Money Remedies: ಶುಕ್ರವಾರ ಹಣಕ್ಕೆ ಸಂಬಂಧಿಸಿದ ಈ ಕೆಲಸವನ್ನು ಮರೆತೂ ಮಾಡಬೇಡಿ

Money Remedies: ಲಕ್ಷ್ಮಿಯನ್ನು ಸಂತೋಷವಾಗಿರಿಸಲು, ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಇಲ್ಲದಿದ್ದರೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಯಾವುದೇ ಒಬ್ಬ ವ್ಯಕ್ತಿಯು ಬಡವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ.  

Written by - Yashaswini V | Last Updated : Jan 7, 2022, 07:57 AM IST
  • ಶುಕ್ರವಾರ ಈ ಕೆಲಸ ಮಾಡಬಾರದು
  • ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ
  • ಇದಲ್ಲದೆ ಹಣದ ನಷ್ಟವೂ ಉಂಟಾಗುತ್ತದೆ
Money Remedies: ಶುಕ್ರವಾರ ಹಣಕ್ಕೆ ಸಂಬಂಧಿಸಿದ ಈ ಕೆಲಸವನ್ನು ಮರೆತೂ ಮಾಡಬೇಡಿ  title=
Friday Remedies

Money Remedies: ಹಿಂದೂ ಧರ್ಮದಲ್ಲಿ, ವಾರದ ಪ್ರತಿ ದಿನವೂ ಒಂದಲ್ಲ ಒಂದು ದೇವ-ದೇವತೆಗೆ ಮೀಸಲಾಗಿದೆ. ಅಲ್ಲದೆ, ಆ ದಿನದ ಬಗ್ಗೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಪಾಲಿಸಿದರೆ ದೇವರು ಪ್ರಸನ್ನನಾಗುತ್ತಾನೆ ಮತ್ತು ಅವನ ಕೃಪೆಯಿಂದ ಜೀವನದ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಇದರೊಂದಿಗೆ ಕುಟುಂಬ ಮತ್ತು ವ್ಯವಹಾರದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ. ಶುಕ್ರವಾರದ ಬಗ್ಗೆ ಹೇಳುವುದಾದರೆ, ಈ ದಿನವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ (Goddess Lakshmi) ಸಮರ್ಪಿಸಲಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ನೇಮ-ನಿಷ್ಠೆಯಿಂದ ಪೂಜಿಸುವುದರಿಂದ ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು. ಅದೇ ಸಮಯದಲ್ಲಿ, ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಅವಳು ಯಾವಾಗಲೂ ತನ್ನ ಭಕ್ತರಿಗೆ ದಯೆ ತೋರುತ್ತಾಳೆ ಎಂಬ ನಂಬಿಕೆಯೂ ಇದೆ. ಆದರೆ ಶುಕ್ರವಾರದ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಅಪಾರ ನಷ್ಟ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಶುಕ್ರವಾರ ಯಾವ ಕೆಲಸಗಳನ್ನು ಮಾಡುವುದು ನಿಷಿದ್ಧ ಎಂದು ತಿಳಿಯೋಣ...

ಶುಕ್ರವಾರದಂದು ಈ ಕೆಲಸ ಮಾಡಬೇಡಿ :
ಶುಕ್ರವಾರಕ್ಕೆ, ಶಾಸ್ತ್ರಗಳಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಅಗತ್ಯವಾದ ನಿಯಮಗಳನ್ನು ಹೇಳಲಾಗಿದೆ. ಅವರ ಪ್ರಕಾರ, ಶುಕ್ರವಾರ ಹಣಕ್ಕೆ (Money Remedies) ಸಂಬಂಧಿಸಿದ ಕೆಲವು ಕೆಲಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇದರ ಹೊರತಾಗಿ ಇನ್ನೂ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. 

ಇದನ್ನೂ ಓದಿ- Diamond: ಈ ರಾಶಿಯವರ ಜೀವನವನ್ನೇ ಹಾಳು ಮಾಡುತ್ತೆ 'ಡೈಮಂಡ್', ವಜ್ರಧಾರಣೆ ಯಾರಿಗೆ ಶುಭ?

ಶಾಸ್ತ್ರ ಮತ್ತು ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ ಶುಕ್ರವಾರ ಯಾರಿಗೂ ಸಕ್ಕರೆ ಕೊಡಬಾರದು. ಈ ದಿನ ಯಾರಿಗಾದರೂ ಸಕ್ಕರೆಯನ್ನು ನೀಡುವುದರಿಂದ ಶುಕ್ರ ಗ್ರಹವು ದುರ್ಬಲಗೊಳ್ಳುತ್ತದೆ ಮತ್ತು ಅಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ. ಆದಾಗ್ಯೂ, ಈ ದಿನ ಲಕ್ಷ್ಮಿ ದೇವಿಗೆ ಬಿಳಿ ಸಿಹಿತಿಂಡಿಗಳನ್ನು (ಹಾಲಿನ ಸಿಹಿತಿಂಡಿಗಳು ಅಥವಾ ಖೀರ್) ಅರ್ಪಿಸಿ ಮತ್ತು ಎಲ್ಲರಿಗೂ ಪ್ರಸಾದವನ್ನು ವಿತರಿಸುವುದರಿಂದ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. 

ಯಾವುದೇ ದಿನ ಮನೆಯಲ್ಲಿ ಕೊಳಕು ಮತ್ತು ಕಸವನ್ನು ಸಂಗ್ರಹಿಸಬಾರದು, ಆದರೆ ಶುಕ್ರವಾರದಂದು (Friday Remedies) ಮನೆಯನ್ನು ಕೊಳಕು ಇಡುವುದು ತುಂಬಾ ಅಶುಭ. ಈ ದಿನ ಮನೆಯನ್ನು ಶುಚಿಗೊಳಿಸಿ, ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆಯಿದೆ.

ಶುಕ್ರವಾರದಂದು ಸಾಲ ನೀಡಬಾರದು ಅಥವಾ ತೆಗೆದುಕೊಳ್ಳಬಾರದು. ಈ ದಿನದಂದು ಎರವಲು ಪಡೆದ ಹಣದ ವಹಿವಾಟು ಲಕ್ಷ್ಮಿ ದೇವಿಯನ್ನು ಕೋಪಗೊಳಿಸುತ್ತದೆ ಮತ್ತು ಇದು ಬಡತನಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ. 

ಇದನ್ನೂ ಓದಿ- Personality By Zodiac Sign: ಈ ರಾಶಿಯ ಜನ ಅತ್ಯಂತ ಪ್ರಾಮಾಣಿಕ ಸ್ನೇಹಿತರು

ಅಂದಹಾಗೆ, ಮಹಿಳೆಯರು, ಹುಡುಗಿಯರು ಮತ್ತು ಟ್ರಾನ್ಸ್ಜೆಂಡರ್ಗಳನ್ನು ಎಂದಿಗೂ ಅವಮಾನಿಸಬಾರದು. ಅದರಲ್ಲೂ ಶುಕ್ರವಾರದಂದು ಹೀಗೆ ಮಾಡುವುದರಿಂದ ಜೀವನದಲ್ಲಿ ಬಹಳಷ್ಟು ಕಷ್ಟಗಳು ಬರುತ್ತವೆ. ಹೀಗೆ ಮಾಡುವುದರಿಂದ ಮನೆಯ ಹಣ ಅನಾವಶ್ಯಕವಾಗಿ ವ್ಯರ್ಥವಾಗತೊಡಗುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News