Daily Horoscope: ದಿನಭವಿಷ್ಯ 21-05-2021 Today astrology

ಶ್ರೀಕ್ಷೇತ್ರ ಚಾಮುಂಡೇಶ್ವರಿ  ದೇವಿ  ತಾಯಿಯ  ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯತಿಳಿದುಕೊಳ್ಳಿ.. 

Written by - Ranjitha R K | Last Updated : May 21, 2021, 07:22 AM IST
  • ಮಿಥುನ ರಾಶಿಯವರಿಗೆ ಗೃಹ ನಿರ್ಮಾಣ ಕಾರ್ಯಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗುವುದು
  • ಸಿಂಹರಾಶಿಯವರಿಗೆ ಆಸ್ತಿ ಖರೀದಿಗೆ ಉತ್ತಮ ಸಮಯಾವಕಾಶ
  • ಕನ್ಯಾ ರಾಶಿಯವರು ಜಾಋಇ ಬಿದ್ದು ದೇಹದ ಎಡಭಾಗಕ್ಕೆ ಏಟಾಗುವ ಸಾಧ್ಯತೆ
Daily Horoscope: ದಿನಭವಿಷ್ಯ 21-05-2021 Today astrology title=
Daily horoscope 21-05-2021 (file photo)

ಬೆಂಗಳೂರು : ನಿಮ್ಮ ನಿಮ್ಮ ರಾಶಿಗನುಗುಣವಾಗಿ ನಿಮ್ಮ ಇಂದಿನ ಭವಿಷ್ಯ ಹೀಗಿರಲಿದೆ..

ಮೇಷ:- ಹಿಂದಿನ ದುಡುಕುತನ, ಮುಂಗೋಪಗಳೆಲ್ಲ ಕಡಿಮೆಯಾಗಿ ಬಂಧುಗಳೊಡನೆ ಬೆರೆಯುವಿರಿ. ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯಗಳು ಯಶಸ್ವಿಯಾಗುವವು. ಸೋದರರಲ್ಲಿ ಒಗ್ಗಟ್ಟು ಮೂಡಿ ಕುಟುಂಬದ ಕಷ್ಟ ಸುಖಗಳಲ್ಲಿ ಸಮಪಾಲು ಹಂಚಿಕೊಳ್ಳುವಿರಿ.

ವೃಷಭ:- ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ. ಇದರಿಂದ ಆಗಬೇಕಾದ ಹಾಗೂ ಆಗಬೇಕಾಗಿರುವ ಕೆಲಸ ಸುಲಭವಾಗಿ ನೆರವೇರಲಿದೆ. ಚಾಡಿ ಮಾತುಗಳಿಗೆ ಕಿವಿ ಕೊಡಬೇಡಿ. ಹಿರಿ ಕಿರಿಯರೊಡನೆ ಸ್ನೇಹಭಾವದಿಂದ ವರ್ತಿಸಿ. ಮಕ್ಕಳ ಖರ್ಚು ವೆಚ್ಚಗಳು ಜಾಸ್ತಿ ಆಗುವವು. ಅನವಶ್ಯಕ ವಸ್ತುಗಳನ್ನು ಖರೀದಿಸಬೇಡಿ. 

ಮಿಥುನ:- ಗೃಹ ನಿರ್ಮಾಣ ಕಾರ್ಯದಲ್ಲಿ ನೀವು ತೊಡಗಿಕೊಂಡಿದ್ದಲ್ಲಿ ಮಧ್ಯದಲ್ಲಿ ತೀವ್ರ ಹಣಕಾಸಿನ ಮುಗ್ಗಟ್ಟು ತೋರುವುದು. ಈ ಸಂದರ್ಭದಲ್ಲಿ ಬೇರೆಯವರ ಬಳಿ ಸಾಲ ಕೇಳಿ ಬರಿಗೈಯಲ್ಲಿ ಬರುವಿರಿ. ಆಗ ಸೋದರಿಯರು ನಿಮಗೆ ಸಂಪೂರ್ಣ ಆರ್ಥಿಕ ಬೆಂಬಲ ಸೂಚಿಸುವರು. ಬಿಂಕ ತೋರದೆ ಅದನ್ನು ಸ್ವೀಕರಿಸಿ.

ಇದನ್ನೂ ಓದಿ : ಶುಕ್ರವಾರದ ವೃತ ಯಾರು ಮಾಡಬೇಕು ? ತಿಳಿದಿರಲಿ ವೃತದ ಸಂಪೂರ್ಣ ಮಾಹಿತಿ

ಕಟಕ:- ಖಾಸಗಿ ಕಂಪನಿ ನೌಕರರಿಗೆ ವೇತನ ಹೆಚ್ಚುವುದು. ಮನೆ ಸದಸ್ಯರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಸೌಹಾರ್ದತೆ ಮೂಡಲಿದೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗಿ. ಯಾವುದೇ ರೀತಿಯ ಹೊಗಳಿಕೆ ಅಥವಾ ತೆಗಳಿಕೆಗಳಿಗೆ ಕಿವಿ ಕೊಡದಿರಿ. ಸಹೋದ್ಯೋಗಿ ಕೊಡುವ ಎಲ್ಲಾ ಸಹಕಾರವನ್ನು ತೆಗೆದುಕೊಳ್ಳಿ.

ಸಿಂಹ:- ಮತ್ತೊಬ್ಬರ ಸಹಾಯವಿಲ್ಲದೆ ಕೆಲಸ ಮುಗಿಸಿದ ತೃಪ್ತಿ ನಿಮ್ಮದಾಗುವುದು. ಇದರಿಂದ ನಿಮಗೆ ಆತ್ಮವಿಶ್ವಾಸ ಮೂಡಿ ಅಭಿಮಾನ ಪಡುವಿರಿ. ಆಸ್ತಿ ಖರೀದಿಗೆ ಕಾಲ ಉತ್ತವವಾಗಿದ್ದು ಈ ಸಮಯದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಿ. ಹಣ ಸಹಾಯ ತಾನಾಗಿಯೇ ಬರುವುದರಿಂದ ಚಿಂತೆ ಬೇಡ. ಮತ್ತೊಬ್ಬರೊಂದಿಗೆ ವಿನಾಕಾರಣ ಮಾತಿನ ಚಕಮಕಿ ಬೇಡ.

ಕನ್ಯಾ:- ಮನೆಯ ಶುಭ ಕಾರ್ಯಗಳಿಗೆ ಹಣ ನೀರಿನಂತೆ ಖರ್ಚಾಗುವುದು. ಜಾರಿ ಬಿದ್ದು ದೇಹದ ಎಡ ಭಾಗಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಪ್ರಯಾಣ ಕಾಲದಲ್ಲಿ ನರಸಿಂಹ ದೇವರ ಸ್ತೋತ್ರ ಪಠಿಸಿ. ಪತ್ನಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಬೆಂಬಲ ನೀಡುವರು. ಸಹೋದ್ಯೋಗಿಗಳು ಕೊಡಲಿರುವ ಎಲ್ಲಾ ಸಹಕಾರಗಳನ್ನು ತೆಗೆದುಕೊಳ್ಳಿ. ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಲಿವೆ. ಆದಾಯ ಹೆಚ್ಚಲಿದೆ.

ಇದನ್ನೂ ಓದಿ : ಈ ನಾಲ್ಕು ಚಿಹ್ನೆ ಕೈಯಲ್ಲಿದ್ದರೆ ಹಣದ ಕೊರತೆಯಾಗುವುದೇ ಇಲ್ಲ; ದೇವರ ಕೃಪೆ ಸದಾ ಇವರ ಮೇಲಿರುತ್ತದೆ

ತುಲಾ:- ಈ ಹಿಂದೆ ಹೂಡಿಕೆ ಮಾಡಿದ್ದ ಹಣ ಅನಿರೀಕ್ಷಿತವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ಕೈ ಸೇರಲಿದೆ. ಅದು ಅಪವ್ಯಯವಾಗದಂತೆ ನೋಡಿಕೊಳ್ಳಿ. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಕ್ಷೇಮ. ತಪ್ಪಿದಲ್ಲಿ ಬಂಧುಗಳ ನಡುವೆ ಅಸಮಾಧಾನ ಹೊಗೆಯಾಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ನಿಮ್ಮ ತಂತ್ರಗಾರಿಕೆಗೆ ಎದುರಾಳಿಗಳು ಬೆಸ್ತು ಬೀಳುವರು.

ವೃಶ್ಚಿಕ:- ಹಿಡಿದ ಕಾರ್ಯ ಮುಗಿಸುವಂತಹ ಛಲಗಾರಿಕೆ ನಿಮ್ಮಲ್ಲಿದೆ. ಇದು ನಿಮ್ಮ ಯಶಸ್ಸಿನ ಗುಟ್ಟು. ಮಾತನಾಡುವ ಮೊದಲು ಅದರ ಪರಿಣಾಮದ ಬಗ್ಗೆ ಗಮನವಿರಲಿ. ಮತ್ತೊಬ್ಬರ ಮೇಲೆ ಛಲ ಅಥವಾ ಅಧಿಕಾರ ಸ್ಥಾಪಿಸಲು ಹೋಗಬೇಡಿ. ಇದರಿಂದ ಧನ ಮತ್ತು ಮಾನಗಳನ್ನು ಕಳೆದುಕೊಳ್ಳಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ. 

ಧನುಸ್ಸು:- ಜನ್ಮಸ್ಥ ಶನಿಯ ಪ್ರಭಾವದಿಂದ ನೀವು ಎಷ್ಟೇ ಚುರುಕಾಗಿ ಕೆಲಸ ಮಾಡಲು ಪ್ರಯತ್ನಿಸಿದರೂ ಕೆಲಸಗಳು ಮಂದಗತಿಯಲ್ಲಿ ಸಾಗುವವು. ಇದರಿಂದ ನಿಮ್ಮ ಸಹನೆಯ ಪರೀಕ್ಷೆಯೂ ಆಗಲಿದೆ. ಆದರೆ ಉತ್ತಮ ಫಲಿತಾಂಶ ಕಾಣುವಿರಿ. ಮತ್ತೊಬ್ಬರಿಗೆ ಕೊಟ್ಟ ಹಣ ಸಕಾಲಕ್ಕೆ ಮರಳಿ ಬರದೆ ನೀವೇ ಸಾಲಗಾರರಾಗುವ ಪ್ರಸಂಗ ಎದುರಾಗುವುದು. 

ಇದನ್ನೂ ಓದಿ : ಸುಖ ಶಾಂತಿ ಸಮೃದ್ಧಿಗಾಗಿ ಮನೆಯಿಂದ ತಕ್ಷಣ ಹೊರ ಹಾಕಿ ಈ ವಸ್ತುಗಳನ್ನು

ಮಕರ:- ಆತ್ಮೀಯರೆಂದು ನಂಬಿ ಯಾರ ಸಲಹೆ ಮೇರೆಗೆ ಆಸ್ತಿ ಖರೀದಿಗೆ ಯತ್ನಿಸಿದ್ದೀರೋ ಅವರಿಂದಲೇ ವಂಚನೆಗೆ ಒಳಗಾಗುವ ಸಂಭವ ಇದೆ. ಸಾಧ್ಯವಾದಲ್ಲಿ ಒಪ್ಪಂದ ರದ್ದು ಪಡಿಸಿ. ಇಲ್ಲವಾದಲ್ಲಿ ಮುಂಗಡ ಹಣಕ್ಕೆ ಸಂಚಕಾರ ಬರಲಿದೆ. ಭೂ ವ್ಯವಹಾರದಲ್ಲಿ ಕೈ ಹಾಕಲು ಹೋಗಲೇಬೇಡಿ. ಹೊಸದಾಗಿ ನೌಕರಿಗೆ ಸೇರಿದ ಯುವಕರಿಗೆ ವೃತ್ತಿಯಲ್ಲಿ ಗೊಂದಲ ಕಾಡಲಿದೆ.  

ಕುಂಭ:- ಆತಂಕದಿಂದಲೇ ತೆಗೆದುಕೊಂಡ ನಿರ್ಧಾರಗಳು ಇನ್ನು ಮುಂದೆ ಗಟ್ಟಿಯಾಗುತ್ತಲೇ ಹೋಗುತ್ತವೆ. ಇದರಿಂದ ನಿರ್ಧಾರಗಳು ಸ್ಪಷ್ಟವಾಗಿ ಕೈಗೊಳ್ಳಲಿರುವ ಕಾರ್ಯಗಳು ಹೊಸ ಸ್ವರೂಪ ಪಡೆಯಲಿವೆ. ಸರ್ಕಾರಿ ನೌಕರರಿಗೆ ಅದರಲ್ಲೂ ಉನ್ನತಾಧಿಕಾರಿಗಳಿಗೆ ಪದೋನ್ನತಿ ವರ್ಗಾವಣೆ ಆಗುವುದು. ಕೆಲಸ ಮಾಡುವ ಸ್ಥಳದಲ್ಲಿ ವರಿಷ್ಠರ ಗಮನವನ್ನು ನಿಮ್ಮತ್ತ ಸೆಳೆಯಲು ಪ್ರಯತ್ನಿಸಿ.

ಮೀನ:- ಮಾನಸಿಕ ಚಂಚಲತೆ ವಿಪರೀತವಾಗುವುದರಿಂದ ಅದನ್ನು ಹತೋಟಿಯಲ್ಲಿಡಲು ಧ್ಯಾನ ಯೋಗಗಳನ್ನು ಅಭ್ಯಾಸ ಮಾಡಿ. ಗಾಯಕರಿಗೆ ಶಿಷ್ಯರು ಹೆಚ್ಚುತ್ತಾ ಹೋಗುವರು. ನೆರೆಹೊರೆಯವರೊಂದಿಗೆ ಸೌಹಾರ್ದವಿರಲಿ. ಮತ್ತಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡಬೇಕಾದ ಪ್ರಸಂಗ ಎದುರಾಗುವುದು. ಇದರಿಂದ ನಿಮ್ಮ ಆರೊಗ್ಯ ಕೆಡುವುದು. 

ಇದನ್ನೂ ಓದಿ : Budh Rashi Parivartan: ಬುಧ ರಾಶಿ ಪರಿವರ್ತನೆ, ಈ ರಾಶಿಗಳಿಗೆ ಒಳ್ಳೆಯ ಸಮಯ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News