Chanakya Niti: ಇಂತಹ ಮಹಿಳೆ ಸಂಗಾತಿಯಾಗಿ ಸಿಗುವುದು ಎಲ್ಲರ ಭಾಗ್ಯದಲ್ಲಿರಲ್ಲ!

Today's Chanakya Niti: ಸಾಮಾನ್ಯವಾಗಿ ಕಿರುಚಾಡುವ ಮಹಿಳೆಯರಿಂದ ಬಹುತೇಕ ಜನರು ಅಂತರ ಕಾಯ್ದುಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ, ಈ ರೀತಿಯ ಮಹಿಳೆಯರು ಪುರುಷರ ಪಾಲಿಗೆ ತುಂಬಾ ಲಕ್ಕಿಯಾಗಿರುತ್ತಾರೆ ಎಂದು ಹೇಳಲಾಗಿದೆ.

Written by - Nitin Tabib | Last Updated : Oct 4, 2022, 07:27 PM IST
  • ಕೆಲ ಪುರುಷರಿಗೆ ಶಾಂತವಿರುವ ಮಹಿಳೆಯರು ಇಷ್ಟವಾದರೆ,
  • ಕೆಲ ಪುರುಷರಿಗೆ ಕಿರುಚಾಡುವ ಮಹಿಳೆಯರು ಇಷ್ಟವಾಗುತ್ತಾರೆ.
  • ಆದರೆ, ಬಹುತೇಕ ಪುರುಷರು ಅಳುಮುಂಜಿ-ಕಿರುಚಾಡುವ ಮಹಿಳೆಯರಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಾರೆ ಎಂದು ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ
Chanakya Niti: ಇಂತಹ ಮಹಿಳೆ ಸಂಗಾತಿಯಾಗಿ ಸಿಗುವುದು ಎಲ್ಲರ ಭಾಗ್ಯದಲ್ಲಿರಲ್ಲ! title=
Chanakya Niti

Chanakya Niti Motivation: ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ ಹಾಗೂ ವ್ಯಕ್ತಿತ್ವ ಭಿನ್ನ-ಭಿನ್ನವಾಗಿರುತ್ತದೆ. ಮಹಿಳೆಯರ ವಿಷಯದಲ್ಲಿ ಯಾವ ವ್ಯಕ್ತಿಗೆ ಎಂತಹ ಮಹಿಳೆ ಇಷ್ಟ ಎಂಬುದು ಹೇಳುವುದು ಸ್ವಲ್ಪ ಕಷ್ಟಸಾಧ್ಯವೇ ಸರಿ. ಕೆಲ ಪುರುಷರಿಗೆ ಶಾಂತವಿರುವ ಮಹಿಳೆಯರು ಇಷ್ಟವಾದರೆ, ಕೆಲ ಪುರುಷರಿಗೆ ಕಿರುಚಾಡುವ ಮಹಿಳೆಯರು ಇಷ್ಟವಾಗುತ್ತಾರೆ. ಆದರೆ, ಬಹುತೇಕ ಪುರುಷರು ಅಳುಮುಂಜಿ-ಕಿರುಚಾಡುವ ಮಹಿಳೆಯರಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಾರೆ ಎಂದು ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಆದರೆ, ಇಂತಹ ಮಹಿಳೆಯರು ಪುರುಷರ ಪಾಲಿಗೆ ತುಂಬಾ ಲಕ್ಕಿ ಸಾಬೀತಾಗುತ್ತಾರೆ ಎಂದೂ ಕೂಡ ಅವರು ಹೇಳಿದ್ದಾರೆ. 

ಆಚಾರ್ಯ ಚಾಣಕ್ಯರ ಪ್ರಕಾರ, ಮಾತು-ಮಾತಿಗೆ ಅಳುವ ಹಾಗೂ ಕಿರುಚಾಡುವ ಮಹಿಳೆಯರು ಯಾರಿಗೆ ಏನೂ ಕಮ್ಮಿ ಇರುವುದಿಲ್ಲ. ಅಷ್ಟೇ ಅಲ್ಲ ಅವರು ಇತರ ಮಹಿಳೆಯರನ್ನು ಕೂಡ ಮೀರಿಸುತ್ತಾರೆ. ಇಂತಹ ಮಹಿಳೆಯರ ಚರಿತ್ರೆ ತುಂಬಾ ವಿಚಿತ್ರವಾಗಿರುತ್ತದೆ. ಆದರೆ, ಯಾವ ಪುರುಷ ಇಂತಹ ಮಹಿಳೆಯನ್ನು ವರಿಸುತ್ತಾನೋ, ಆತನ ಜೀವನವೇ ಬದಲಾಗುತ್ತದೆ. ಹೌದು, ಚಾಣಕ್ಯರು ಹೇಳುವ ಪ್ರಕಾರ ಇಂತಹ ಮಹಿಳೆಯರು ಪುರುಷರ ಪಾಲಿಗೆ ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ.

ಮುಕ್ತ ಹಾಗೂ ನೈಜ ವಿಚಾರ ಹೊಂದಿರುತ್ತಾರೆ
ಆಚಾರ್ಯ ಚಾಣಕ್ಯರ ಪ್ರಕಾರ, ಮಾತು-ಮಾತಿಗೆ ಅಳುವ ಅಥವಾ ಕಿರುಚಾಡುವ ಇಂತಹ ಸ್ತ್ರೀಯನ್ನು ಗೌರವಿಸಬೇಕು. ಏಕೆಂದರೆ ಇಂತಹ ಸ್ತ್ರೀ ನಿಮಗೆ ಸಿಗುವುದು ತುಂಬಾ ವಿರಳ. ಇಂತಹ ಮಹಿಳೆಯರು ಕುಟುಂಬದ ಪಾಲಿಗೆ ತುಂಬಾ ಉತ್ತಮ ಸಾಬೀತಾಗುತ್ತಾರೆ. ತುಂಬಾ ನಿಜವಾದ ವಿಚಾರಧಾರೆಯವರಾಗಿರುತ್ತಾರೆ ಇಂತಹ ಮಹಿಳೆಯರು. ಇವರು ತಮ್ಮ ಮನಸ್ಸಿನಲ್ಲಿರುವುದನ್ನು ನೆರವಾಗಿ ಹೇಳುತ್ತಾರೆ. ಇವರ ಮನಸ್ಸಿನಲ್ಲಿ ಯಾವುದೇ ರೀತಿಯ ದ್ವೇಷ ಭಾವನೆ ಇರುವುದಿಲ್ಲ. 

ಈ ರೀತಿಯ ಮಹಿಳೆಯರು ತಮ್ಮ ಸಂಗಾತಿಯಿಂದ ಎಂದಿಗೂ ದೂರ ಹೋಗಲು ಬಯುವುದಿಲ್ಲ. ಕುಟುಂಬ ಸದಸ್ಯರ ಬಗ್ಗೆ ತುಂಬಾ ಕಾಳಜಿವಹಿಸುತ್ತಾಳೆ. ಇವರ ಹೃದಯ ತುಂಬಾ ಕೋಮಲವಾಗಿರುತ್ತದೆ. ಅಷ್ಟೇ ಅಲ್ಲ ಇಂತಹ ಯುವತಿಯರು ಪ್ರತಿಯೊಬ್ಬರ ಭಾವನೆಗೆ ಬೆಲೆ ನೀಡುತ್ತಾರೆ. ಹೀಗಾಗಿ ಇಂತಹ ಮಹಿಳೆಯರು ಯಾರಿಗೂ ಕೂಡ ಸುಲಭವಾಗಿ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೂಡ ಕಳೆದುಕೊಳ್ಳಬಾರದು. ಯಾವುದೇ ರೀತಿಯ ತಪ್ಪು ಇಲ್ಲದಿದ್ದರೂ ಕೂಡ ಮಾತು-ಮಾತಿಗೆ ಅಳುವ ಮಹಿಳೆಯರ ಹೃದಯದಲ್ಲಿ ಮಮತೆ ತುಂಬಿತುಳುಕುತಿರುತ್ತದೆ ಎನ್ನಲಾಗುತ್ತದೆ. 

ಇದನ್ನೂ ಓದಿ-Dussehra 2022: ಜೀವನದಲ್ಲಿನ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಹೊಂದಬೇಕೆ? ನಾಳೆ ತಪ್ಪದೆ ಈ ಕೆಲಸ ಮಾಡಿ

ಹಲವು ರೀತಿಯ ರೋಗಗಳು ದೂರಾಗುತ್ತವೆ
ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಅಳುವುದರಿಂದ ಹಾಗೂ ಕಿರುಚಾದುವುದರಿಂದ ಮಹಿಳೆಯರಲ್ಲಿ ಹಲವು ಕಾಯಿಲೆಗಳು ದೂರಾಗುತ್ತವೆ. ಅಷ್ಟೇ ಅಲ್ಲ ಅಳುವುದರಿಂದ ಮನಸ್ಸು ಕೂಡ ಹಗುರಾಗುತ್ತದೆ ಮತ್ತು ಒತ್ತಡ ಕೂಡ ದೂರಾಗುತ್ತದೆ. ಇಂತಹ ಮಹಿಳೆಯರು ಎಲ್ಲರ ಭಾಗ್ಯದಲ್ಲಿ ಇರುವುದಿಲ್ಲ. ಹೃದಯದಲ್ಲಿ ಇವರು ಬೊಂಬೆಯಂತೆ ಇರುತ್ತಾರೆ. ಇವರು ಯಾರ ಹೃದಯವನ್ನು ಸುಲಭವಾಗಿ ಮುದ್ರಿಯುವುದಿಲ್ಲ. ಎಲ್ಲರ ಭಾವನೆಗಳಿಗೆ ಬೆಲೆ ಕೊಡುವ ಸ್ವಭಾವ ಇವರದ್ದಾಗಿರುತ್ತದೆ. ಪ್ರಸಂಗ ಎದುರಾದರೆ ಒಂದು ವೇಳೆ ತಾನು ಖಾಲಿ ಹೊಟ್ಟೆ ಇದ್ದು, ಎದುರಿಗೆ ಇರುವವರಿಗೆ ಅನ್ನ ಉಣಬಡಿಸುವ ಸ್ವಭಾವ ಇಂತಹ ಮಹಿಳೆಯರದ್ದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಇದನ್ನೂ ಓದಿ- Astro: ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ತುಂಬಾ ಲೇಟ್ ಮಾಡುತ್ತಾರೆ ಈ 5 ರಾಶಿಗಳ ಜನ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News