವೆಂದು ಕೂಡ ಕರೆಯಲಾಗುತ್ತದೆ. ಈ ಸಮಯದಲ್ಲಿ ಎದ್ದೇಳುವುದು ವ್ಯಕ್ತಿಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಎಚ್ಚರಗೊಳ್ಳುವ ವ್ಯಕ್ತಿಯ ಬುದ್ಧಿಶಕ್ತಿ ಚುರುಕಾಗುತ್ತದೆ ಮತ್ತು ಅವನ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ದೇವರನ್ನು ಪೂಜಿಸುವುದು ಅಥವಾ ಸ್ಮರಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಬ್ರಹ್ಮ ಮುಹೂರ್ತದ ನಿರ್ಧಿಷ್ಟ ಸಮಯ ಯಾವುದು?
ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತ ಎಂದರೆ ಬೆಳಗಿನ ಜಾವದ ಸಮಯ. ಹಿಂದೂ ಧರ್ಮದಲ್ಲಿ, ಈ ಸಮಯವನ್ನು ಬೆಳಗ್ಗೆ ಏಳಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ರಾತ್ರಿ ಅಂತ್ಯವಾಗುತ್ತದೆ ಮತ್ತು ಹಗಲು ಪಾರಂಭಗೊಳ್ಳುತ್ತದೆ. ಆಮಾನ್ಯವಾಗಿ ಬೆಳಗ್ಗೆ 4 ರಿಂದ 5.30 ರವರೆಗಿನ ಸಮಯವನ್ನು ಬ್ರಹ್ಮ ಮುಹೂರ್ತದ ಸಮಯ ಎಂದು ಪರಿಗಣಿಸಲಾಗುತ್ತದೆ. ಇದರ ಅವಧಿ ಒಂದೂವರೆ ಗಂಟೆಯದ್ದಾಗಿರುತ್ತದೆ.
ಪೂಜೆ
ಧರ್ಮಗ್ರಂಥಗಳ ಪ್ರಕಾರ, ಇದನ್ನು ಮನುಷ್ಯರು ಎದ್ದೇಳಬೇಕಾದ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಏಳುವುದರಿಂದ ಕಾಯಿಲೆಗಳು ಬರುವುದಿಲ್ಲ ಮತ್ತು ಆರೋಗ್ಯ ಸುಧಾರಿಸುತ್ತದೆ ಎನ್ನಲಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಪೂಜೆ ಮಾಡುವುದರಿಂದ ದೇವರು ಪ್ರಸನ್ನನಾಗಿ ಭಕ್ತಾದಿಗಳ ಮೇಲೆ ತನ್ನ ಕೃಪಾ ದೃಷ್ಟಿ ಬೀರುತ್ತಾನೆ ಎಂದು ಭಾವಿಸಲಾಗುತ್ತದೆ.
ಇದನ್ನೂ ಓದಿ-ಸಿಂಗಲ್ ಸಾರಥಿಗಳಿಗೆ ಸೂಪರ್ ಡೇಟಿಂಗ್ ಆಪ್ಸ್.. ಮಿಸ್ ಮಾಡದೇ ನೋಡಿ, ಹುಷಾರಾಗಿ ಬಳಸಿ..!
ದೇವ-ದೇವತೆಗಳ ಆಗಮನ
ಶಾಸ್ತ್ರಗಳ ಪ್ರಕಾರ, ಪ್ರಾಚೀನ ಕಾಲದಿಂದಲೂ ಋಷಿಗಳು ಈ ಸಮಯದಲ್ಲಿ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ, ದೇವರ ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಸಮಯವನ್ನು ದೇವತೆಗಳ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ದೇವರು ಮತ್ತು ಪೂರ್ವಜರ ಆಗಮನವಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ಇದನ್ನೂ ಓದಿ-ಡಿಸೆಂಬರ್‌ನಲ್ಲಿ ರೂಪುಗೊಳ್ಳುವುದು ಧನರಾಜ ಯೋಗ.! 3 ರಾಶಿಯವರಿಗೆ ಧನ ವೃಷ್ಠಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.