ಡಿಸೆಂಬರ್‌ನಲ್ಲಿ ರೂಪುಗೊಳ್ಳುವುದು ಧನರಾಜ ಯೋಗ.! 3 ರಾಶಿಯವರಿಗೆ ಧನ ವೃಷ್ಠಿ

ಶುಕ್ರನ ರಾಶಿಯಾದ ವೃಷಭದಲ್ಲಿ ಮಂಗಳ ಗ್ರಹವಿದ್ದರೆ, ಮಂಗಳನ ಅಧಿಪತ್ಯದ ವೃಶ್ಚಿಕದಲ್ಲಿ ಶುಕ್ರ ಗ್ರಹದ ಪ್ರವೇಶವಾಗಿದೆ. ಈ ಹಿನ್ನೆಲೆಯಲ್ಲಿ, ಮಂಗಳ ಮತ್ತು ಶುಕ್ರ  ಒಟ್ಟಿಗೆ ಸೇರಿ ಧನರಾಜಯೋಗವನ್ನು ಉಂಟುಮಾಡುತ್ತದೆ. 

Written by - Ranjitha R K | Last Updated : Nov 25, 2022, 01:45 PM IST
  • ನವೆಂಬರ್ 13 ರಂದು, ವೃಷಭ ರಾಶಿಗೆ ಮಂಗಳನ ಪ್ರವೇಶ
  • ವೃಶ್ಚಿಕ ರಾಶಿಯಲ್ಲಿ ಶುಕ್ರ
  • ಧನ ರಾಜಯೋಗವು ಈ ರಾಶಿಯವರಿಗೆ ಲಾಭವನ್ನು ನೀಡುತ್ತದೆ
ಡಿಸೆಂಬರ್‌ನಲ್ಲಿ ರೂಪುಗೊಳ್ಳುವುದು ಧನರಾಜ ಯೋಗ.! 3 ರಾಶಿಯವರಿಗೆ  ಧನ ವೃಷ್ಠಿ  title=
December 2022 Rajyog

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹವು ತನ್ನ ರಾಶಿಯನ್ನು ಪರಿವರ್ತಿಸುವಾಗ, ಅದರ ಪ್ರಭಾವ ಎಲ್ಲಾ 12 ರಾಶಿಗಳ ಮೇಲೂ ಬೀಳುತ್ತದೆ. ನವೆಂಬರ್ 13 ರಂದು, ಮಂಗಳ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿದೆ. ಶುಕ್ರ ಗ್ರಹ ಕೂಡಾ ತನ್ನ ರಾಶಿಯನ್ನು ಬದಲಾಯಿಸಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ಈ ಮೂಲಕ ಶುಕ್ರನ ರಾಶಿಯಾದ ವೃಷಭದಲ್ಲಿ ಮಂಗಳ ಗ್ರಹವಿದ್ದರೆ, ಮಂಗಳನ ಅಧಿಪತ್ಯದ ವೃಶ್ಚಿಕದಲ್ಲಿ ಶುಕ್ರ ಗ್ರಹದ ಪ್ರವೇಶವಾಗಿದೆ. ಈ ಹಿನ್ನೆಲೆಯಲ್ಲಿ, ಮಂಗಳ ಮತ್ತು ಶುಕ್ರ  ಒಟ್ಟಿಗೆ ಸೇರಿ ಧನರಾಜಯೋಗವನ್ನು ಉಂಟುಮಾಡುತ್ತದೆ. ಈ ರಾಜಯೋಗವು 3 ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವ ಜನರು ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಪಡೆಯುತ್ತಾರೆ. 

ಧನ ರಾಜಯೋಗವು ಈ ರಾಶಿಯವರಿಗೆ ಲಾಭವನ್ನು ನೀಡುತ್ತದೆ :
ವೃಷಭ ರಾಶಿ : ವೃಷಭ ರಾಶಿಯವರಿಗೆ ಧನ ರಾಜಯೋಗವು ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರ ಧೈರ್ಯ, ಆತ್ಮವಿಶ್ವಾಸ ಹೆಚ್ಚಲಿದೆ. ಜನರು ಸುಲಭವಾಗಿ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಶೀಘ್ರದಲ್ಲೇ ಮದುವೆ ಮಾತುಕತೆ ನಡೆಯಬಹುದು. ಗ್ಲಾಮರ್, ಮಾಧ್ಯಮಕ್ಕೆ ಸಂಬಂಧಿಸಿದ ಜನರಿಗೆ ಪ್ರಯೋಜನವಾಗಲಿದೆ.  

ಇದನ್ನೂ ಓದಿ : Mangal Transit In Taurus: 120 ದಿನ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ಈ 3 ರಾಶಿಯವರು ವೃತ್ತಿ ಜೀವನದಲ್ಲಿ ಮುನ್ನಡೆಯುವುದು ಖಚಿತ

ಕರ್ಕಾಟಕ ರಾಶಿ : ಈ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ಸಮಯವು ವೃತ್ತಿಜೀವನಕ್ಕೆ ಉತ್ತಮವಾಗಿರುತ್ತದೆ. ಹಣ-ಸ್ಥಾನ-ಗೌರವ ಸಿಗಲಿದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ.

ಧನು ರಾಶಿ : ಧನ ರಾಜಯೋಗ ಉಂಟಾಗುವುದರಿಂದ ಧನು ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಮಂಗಳ ಮತ್ತು ಶುಕ್ರ ಇಬ್ಬರೂ ಧನು ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ಕರುಣಿಸಲಿದ್ದಾರೆ. ಜೀವನದಲ್ಲಿ ನೆಮ್ಮದಿಗಳು ಹೆಚ್ಚಾಗುತ್ತವೆ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ. ಹೊಸ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವವರ ನಿರೀಕ್ಷೆ ಕೊನೆಯಾಗಲಿದೆ. 

ಇದನ್ನೂ ಓದಿ : 2023ರಲ್ಲಿ ಈ ಮೂರು ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ಮಹಾತ್ಮ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News