ನವದೆಹಲಿ : ಜೀವನದಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಒಮ್ಮೆ ವಿಪರೀತ ಧನಪ್ರಾಪ್ತಿಯಾದರೆ ಕೆಲವೊಮ್ಮೆ ಏನೇ ಮಾಡಿದರೂ ಹಣ ಕೈಯಲ್ಲಿ ನಿಲ್ಲುವುದೇ ಇಲ್ಲ. ಜ್ಯೋತಿಷ್ಯದ (Astrology) ಪ್ರಕಾರ ಇವುಗಳನ್ನು ತಿಳಿದುಕೊಳ್ಳಬಹುದು. ಮುಂಬರುವ 8 ದಿನಗಳ ಬಗ್ಗೆ ಮಾತನಾಡುವುದಾದರೆ, ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ಸಮಯವು 5 ರಾಶಿಗಳಿಗೆ (Zodiac sign) ಉತ್ತಮವಾಗಿರುತ್ತದೆ. ತುಲಾ ರಾಶಿಯಲ್ಲಿರುವ ಶುಕ್ರವು (Venus) ಈ ರಾಶಿಯಲ್ಲಿ ಅಕ್ಟೋಬರ್ 2, 2021 ರವರೆಗೆ ಇರುತ್ತದೆ. ಹೀಗಾಗಿ, ಈ 5 ರಾಶಿಗಳಿಗೆ ಭಾರೀ ಲಾಭವಾಗಲಿದೆ. ಶುಕ್ರ ಗ್ರಹವು ಭೌತಿಕ ಸಂತೋಷ, ಮದುವೆ, ಸೌಂದರ್ಯದ ಪ್ರತೀಕವಾಗಿದೆ. ಶುಕ್ರನು ಉತ್ತಮ ಸ್ಥಿತಿಯಲ್ಲಿದ್ದಾಗ, ಲಕ್ಷ್ಮೀದೇವಿಯ ಆಶೀರ್ವಾದವೂ ಇರುತ್ತದೆ.
ಈ ರಾಶಿಯವರ ಮೇಲಿರುತ್ತದೆ ಲಕ್ಷ್ಮೀ ಕಟಾಕ್ಷ :
ಕರ್ಕ: ಮುಂದಿನ 8 ದಿನಗಳು ಅನೇಕ ರಾಶಿಚಕ್ರದ (Zodiac sign) ಜನರಿಗೆ ಬಹಳ ಮಂಗಳಕರವಾಗಿರುತ್ತದೆ. ರಾಶಿಯವರು ಲಕ್ಷ್ಮೀಯ (Godess Lakshmi) ಕೃಪೆಯಿಂದ ಅಪಾರ ಹಣವನ್ನು ಗಳಿಸುತ್ತಾರೆ. ಪ್ರಮುಖ ಕೆಲಸಗಳಲ್ಲಿ ಯಶಸ್ವಿ ಸಿಗಲಿದೆ. ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ.
ಇದನ್ನೂ ಓದಿ : Palmistry: ತಮ್ಮ ಕೈಯಲ್ಲಿ ಈ ಗುರುತಿರುವ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರು
ಕನ್ಯಾ: ಕನ್ಯಾ ರಾಶಿಯ ಜನರಿಗೂ ಈ ಅವಧಿಯಲ್ಲಿ ಭಾರೀ ಹಣ ಲಾಭವಾಗಲಿದೆ. ಇದು ಅವರ ಆರ್ಥಿಕ ಸ್ಥಿತಿಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. ವೈವಾಹಿಕ ಜೀವನದಲ್ಲಿ (Married life) ಸಂತೋಷ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ.
ತುಲಾ : ಶುಕ್ರ ಗ್ರಹವು (Venus) ತುಲಾ ರಾಶಿಯಲ್ಲೇ ಇರಲಿದೆ. ಆದ್ದರಿಂದ ಇದು ಈ ರಾಶಿಚಕ್ರದ ಜನರಿಗೆ ಹೆಚ್ಚಿನ ಅನುಗ್ರಹವನ್ನು ನೀಡುತ್ತದೆ. ಅವರಿಗೆ ಈ ಸಮಯವು ವರದಾನಕ್ಕಿಂತ ಕಡಿಮೆಯಾಗಿರುವುದಿಲ್ಲ. ನೀವು ಜೀವನ ಸಂಗಾತಿಯೊಂದಿಗೆ ಸಂತೋಷದ ಜೀವನ ಮತ್ತು ಉತ್ತಮ ವೃತ್ತಿಯನ್ನು ಆನಂದಿಸುವಿರಿ.
ಇದನ್ನೂ ಓದಿ: Dreams In Pitru Paksha : ಪಿತೃ ಪಕ್ಷದಲ್ಲಿ ಬೀಳುವ ಕನಸುಗಳಿಗೂ ಇದೇ ವಿಶೇಷ ಅರ್ಥ
ಧನು: ಈ ಸಮಯ ಧನು ರಾಶಿಯ (Sagittarius)ಜನರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಹೊಸ ಕೆಲಸ ಆರಂಭಿಸಲು ಇದು ಒಳ್ಳೆಯ ಸಮಯ. ವೃತ್ತಿಜೀವನವು ಉತ್ತಮವಾಗಿರುತ್ತದೆ.
ಕುಂಭ (Aquarius): ಹಣ, ಗೌರವ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ. ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗಲಿವೆ. ನೀವು ವ್ಯಾಪಾರ ನಡೆಸುತ್ತಿದ್ದರೆ, ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಹೆಸರು ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.