ಈ ಬೀಜಗಳನ್ನು ಒಂದು ವಾರ ಸೇವಿಸಿ ! ಉದುರುವ ಕೂದಲಿಗೆ ಶಾಶ್ವತ ಪರಿಹಾರ ಗ್ಯಾರಂಟಿ

ಕೂದಲು ಉದುರುವುದು ಸಾಮಾನ್ಯ ವಿಷಯ. ಆದರೆ ಕೂದಲು ಉದುರಿದ ಸ್ಥಳದಲ್ಲಿ ಮತ್ತೆ ಕೂದಲು ಬೆಳೆಯದೆ ಇದ್ದರೆ   ಅದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಈ ಬೀಜಗಳನ್ನು ತಿಂದರೆ ಕೂದಲು ಉದುರುವುದನ್ನು ತಡೆಯುತ್ತದೆ ಮಾತ್ರವಲ್ಲ ಕೂದಲು ದಟ್ಟವಾಗಿ ಬೆಳೆಯುತ್ತದೆ. 

Written by - Ranjitha R K | Last Updated : Sep 4, 2023, 09:39 AM IST
  • ಕೂದಲು ಉದುರುವುದು ಸಾಮಾನ್ಯ ಸಂಗತಿಯಾಗಿದೆ.
  • ಒತ್ತಡ ಮತ್ತು ದೌರ್ಬಲ್ಯವು ಇದಕ್ಕೆ ಕಾರಣವಾಗಬಹುದು.
  • ಕೂದಲು ಉದುರುವ ಸಮಯದಲ್ಲಿ ತಿನ್ನಬೇಕಾದ ಕೆಲವು ಬೀಜಗಳಿವೆ.
ಈ ಬೀಜಗಳನ್ನು ಒಂದು ವಾರ ಸೇವಿಸಿ !  ಉದುರುವ ಕೂದಲಿಗೆ ಶಾಶ್ವತ ಪರಿಹಾರ ಗ್ಯಾರಂಟಿ  title=

ಬೆಂಗಳೂರು : ಕೂದಲು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೂದಲಿನ ಆರೈಕೆಗಾಗಿ ಜನರು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ದುಬಾರಿ ಶಾಂಪೂ, ಕಂಡಿಶನರ್, ಎಣ್ಣೆ ಹೀಗೆ ಅನೇಕ   ಉತ್ಪನ್ನಗಳನ್ನು ಬಳಸುತ್ತಾರೆ. ಆದರೂ ಯಾವುದೇ ರೀತಿಯ ಪರಿಹಾರ ಸಿಗದೇ ಹೋದರೆ ಗೂಗಲ್ ಮೂಲಕ ಪರಿಹಾರ ಹುಡುಕಲು ಆರಂಭಿಸುತ್ತಾರೆ. ನೀವು ಕೂಡಾ ತಲೆ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದು, ಪರಿಹಾರಕ್ಕಾಗಿ ಹುಡುಕಾಡುತ್ತಿದ್ದರೆ, ನಿಮ್ಮ ಸಮಸ್ಯೆಗೆ ಸುಲಭ ಪರಿಹಾರವನ್ನು ನಾವು ಹೇಳಲಿದ್ದೇವೆ. ಕೆಲವು ಬೀಜಗಳನ್ನು ನಿತ್ಯ ಸೇವಿಸಿದರೆ ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ನಿಲ್ಲುತ್ತದೆ.  

ಈ ಬೀಜಗಳು ಕೂದಲು ಉದುರುವುದನ್ನು ತಡೆಯುತ್ತದೆ  : 
ಮೆಂತ್ಯೆ ಬೀಜಗಳು : 
ಮೆಂತ್ಯೆಯನ್ನು ತಿನ್ನುವುದರಿಂದ ಕೂದಲು ಉದುರುವುದನ್ನು  ಕಡಿಮೆ ಮಾಡಬಹುದು. ಇದಕ್ಕಾಗಿ ಮೊದಲು ಮೆಂತ್ಯೆಯನ್ನು ರಾತ್ರಿಯಿಡೀ  ನೀರಿನಲ್ಲಿ ಹಾಕಿ ನೆನೆಸಿಡಿ. ನಂತರ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳನ್ನು ಜಗಿದು ತಿನ್ನಬೇಕು ಮಾತ್ರವಲ್ಲ  ಕಾಳು ಗಳನ್ನು ನೆನೆಸಿಟ್ಟ ನೀರನ್ನು ಕೂಡಾ ಕುಡಿಯಬೇಕು. ಮೆಂತ್ಯೆಯಲ್ಲಿರುವ ಕಬ್ಬಿಣದ ಅಂಶವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಈ ಕಾರಣದಿಂದಾಗಿ, ಕೂದಲು ಮತ್ತು ಮುಖದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ : ನಿರ್ಜೀವವಾಗಿ ಉದುರುತ್ತಿರುವ ತಲೆ ಕೂದಲುಗಳಿಗೆ ಈ ಗಿಡಮೂಲಿಕೆ ಎಣ್ಣೆ ರಾಮಬಾಣ ಉಪಾಯ!

ಕುಂಬಳಕಾಯಿ ಬೀಜ : 
ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣದ ಅಂಶವು ಹೇರಳವಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೂದಲು ಮತ್ತು ಮುಖಕ್ಕೂ ಹೊಳಪನ್ನು ನೀಡುತ್ತದೆ. ಕುಂಬಳಕಾಯಿ ಬೀಜಗಳಲ್ಲಿ ವಿಟಮಿನ್ ಸಿ ಇದೆ.  ಆದ್ದರಿಂದ ಇದು ರೋಗನಿರೋಧಕ ಶಕ್ತಿಯನ್ನು ಕೂಡಾ ಬಲಪಡಿಸುತ್ತದೆ.ಇದನ್ನು ಒಣ ಹಣ್ಣುಗಳು ಅಥವಾ ತರಕಾರಿಗಳೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ತಿನ್ನಬೇಕು.  

ಅಗಸೆ ಬೀಜಗಳು : 
ಅಗಸೆ ಬೀಜಗಳಲ್ಲಿ ಪ್ರೋಟೀನ್, ಒಮೆಗಾ, ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಪ್ರತಿನಿತ್ಯ ಇದನ್ನು ತಿಂದರೆ  ಕೂದಲಿಗೆ ಅಗತ್ಯ ಪೋಷಣೆ ಸಿಗುತ್ತದೆ. ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮಾತ್ರವಲ್ಲ ಉದುರಿದ ಕೂದಲಿನ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ಅಗಸೆ ಬೀಜಗಳು ಕೂದಲಿಗೆ ಮಾತ್ರವಲ್ಲ ಮುಖಕ್ಕೂ ಲಾಭ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಕೂಡಾ ಇದು ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ : ತುಳಸಿ ಎಲೆಯಿಂದ ಕೂಡ ಬಿಳಿ ಕೂದಲು ಕಪ್ಪಾಗುತ್ತದೆ.!

ಎಳ್ಳು : 
ಎಳ್ಳು ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದು ಹೇರ್ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಕಪ್ಪು ಎಳ್ಳು ವಿಟಮಿನ್-ಬಿ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಕೂದಲು ಬಿಳಿಯಾಗುವುದನ್ನು ಕೂಡಾ ತಡೆಯುತ್ತದೆ. ಇದರ ವಿಟಮಿನ್ ಇ  ಮತ್ತು ಲಿಗ್ನಾನ್ ಅಂಶವು ಚರ್ಮವನ್ನು ಪೋಷಿಸುತ್ತದೆ.  
ಎಳ್ಳಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಎಳ್ಳು ಒಂದು ರೀತಿಯಲ್ಲಿ  ದೇಹದ ಕ್ಯಾಲ್ಸಿಯಂ ಮಟ್ಟವನ್ನು ಸುಧಾರಿಸುತ್ತದೆ.  

ಸೂರ್ಯಕಾಂತಿ ಬೀಜಗಳು : 
ಸೂರ್ಯಕಾಂತಿ ಬೀಜಗಳು ದೇಹಕ್ಕೆ ತುಂಬಾ ಪೌಷ್ಟಿಕವಾಗಿದೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಜಿಂಕ್ ಮತ್ತು ಒಮೆಗಾ 3 ಮತ್ತು ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವುದರಿಂದ ಅವು ಕೂದಲನ್ನು ರಕ್ಷಿಸುತ್ತವೆ.

ಇದನ್ನೂ ಓದಿ : ಖರ್ಜೂರದ ಅದ್ಭುತ ಸೌಂದರ್ಯ ಪ್ರಯೋಜನಗಳಿವು...ಪ್ರತಿದಿನ ತಪ್ಪದೇ ಸೇವಿಸಿ..!

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News