Diwali 2022 ಕ್ಕೂ ಮುನ್ನ ಈ ರಾಶಿಗಳ ಜನರ ಸಂಕಷ್ಟದಲ್ಲಿ ಹೆಚ್ಚಳ, ನಿಮ್ಮ ರಾಶಿ ಯಾವುದು?

Shukra Gochar 2022: ಶುಕ್ರನ ಈ ರಾಶಿ ಪರಿವರ್ತನೆ ಕೆಲ ರಾಶಿಗಳ ಜಾತಕದವರ ಮೇಲೆ ನೇರ ಪ್ರಭಾವ ಬೀರಲಿದೆ ಮತ್ತು ಇದರಿಂದ ಕೆಲವರು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗಲಿದೆ. ಶುಕ್ರನ ಈ ರಾಶಿ ಪರಿವರ್ತನೆ ಯಾವ ರಾಶಿಯ ಜನರಿಗೆ ಲಾಭ ಮತ್ತು ಕಷ್ಟ ತರಲಿದೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Oct 14, 2022, 12:44 PM IST
  • ಯಾರ ಜಾತಕದಲ್ಲಿ ಶುಕ್ರನ ಸ್ಥಾನ ಬಳವಾಗಿರುತ್ತದೆಯೋ,
  • ಅವರ ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ.
  • ಈ ತಿಂಗಳಿನಲ್ಲಿ ಶುಕ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲಿದ್ದಾನೆ.
Diwali 2022 ಕ್ಕೂ ಮುನ್ನ ಈ ರಾಶಿಗಳ ಜನರ ಸಂಕಷ್ಟದಲ್ಲಿ ಹೆಚ್ಚಳ, ನಿಮ್ಮ ರಾಶಿ ಯಾವುದು? title=
Shukra Gochar 2022

Shukra Rashi Parivartan 2022: ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂತೋಷ, ವೈಭವ, ಐಶ್ವರ್ಯ ಹಾಗೂ ಸಂಪತ್ತಿನ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಶುಕ್ರನ ಸ್ಥಾನ ಬಳವಾಗಿರುತ್ತದೆಯೋ, ಅವರ ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಈ ತಿಂಗಳಿನಲ್ಲಿ ಶುಕ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲಿದ್ದಾನೆ. ಶುಕ್ರನ ಈ ನಡೆ ಅನೇಕ ರಾಶಿಗಳ ಜನರಿಗೆ ಸಮಸ್ಯೆಯನ್ನುಂಟು ಮಾಡಬಹುದು. ಶುಕ್ರ ಅಕ್ಟೋಬರ್ 18 ರಂದು ಕನ್ಯಾ ರಾಶಿಯಿಂದ ತುಲಾ ರಾಶಿಗೆ ತನ್ನ ಸ್ಥಾನ ಪಲ್ಲಟ ನಡೆಸಲಿದ್ದಾನೆ. ಅಷ್ಟೇ ಅಲ್ಲ ಬರುವ ನವೆಂಬರ್ 11 ರಂದು ಆತ ಅಲ್ಲಿಯೇ ವಿರಾಜಮಾನನಾಗಲಿದ್ದಾನೆ. ಇದು ಯಾವ ರಾಶಿಗಳ ಜನರಿಗೆ ಲಾಭ ತರಲಿದೆ ಮತ್ತು ಯಾರಿಗೆ ನಷ್ಟ ತರಲಿದೆ ತಿಳಿದುಕೊಳ್ಳೋಣ ಬನ್ನಿ,

ಕನ್ಯಾ ರಾಶಿ - ಶುಕ್ರನ ಈ ರಾಶಿ ಸಂಚಾರ ಕನ್ಯಾ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಸಾಕಷ್ಟು ಘನತೆ ಗೌರವವನ್ನು ಪಡೆಯುತ್ತೀರಿ. ಆದಾಯ ಹೆಚ್ಚಾಗುವ ಸಂಕೆತಗಳಿವೆ. ಧನಲಾಭ ಇರಲಿದೆ. ಹೂಡಿಕೆಯ ಲಾಭವನ್ನು ನೀವು ಪಡೆಯುವಿರಿ. ಈ ಅವಧಿಯಲ್ಲಿ ನೀವು ಕೈಹಾಕುವ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ.

ತುಲಾ ರಾಶಿ - ಶುಕ್ರನ ರಾಶಿ ಪರಿವರ್ತನೆಯು ತುಲಾ ರಾಶಿಯವರ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಶುಕ್ರನನ್ನು ನಿಮ್ಮ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಶುಕ್ರನ ಆಗಮನ ಸ್ವರಾಶಿಯಲ್ಲಿಯೇ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಶುಕ್ರನು ನಿಮಗೆ ರಾಜಯೋಗದ ಸ್ಥಿತಿಯನ್ನು ಸೃಷ್ಟಿಸುತ್ತಿದ್ದಾನೆ. ನಿಮ್ಮ ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ಹಣಕಾಸಿನ ಭಾಗ ಬಲವಾಗಿರಲಿದೆ.

ಇದನ್ನೂ ಓದಿ-ಇನ್ನೆರಡು ದಿನಗಳಲ್ಲಿ ಈ ಐದು ರಾಶಿಯವರ ಜೀವನದ ದಿಕ್ಕನ್ನೇ ಬದಲಿಸಲಿದ್ದಾನೆ ಮಂಗಳ

ಮಕರ ರಾಶಿ - ಮಕರ ರಾಶಿಯವರು ಶುಕ್ರ ಗೊಚಾರದ ಈ ಅವಧಿಯಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು. ಈ ಅವಧಿಯಲ್ಲಿ ಹೂಡಿಕೆಗಳನ್ನು ತಪ್ಪಿಸುವುದು ಸೂಕ್ತ. ಕೆಲವು ಕೆಲಸಗಳಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಕಠಿಣ ಪರಿಶ್ರಮದ ನಂತರವೇ ಯಶಸ್ಸು ಸಿಗಲಿದೆ.

ಇದನ್ನೂ ಓದಿ-Astrology for Money : ನಿಮ್ಮ ಮನೆ ಆರ್ಥಿಕ ಸ್ಥಿತಿ ಸುಧಾರಿಸಲು 16 ಜ್ಯೋತಿಷ್ಯ ಪರಿಹಾರಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News