ಶನಿಯ ಪ್ರಕೋಪದಿಂದ ಬಚಾವಾಗಲು ಡಿಸೆಂಬರ್ 25 ವಿಶೇಷ ದಿನ, ಅಂದು ಈ ಕೆಲಸ ಮಾಡಿ ನೋಡಿ

ಶನಿದೇವನನ್ನು ಮೆಚ್ಚಿಸಲು ಈ ವರ್ಷ ವಿಶೇಷ ಅವಕಾಶ ಸಿಗುತ್ತಿದೆ. 25 ಡಿಸೆಂಬರ್ 2021 ರಂದು, ಅಂತಹ ವಿಶೇಷ ಯೋಗ ರೂಪುಗೊಳ್ಳುತ್ತಿದೆ. 

Written by - Ranjitha R K | Last Updated : Dec 23, 2021, 04:41 PM IST
  • ಶನಿಯ ಕೋಪದಿಂದ ಪಾರಾಗಲು ಇದುವೇ ಸುವರ್ಣಾವಕಾಶ
  • ಡಿಸೆಂಬರ್ 25 ರಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ
  • ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ದೂರವಾಗಲಿದೆ ಎಲ್ಲಾ ಸಮಸ್ಯೆ
ಶನಿಯ ಪ್ರಕೋಪದಿಂದ ಬಚಾವಾಗಲು ಡಿಸೆಂಬರ್ 25 ವಿಶೇಷ ದಿನ, ಅಂದು ಈ ಕೆಲಸ ಮಾಡಿ ನೋಡಿ title=
ಶನಿಯ ಕೋಪದಿಂದ ಪಾರಾಗಲು ಇದುವೇ ಸುವರ್ಣಾವಕಾಶ (file photo)

ನವದೆಹಲಿ : ಶನಿ (Shani) ಅತ್ಯಂತ ಕ್ರೂರ ಗ್ರಹ. ಅವರ ಕೋಪಕ್ಕೆ ಮನುಷ್ಯರು ಮಾತ್ರವಲ್ಲದೆ ದೇವತೆಗಳೂ ಹೆದರುತ್ತಾರೆ. ಜೀವನ ಸರಿಯಾಗಿ ಸಾಗಬೇಕೆಂದರೆ ಶನಿದೇವನ (Shanidev) ಅವಕೃಪೆಯಿಂದ ದೂರವಿರಬೇಕು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಅಶುಭವಾಗಿದ್ದರೆ, ಅದನ್ನು ತಪ್ಪಿಸಲು, ಸಾಧ್ಯವಾದಷ್ಟು ಬೇಗ ಕ್ರಮಗಳನ್ನುಕೈಗೊಳ್ಳಬೇಕು. ಇಲ್ಲದಿದ್ದರೆ, ಶನಿಯು ತೀವ್ರ ಹಾನಿಯನ್ನುಂಟುಮಾಡುತ್ತಾನೆ. ಅವು ವ್ಯಕ್ತಿಯ ಆರೋಗ್ಯ (Health), ಸಂಪತ್ತು, ಪ್ರತಿಷ್ಠೆ, ವ್ಯಾಪಾರವನ್ನು ಹಾಳುಮಾಡುತ್ತವೆ. ಪ್ರತಿ ಕೆಲಸದಲ್ಲೂ ಸೋಲೇ ಎದುರಾಗುವಂತೆ ಮಾಡುತ್ತಾನೆ. ವರ್ಷದಲ್ಲಿ ಕೆಲವು ವಿಶೇಷ ದಿನಗಳಲ್ಲಿ ಶನಿದೇವರಿಗಾಗಿ ಈ ಪರಿಹಾರವನ್ನು ಮಾಡುವುದರಿಂದ ಶನಿದೇವರ ಕೃಪೆಗೆ ಪಾತ್ರರಾಗಬಹುದು. 
 
ಡಿಸೆಂಬರ್ 25 ರಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ : 
ಶನಿದೇವನನ್ನು (Shanideva) ಮೆಚ್ಚಿಸಲು ಈ ವರ್ಷ ವಿಶೇಷ ಅವಕಾಶ ಸಿಗುತ್ತಿದೆ. 25 ಡಿಸೆಂಬರ್ 2021 ರಂದು, ಅಂತಹ ವಿಶೇಷ ಯೋಗ ರೂಪುಗೊಳ್ಳುತ್ತಿದೆ. ಇದು ಶನಿಯ ಕೋಪದಿಂದ ಪರಿಹಾರವನ್ನು ಪಡೆಯುವಲ್ಲಿ ಬಹಳ ಮುಖ್ಯವಾಗಿದೆ. 2 ದಿನಗಳ ನಂತರ, ಅಂದರೆ ಶನಿವಾರ ಡಿಸೆಂಬರ್ 25 ಪೌಷ್ ಮಾಸದ ಕೃಷ್ಣ ಪಕ್ಷದ ಆರನೇ ದಿನಾಂಕವಾಗಿದೆ. ಈ ದಿನ ಚಂದ್ರನು ಸಿಂಹ ರಾಶಿಯಲ್ಲಿರುತ್ತಾನೆ (Leo). ಇದಲ್ಲದೇ ಬೆಳಗ್ಗೆ 11:23ರವರೆಗೆ ಪ್ರೀತಿ ಯೋಗ ರೂಪುಗೊಳ್ಳುತ್ತಿದೆ. ಇದಾದ ಬಳಿಕ ಆಯುಷ್ಮಾನ್ ಯೋಗವೂ (Ayushman yoga) ಈ ದಿನವೇ ರೂಪುಗೊಳ್ಳಲಿದೆ. ಶನಿ ದೇವನ ಆರಾಧನೆಗೆ ಇವೆರಡೂ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಮಾಡುವ ಶನಿದೇವನ ಪೂಜೆ ಮತ್ತು ಪರಿಹಾರಗಳು ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಫಲವನ್ನು ನೀಡುತ್ತವೆ. 

ಇದನ್ನೂ ಓದಿ :  Horoscope 2022: ಹೊಸ ವರ್ಷದಲ್ಲಿ ಈ ತಿಂಗಳಿನಿಂದ ಬದಲಾಗಲಿದೆ 4 ರಾಶಿಯವರ ಅದೃಷ್ಟ
 
ಶನಿದೇವನನ್ನು ಮೆಚ್ಚಿಸಲು ಇದೇ ಮಾರ್ಗ :
ಶನಿದೇವನನ್ನು ಒಲಿಸಿಕೊಳ್ಳಲು, ಡಿಸೆಂಬರ್ 25 ರ ಶನಿವಾರದಂದು ಸುಲಭವಾದ ಕ್ರಮಗಳನ್ನು ತೆಗೆದುಕೊಂಡರೆ ಶನಿಯ ವಕ್ರ ದೃಷ್ಟಿಯಿಂದ ಉಂಟಾಗುವ ಪ್ರಭಾವ ಕಡಿಮೆಯಾಗುತ್ತದೆ. ಇದಕ್ಕಾಗಿ ಈ ಶನಿವಾರದಂದು ಶನಿ ದೇವಸ್ಥಾನಕ್ಕೆ (Shani Temple) ಹೋಗಿ ಪೂಜೆ ಮಾಡಬೇಕು ಆದರೆ ಈ ಸಮಯದಲ್ಲಿ ತಪ್ಪಿಯೂ ಶನಿದೇವನ ವಿಗ್ರಹದ ಮುಂದೆ ನಿಲ್ಲಬೇಡಿ. ಸ್ವಲ್ಪ ಬಲಕ್ಕೆ ಅಥವಾ ಎಡಕ್ಕೆ ನಿಂತು ಪೂಜೆ ಸಲ್ಲಿಸಬೇಕು. ಶನಿ ದೇವರಿಗೆ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಅರ್ಪಿಸಿ ಮತ್ತು ಶನಿ ಮಂತ್ರ ಮತ್ತು ಶನಿ ಚಾಲೀಸಾವನ್ನು ಪಠಿಸಿ. ಈ ದಿನ ಶನಿಗೆ ಸಂಬಂಧಿಸಿದ ಯಾವುದಾದರೊಂದು ವಸ್ತುವನ್ನು ದಾನ ಮಾಡಿ. ಈ ಶನಿವಾರದಂದು ಬಡ, ಅಸಹಾಯಕ ವ್ಯಕ್ತಿಗೆ ಸಹಾಯ ಮಾಡುವುದರಿಂದ ನಿಮಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. 

ಇದನ್ನೂ ಓದಿ : Palmistry: ಅಂಗೈಯಲ್ಲಿ ಈ ರೇಖೆ ಹೊಂದಿದವರು ಅಪಾರ ಸಂಪತ್ತು & ಆಸ್ತಿಗೆ ಒಡೆಯರಾಗುತ್ತಾರೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News