Crystal Ganesha Idol - ಸುಖ-ಸಮೃದ್ಧಿ ಮತ್ತು ಭಾಗ್ಯ ಬೆಳಗಲು ಮನೆಯಲ್ಲಿರಲಿ ಗಣೇಶನ ಈ ವಿಗ್ರಹ

Crystal Ganesha Idol: ಹಿಂದೂ ಧರ್ಮದಲ್ಲಿ ನಂಬಿಕೆಯ ಹಲವು ಪ್ರತೀಕಗಳಿವೆ. ಅವುಗಳಲ್ಲಿ ಶ್ರೀಗಣೇಶ ಕೂಡ ಒಬ್ಬ. ಸಾಮಾನ್ಯವಾಗಿ ಶ್ರೀಗಣೇಶನನ್ನು ವಿಘ್ನಹರ್ತಾ ಎನ್ದೂಕೂದ ಕರೆಯಲಾಗುತ್ತದೆ. ಇದರ ಜೊತೆಗೆ ಶ್ರೀ ಗಣೇಶ ಸುಖ-ಸಮೃದ್ಧಿ ಹಾಗೂ ವೈಭವದ ಸಂಕೇತ ಕೂಡ ಹೌದು. ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಯಲ್ಲಿ ಶ್ರೀ ಗಣೇಶನ ವಿಗ್ರಹ ಇಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಖಾಯಂ ರೂಪದಲ್ಲಿ ನೆಲೆಸುತ್ತದೆ ಎನ್ನಲಾಗುತ್ತದೆ. ಇದಲ್ಲದೆ ಮನೆಯಲ್ಲಿ ಯಾವುದೇ ರೀತಿಯ ಕಲಹ ಉಂಟಾಗುವುದಿಲ್ಲ ಎನ್ನುತ್ತಾರೆ. 

Written by - Nitin Tabib | Last Updated : Feb 7, 2022, 02:01 PM IST
  • ಮನೆಯಲ್ಲಿ ಸುಖ ಸಮೃದ್ಧಿಯ ವಾಸ
  • ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.
  • ವಾಸ್ತುದೋಷ ಕೂಡ ನಿವಾರಣೆಯಾಗುತ್ತದೆ.
Crystal Ganesha Idol - ಸುಖ-ಸಮೃದ್ಧಿ ಮತ್ತು ಭಾಗ್ಯ ಬೆಳಗಲು ಮನೆಯಲ್ಲಿರಲಿ ಗಣೇಶನ ಈ ವಿಗ್ರಹ  title=
Crystal Ganesha For Home (File Photo)

ನವದೆಹಲಿ: Crystal Ganesha Idol - ಹಿಂದೂ ಧರ್ಮದಲ್ಲಿ ನಂಬಿಕೆಯ ಹಲವು ಪ್ರತೀಕಗಳಿವೆ. ಅವುಗಳಲ್ಲಿ ಶ್ರೀಗಣೇಶ ಕೂಡ ಒಬ್ಬ. ಸಾಮಾನ್ಯವಾಗಿ ಶ್ರೀಗಣೇಶನನ್ನು ವಿಘ್ನಹರ್ತಾ ಎನ್ದೂಕೂದ ಕರೆಯಲಾಗುತ್ತದೆ. ಇದರ ಜೊತೆಗೆ ಶ್ರೀ ಗಣೇಶ ಸುಖ-ಸಮೃದ್ಧಿ ಹಾಗೂ ವೈಭವದ ಸಂಕೇತ ಕೂಡ ಹೌದು. ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಯಲ್ಲಿ ಶ್ರೀ ಗಣೇಶನ (Crystal Ganesha Statue For Happiness) ವಿಗ್ರಹ ಇಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಖಾಯಂ ರೂಪದಲ್ಲಿ ನೆಲೆಸುತ್ತದೆ ಎನ್ನಲಾಗುತ್ತದೆ. ಇದಲ್ಲದೆ ಮನೆಯಲ್ಲಿ ಯಾವುದೇ ರೀತಿಯ ಕಲಹ ಉಂಟಾಗುವುದಿಲ್ಲ ಎನ್ನುತ್ತಾರೆ. ಕುಟುಂಬದಲ್ಲಿ ಯಾವಾಗಲು ಸಂತೋಷ ತುಂಬಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗಣೇಶನ ಸ್ಫಟಿಕ ಮೂರ್ತಿಯನ್ನು (Crystal Ganesha Idol) ಹೇಗೆ ಇಡಬೇಕು ಎಂಬುದನ್ನು ತಿಳಿಯೋಣ ಬನ್ನಿ. 

ಕ್ರಿಸ್ಟಲ್ ಗಣೇಶನ ಪ್ರತಿಮೆಯ ಪ್ರಯೋಜನಗಳು (Crystal Ganesha Statue Benefits)
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಸ್ಫಟಿಕದ ಮೂರ್ತಿಯನ್ನು ಮನೆಯಲ್ಲಿ ಇಡುವುದು ತುಂಬಾ ಶುಭಕರ. ಮನೆಯಲ್ಲಿ ಗಣೇಶನ ಸ್ಫಟಿಕ (Crystal Ganesha For Home) ಮೂರ್ತಿಯನ್ನು ಇಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗಿ ಧನಾತ್ಮಕತೆ ಬರುತ್ತದೆ. ಇದರೊಂದಿಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.

ಗಣೇಶನ ಸ್ಫಟಿಕ ಮೂರ್ತಿಯನ್ನು ಎಲ್ಲಿ ಪ್ರತಿಷ್ಠಾಪಿಸಬೇಕು?
ಮನೆಯ ಈಶಾನ್ಯ ಮೂಲೆಯಲ್ಲಿ ಗಣಪತಿಯ ಸ್ಫಟಿಕ ವಿಗ್ರಹವನ್ನು (Crystal Ganesha Idol For Prosperity) ಪ್ರತಿಷ್ಠಾಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, ಮನೆಯಲ್ಲಿ ಸಂತೋಷನೆಲೆಸುತ್ತದೆ. ಇದರೊಂದಿಗೆ ಕುಟುಂಬದ ಸದಸ್ಯರ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇದಲ್ಲದೇ ಮನೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಬಹುದು. ಆದರೆ ಗಣೇಶನ (Crystal Ganesha For Business) ಎರಡೂ ಪಾದಗಳು ನೆಲವನ್ನು ಸ್ಪರ್ಶಿಸುತ್ತಿವೆ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ಇದನ್ನೂ ಓದಿ-ಭಯಂಕರ ಆಕ್ಸಿಡೆಂಟ್ ನ Live Video, ನಡುರಸ್ತೇಲಿ ಟ್ರ್ಯಾಕ್ಟರ್ ಉಡಾಯಿಸಿದ ಲಾರಿ

ವಿಗ್ರಹವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ
ಗಣೇಶನ ವಿಗ್ರಹವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಅಲ್ಲದೆ, ಪೂಜೆಯ ಮನೆ ಇರುವಲ್ಲೆಲ್ಲಾ ಕೊಳಕು ಇರಬಾರದು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ, ಏಕೆಂದರೆ ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಪ್ರವೇಶಿಸುತ್ತದೆ. 

ಇದನ್ನೂ ಓದಿ-ICSE, ISC Result 2022: ಐಸಿಎಸ್ಇ ಹಾಗೂ ಐಎಸ್ ಸಿ ಸೆಮಿಸ್ಟರ್ 1 ಫಲಿತಾಂಶ ಪ್ರಕಟ, ಇಲ್ಲಿ ಫಲಿತಾಂಶ ಪರಿಶೀಲಿಸಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ) 

ಇದನ್ನೂ ಓದಿ-ಈ ರೀತಿ ಸುಲಭವಾಗಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿ, ಅದ್ಭುತ ಪ್ರಯೋಜನಗಳನ್ನು ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News