Horoscope: ದಿನಭವಿಷ್ಯ 25-09-2021 Today astrology

Horoscope, September 25, 2021: ಶನಿವಾರದ ಕೆಲಸದಲ್ಲಿ ಉತ್ಸಾಹವಿರುತ್ತದೆ. ಸಿಹಿ ಮಾತಿನಿಂದ ನೀವು ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುವಿರಿ. ನಿಮ್ಮ ಯಾವುದೇ ಕೆಲಸವನ್ನು ಚಾಣಾಕ್ಷ್ಯತೆಯಿಂದ ಯಶಸ್ವಿಗೊಳಿಸುತ್ತೀರಿ.

Written by - Puttaraj K Alur | Last Updated : Sep 25, 2021, 05:55 AM IST
  • ಶನಿವಾರದ ಶುಭದಿನದಂದು ಪ್ರತಿ ಹೆಜ್ಜೆಯಲ್ಲೂ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ
  • ಮೇಷ ರಾಶಿಯ ಜನರು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಗಳಿಸುತ್ತಾರೆ
  • ಮಿಥುನ ರಾಶಿಯವರಿಗೆ ಹೊಸ ಕೆಲಸವನ್ನು ಆರಂಭಿಸುವ ಆಲೋಚನೆ ಬರಬಹುದು
Horoscope: ದಿನಭವಿಷ್ಯ 25-09-2021 Today astrology title=
Horoscope, September 25, 2021

Daily Horoscope (ದಿನಭವಿಷ್ಯ 25-09-2021) :  ಶನಿವಾರ ಪ್ರತಿ ಹೆಜ್ಜೆಯಲ್ಲೂ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಹೊಸ ಉದ್ಯಮ ಆರಂಭಿಸಲು ನಿಮಗೆ ಉತ್ತಮ ಯೋಗವಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯು ಜೀವನದಲ್ಲಿ ಸಂತೋಷದಿಂದ ಇರಲು ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ನೀವು ಮೆಚ್ಚುಗೆ ಪಡೆಯುತ್ತೀರಿ. ಶನಿವಾರದ ಶುಭದಿನದಂದು ನಿಮಗೆ ಯಾವ ರೀತಿಯ ಸಹಕಾರಿಯಾಗುವುದು ಎಂಬುದನ್ನು ತಿಳಿದುಕೊಳ್ಳಿ…  

ಮೇಷ ರಾಶಿ: ಇಂದಿನ ನಿಮ್ಮ ದಿನ ಉತ್ತಮವಾಗಿ ಆರಂಭವಾಗಲಿದೆ. ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರಿ ವರ್ಗವು ವಿಶೇಷವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತದೆ, ಇದರಿಂದಾಗಿ ಲಾಭದ ಮೊತ್ತ ಮತ್ತಷ್ಟು ಹೆಚ್ಚಳವಾಗುವುದು. ಕುಟುಂಬದ ಸಂತೋಷಕ್ಕಾಗಿ ಈ ದಿನವು ಉತ್ತಮವಾಗಿರುತ್ತದೆ.

ವೃಷಭ ರಾಶಿ: ನಿಮ್ಮ ಈ ದಿನ ಚುರುಕುತನದಿಂದ ಕೂಡಿರುತ್ತದೆ. ನೀವು ಖಂಡಿತವಾಗಿಯೂ ಕೆಲಸದಲ್ಲಿ ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಈ ರಾಶಿಯವರು ಯಾವುದೇ ಮದುವೆ ಸಮಾರಂಭ ಅಥವಾ ಮಂಗಳಿಕ ಕೆಲಸದಲ್ಲಿ ಭಾಗವಹಿಸುತ್ತಾರೆ. ಮನಸ್ಸಿನಲ್ಲಿ ಸಂತೋಷವಿರುತ್ತದೆ. ಈ ದಿನ ಹಿರಿಯರು ಮತ್ತು ಸಜ್ಜನರನ್ನು ಗೌರವಿಸುವಲ್ಲಿ ನೀವು ಮುಂಚೂಣಿಯಲ್ಲಿರುತ್ತೀರಿ.

ಮಿಥುನ ರಾಶಿ: ಕೆಲಸದಲ್ಲಿ ಯಶಸ್ಸು ಇರುತ್ತದೆ. ಹೊಸ ವ್ಯಾಪಾರ ಆರಂಭಿಸುವ ಆಲೋಚನೆಗಳು ಮನಸ್ಸಿಗೆ ಬರಬಹುದು ಅಥವಾ ಅದಕ್ಕಾಗಿ ನಿಜವಾದ ದೃಢನಿಶ್ಚಯವನ್ನು ಮಾಡಬಹುದು. ಅದೃಷ್ಟವು ನಿಮಗೆ ಅನುಕೂಲವಾಗಲಿದೆ. ನೀವು ಒಳ್ಳೆಯ ಜನರೊಂದಿಗೆ ಸಂಪರ್ಕವನ್ನು ಹೊಂದುವರಿ, ಅವರು ನಿಮಗೆ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತಾರೆ ಮತ್ತು ಮಾರ್ಗದರ್ಶನ ಮಾಡುತ್ತಾರೆ.

ಕರ್ಕ ರಾಶಿ: ಮನಸ್ಸಿಗೆ ಸಂತೋಷವಾಗುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಪ್ರಯಾಣ ಇತ್ಯಾದಿಗಳನ್ನು ಆನಂದಿಸುವಿರಿ. ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತದೆ. ದಿನದ ಆರಂಭವು ನಿಮಗೆ ಉತ್ತಮವಾಗಿರುತ್ತದೆ.  ನೀವು ತೆಗೆದುಕೊಳ್ಳುವ ಯಾವುದೇ ನಿರ್ಣಯದಿಂದ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

ಇದನ್ನೂ ಓದಿ: ದೀಪಾವಳಿ : ಒಂದೇ ರಾಶಿಯಲ್ಲಿ ಸೇರಲಿವೆ 4 ಗ್ರಹಗಳು, ರೂಪುಗೊಳ್ಳಲಿದೆ ಶುಭ ಯೋಗ

ಸಿಂಹ ರಾಶಿ: ಕೌಟುಂಬಿಕ ಜೀವನವು ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯು ನಿಮಗೆ ಜೀವನವನ್ನು ಸಂತೋಷಪಡಿಸಲು ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಈ ದಿನ ಚೆನ್ನಾಗಿ ಆರಂಭವಾಗಲಿದೆ. ನೀವು ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಉತ್ತಮ ಪ್ರಯಾಣವನ್ನು ಹೊಂದಿರುತ್ತೀರಿ.

ಕನ್ಯಾ ರಾಶಿ: ನೀವು ಪೂರ್ಣ ಉತ್ಸಾಹದಿಂದ ಕಾಣಿಸಿಕೊಳ್ಳುವಿರಿ. ಅದೃಷ್ಟವು ನಿಮ್ಮೊಂದಿಗಿದೆ. ಕೆಲಸದಲ್ಲಿ ಉತ್ಸಾಹವಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನೀವು ಶನಿವಾರ ನಿಮ್ಮ ಸ್ನೇಹಿತ ಅಥವಾ ಪರಿಚಯಸ್ಥರನ್ನು ಭೇಟಿಯಾಗುತ್ತೀರಿ, ಈ ಕಾರಣದಿಂದಾಗಿ ನಿಮ್ಮ ಮುಖದಲ್ಲಿ ಸಂತೋಷವು ಪ್ರತಿಫಲಿಸುತ್ತದೆ.

ತುಲಾ ರಾಶಿ: ನೀವು ದಿನವಿಡೀ ತಾಜಾತನದಿಂದ ಇರುತ್ತೀರಿ. ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಕೌಟುಂಬಿಕ ವಿವಾದಗಳು ಕೊನೆಗೊಳ್ಳುತ್ತವೆ. ನಿಮ್ಮ ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ನೀವು ಬಿಡುವುದಿಲ್ಲ, ಆದರೆ ಅವರನ್ನು ಸೋಲಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ.

ವೃಶ್ಚಿಕ ರಾಶಿ: ಅದೃಷ್ಟ ನಿಮ್ಮೊಂದಿಗಿದೆ. ಮಂಗಳಿಕ ಕೆಲಸದಲ್ಲಿ ಭಾಗವಹಿಸುವರು. ನಿಮ್ಮ ಮಾತು ಸಿಹಿಯಾಗಿರುತ್ತದೆ, ಈ ಕಾರಣದಿಂದಾಗಿ ನೀವು ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುವಿರಿ. ನಿಮ್ಮ ಬುದ್ಧಿವಂತಿಕೆಯಿಂದ ಕೆಲಸವನ್ನು ಯಶಸ್ವಿಗೊಳಿಸುತ್ತೀರಿ. ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ.

ಇದನ್ನೂ ಓದಿ: ಮುಂದಿನ 8 ದಿನಗಳವರೆಗೆ ಈ 5 ರಾಶಿಯವರಿಗೆ ಆಗಲಿದೆ ಭಾರೀ ಧನಲಾಭ, ನಿಮ್ಮ ರಾಶಿ ಇದರಲ್ಲಿದೆಯಾ?

ಧನು ರಾಶಿ: ಯಾವುದೇ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ಬೆಳವಣಿಗೆಯ ಸಾಧ್ಯತೆಗಳಿವೆ ಮತ್ತು ಆರೋಗ್ಯವು ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ನೀವು ನೀಡಿದ ಸಲಹೆ ಇತರರಿಗೆ ಉಪಯುಕ್ತವಾಗುತ್ತದೆ. ಮನರಂಜನೆಯ ಸಾಧನಗಳಲ್ಲಿ ನೀವು ಆಸಕ್ತಿ ಹೊಂದಿರುತ್ತೀರಿ.

ಮಕರ ರಾಶಿ: ನಿಮ್ಮ ಈ ದಿನ ಬಹಳ ಚೆನ್ನಾಗಿರುವುದಿಲ್ಲ. ನೀವು ಸಂಘರ್ಷದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ನೀವು ಖಂಡಿತವಾಗಿಯೂ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಆದ್ದರಿಂದ ಏನನ್ನೂ ಬಿಟ್ಟುಕೊಡಬೇಡಿ ಮತ್ತು ಮುಂದೆ ಬರುವ ಕಠಿಣ ಪರಿಸ್ಥಿತಿಯನ್ನು ಎದುರಿಸಿ. ಕೆಲಸದ ಕ್ಷೇತ್ರದಲ್ಲ ಈ ದಿನವು ಪ್ರಯೋಜನಕಾರಿಯಾಗಿದೆ.

ಕುಂಭ ರಾಶಿ: ಅದೃಷ್ಟವು ನಿಮ್ಮೊಂದಿಗಿದೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಚೆನ್ನಾಗಿರುತ್ತದೆ. ನೀವು ಮಾತನಾಡುವ ಕಲೆಯನ್ನು ಹೊಂದಿದ್ದು, ಅದು ನಿಮ್ಮನ್ನು ಯಾವುದೇ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ನಿಮ್ಮ ಮಾನಸಿಕ ಆಲಸ್ಯವು ಕೊನೆಗೊಳ್ಳುತ್ತದೆ ಮತ್ತು ನೀವು ಎಲ್ಲಾ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ.

ಮೀನ ರಾಶಿ: ಶನಿವಾರವು ನಿಮಗೆ ಸ್ಮರಣೀಯವಾಗಿರುತ್ತದೆ. ಸಿಹಿ ಮಾತಿನ ಸಹಾಯದಿಂದ ಮತ್ತು ನಿಮ್ಮ ಬುದ್ಧಿವಂತಿಕೆಯಿಂದ ನೀವು ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಬುದ್ಧಿವಂತಿಕೆಯ ಪುರಾವೆಗಳನ್ನು ನೀಡುವ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ಉದ್ಯೋಗ ಮಾಡುವ ಜನರನ್ನು ಹಿರಿಯರಿಂದಲೂ ಪ್ರಶಂಸಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News