Dhanatrayodashi 2021: ಮನೆಯಲ್ಲಿ ಮೂರು ಪಟ್ಟು ಹೆಚ್ಚು ಸುಖ-ಸಮೃದ್ಧಿ ಬರಲು ಧನ ತ್ರಯೋದಶಿಯಂದು ಈ ಸಮಯದಲ್ಲಿ ಖರೀದಿ ಮಾಡಿ

Dhanatrayodashi 2021: ಈ ಬಾರಿಯ ಧನತ್ರಯೋದಶಿಯ (Dhanatrayodashi 2021) ದಿನ ತ್ರಿಪುಷ್ಕರ ಯೋಗ (Tripushkara Yog) ಹಾಗೂ ಅಮೃತ ಲಾಭ (Amruta Labha Yog) ಯೋಗ ನಿರ್ಮಾಣಗೊಳ್ಳುತ್ತಿವೆ. ಈ ಎರಡು ಯೋಗಗಳಂದು ಮಾಡಲಾದ ಖರೀದಿ ಹಲವು ಪಟ್ಟು ಲಾಭ ನೀಡುತ್ತದೆ ಎನ್ನಲಾಗುತ್ತದೆ.

Written by - Nitin Tabib | Last Updated : Oct 31, 2021, 12:13 PM IST
  • ಈ ವರ್ಷದ ಧನತ್ರಯೋದಶಿ ತುಂಬಾ ವಿಶೇಷವಾಗಿದೆ.
  • ಧನತ್ರಯೋದಶಿಯ ಖರೀದಿಗೆ ನಿಮ್ಮ ಬಳಿ ಇರಲಿವೆ ಎರಡು ಅತ್ಯುತ್ತಮ ಯೋಗಗಳು
  • ಈ ಯೋಗಗಳಲ್ಲಿ ಮಾಡುವ ಖರೀದಿ ಹಲವು ಪಟ್ಟು ಲಾಭ ನೀಡಲಿದೆ.
Dhanatrayodashi 2021: ಮನೆಯಲ್ಲಿ ಮೂರು ಪಟ್ಟು ಹೆಚ್ಚು ಸುಖ-ಸಮೃದ್ಧಿ ಬರಲು ಧನ ತ್ರಯೋದಶಿಯಂದು ಈ ಸಮಯದಲ್ಲಿ ಖರೀದಿ ಮಾಡಿ title=
Dhanatrayodashi 2021 (File Photo)

ನವದೆಹಲಿ: Dhanatrayodashi 2021 Auspicious Yog - ಧನತ್ರಯೋದಶಿ ಶಾಪಿಂಗ್ ಮಾಡುವ ಸಂಪ್ರದಾಯವು ಶತಮಾನಗಳಷ್ಟು ಹಳೆಯದು. ಈ ದಿನದಂದು ಶಾಪಿಂಗ್ ಮಾಡುವುದು ಯಾವಾಗಲೂ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಆದರೆ ಕೆಲವೊಮ್ಮೆ ಧನತ್ರಯೋದಶಿಯ ದಿನ  ವಿಶೇಷ ಕಾಕತಾಳೀಯಗಳು ನಿರ್ಮಾಣಗೊಳ್ಳುತ್ತವೆ (Dhanatrayodashi 2021 Special Yog). ಈ ವಿಶೇಷ ಯೋಗದಲ್ಲಿ ಮಾಡುವ ಖರೀದಿಗಳಿಂದ ಲಾಭವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅಂತಹ ವಿಶೇಷ ಸಂದರ್ಭಗಳಲ್ಲಿ, ಕೆಲವು ಖರೀದಿಗಳನ್ನು ಮಾಡಬೇಕು.

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಧನತ್ರಯೋದಶಿಗೆ ವಿಶೇಷ ಮಹತ್ವವಿದೆ. ನವೆಂಬರ್ 2, 2021 ರಂದು ಧನತ್ರಯೋದಶಿಯ ದಿನ ಮಂಗಳಕರ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ ಶಾಪಿಂಗ್ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಆದರೆ, ಧನತ್ರಯೋದಶಿಯ ದಿನ ಖರೀದಿಸಲಾಗುವ ಮಂಗಳಕರ ವಸ್ತುಗಳನ್ನು ಮಾತ್ರ ಖರೀದಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ಧನತ್ರಯೋದಶಿಯ ದಿನ ತ್ರಿಪುಷ್ಕರ ಯೋಗ (Tripushakara Yog) ನಿರ್ಮಾಣಗೊಳ್ಳುತ್ತಿದೆ
ಈ ಬಾರಿಯ ಧನತ್ರಯೋದಶಿಯ ದಿನ ತ್ರಿಪುಷ್ಕರ ಯೋಗ ನಿರ್ಮಾಣಗೊಳ್ಳುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ಅತ್ಯಂತ ಮಂಗಳಕರ ಯೋಗವಾಗಿದೆ. ಈ ಯೋಗದಲ್ಲಿ ಖರೀದಿಸಿದ ವಸ್ತುಗಳು ಮೂರುಪಟ್ಟು ಹೆಚ್ಚು ಲಾಭವನ್ನು ನೀಡುತ್ತವೆ ಎನ್ನಲಾಗುತ್ತದೆ. ಇದರ ಜೊತೆಗೆ ಸಾಕಷ್ಟು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತವೆ. ಈ ಯೋಗವು ಧನತ್ರಯೋದಶಿಯ ದಿನ ಬೆಳಗ್ಗೆ 11.03ರವರೆಗೆ ಮಾತ್ರ ಇರಲಿದೆ. ಹೀಗಾಗಿ ಸೂರ್ಯೋದಯದಿಂದ ಈ ಸಾಮ್ಯದ ವರೆಗೆ ಚಿನ್ನ-ಬೆಳ್ಳಿ ವಸ್ತುಗಳು, ತಾಮ್ರ-ಹಿತ್ತಾಳೆ ಪಾತ್ರೆಗಳು, ವಾಹನ ಮತ್ತು ಇಲೆಕ್ಟ್ರಾನಿಕ್ ವಸ್ತುಗಳನ್ನೂ ಖರೀದಿಸಿ. ತ್ರಿಪುಷ್ಕರ ಯೋಗ ಮನೆಯನ್ನು ಕಾಯ್ದಿರಿಸಲು ಉತ್ತಮ ಯೋಗವಾಗಿದೆ.

ಧನತ್ರಯೋದಶಿಯ ದಿನ ಮತ್ತೊಂದು ಶುಭ ಕಾಕತಾಳೀಯ ನಿರ್ಮಾಣ
ತ್ರಿಪುಷ್ಕರ ಯೋಗದ ಜೊತೆಗೆ ಧನತ್ರಯೋದಶಿಯ ದಿನ ಮತ್ತೊಂದು ಅತ್ಯುತ್ತಮ ಯೋಗ ನಿರ್ಮಾಣಗೊಳ್ಳುತ್ತಿದೆ. ಅದುವೇ ಅಮೃತ ಲಾಭ ಯೋಗ (Amruta Labha Yog). ಈ ಯೋಗದಲ್ಲಿ ಖರೀದಿಸಲಾದ ವಸ್ತುಗಳು ಬೇಗನೆ ಹಾಳಾಗುವುದಿಲ್ಲ. ಇದಲ್ಲದೆ ತುಂಬಾ ಲಾಭಕಾರಿ ಫಲಗಳನ್ನು ನೀಡುತ್ತವೆ. ಈ ಯೋಗ ಧನತ್ರಯೋದಶಿಯ ದಿನ ಬೆಳಗ್ಗೆ 10.30 ರಿಂದ ಆರಂಭಗೊಂಡು ಮಧ್ಯಾಹ್ನ 1.30ರವರೆಗೆ ಇರಲಿದೆ. ಹೀಗಾಗಿ ಧನತ್ರಯೋದಶಿಯ ದಿನ ಖರೀದಿಗಾಗಿ ಒಳ್ಳೆಯ ಮುಹೂರ್ತ ಅಂದರೆ ಸೂರ್ಯೋದಯದಿಂದ ಮಧ್ಯಾಹ್ನ 1.30 ರವರೆಗೆ ಇರಲಿದೆ. 

ಇದನ್ನೂ ಓದಿ-Diwali 2021 Remedies: ಕುಂಕುಮ-ಸಾಸಿವೆ ಎಣ್ಣೆಯ ಈ ಸುಲಭ ಪರಿಹಾರವನ್ನು ಅನುಸರಿಸಿ ದೇವಿ ಲಕ್ಷಿ ಕೃಪೆಗೆ ಪಾತ್ರರಾಗಿ

ಆದರೆ ಧನತ್ರಯೋದಶಿಯ ದಿನ ಶಾಪಿಂಗ್ (Dhanatrayodashi 2021 Shopping)ಮಾಡುವಾಗ, ಸ್ಟೀಲ್, ಕಬ್ಬಿಣದ ವಸ್ತುಗಳು, ಗಾಜಿನ ಪಾತ್ರೆಗಳು, ಪ್ಲಾಸ್ಟಿಕ್ ಪಾತ್ರೆಗಳನ್ನು ಖರೀದಿಸಬೇಡಿ. ಧನತ್ರಯೋದಶಿಯ ದಿನ ಮಿಶ್ರ ಹಾಗೂ ರಾಹುವಿಗೆ ಸಂಬಂಧಿಸಿದ ವಸ್ತುಗಳನ್ನು ಎಂದಿಗೂ ಖರೀದಿಸಬೇಡಿ. ದೌರ್ಭಾಗ್ಯಕ್ಕೆ ಕಾರಣವಾಗುತ್ತದೆ. 

ಇದನ್ನೂ ಓದಿ-Conch Amazing Uses: ಶಂಖದ ಈ ಲಾಭಗಳ ಕುರಿತು ನಿಮಗೆ ತಿಳಿದಿದೆಯಾ? ಈ ರೀತಿ ಮನೆಯಲ್ಲಿಟ್ಟರೆ ಚಮತ್ಕಾರ ನಡೆಯಲಿದೆ

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವುದಕ್ಕು ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Venus Transit October 2021: ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News