ನವದೆಹಲಿ : ಧನತ್ರಯೋದಶಿ (Dhanteras) ಎಂದರೆ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುವ ದಿನವಾಗಿದೆ. ಈ ದಿನದಂದು ಕೆಲವು ವಿಶೇಷ ವಸ್ತುಗಳನ್ನು ಖರೀದಿಸಿದರೆ ವಿಶೇಷ ಫಲ ಸಿಗಲಿದೆ ಎನ್ನುತ್ತಾರೆ. ಹಾಗೆಯೇ ಈ ದಿನದಂದು ಕೆಲವು ವಸ್ತುಗಳನ್ನು ಖರೀದಿಸಲೂ ಬಾರದು (Shopping). ಒಂದು ವೇಳೆ, ಈ ದಿನ ಇಂಥಹ ವಸ್ತುಗಳನ್ನು ಖರೀದಿಸಿದರೆ, ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಬೇಕಾದರೆ ಧನತ್ರಯೋದಶಿ ದಿನ, ಈ ತಪ್ಪುಗಳಾಗದಂತೆ (Do's And Don'ts, Dhanteras Shopping) ನೋಡಿಕೊಳ್ಳಿ. ಅಲ್ಲದೆ, ಈ ದಿನ ಚಿನ್ನ-ಬೆಳ್ಳಿ, ತಾಮ್ರ-ಹಿತ್ತಾಳೆಯ ವಸ್ತುಗಳನ್ನು ಖರೀದಿಸಿ. ಇದಲ್ಲದೆ, ಮನೆ-ಗಾಡಿ, ಪೊರಕೆ, ಕೊತ್ತಂಬರಿ ಬೀಜಗಳನ್ನು ಖರೀದಿಸುವುದು ಸಹ ಮಂಗಳಕರ ಎನ್ನಲಾಗಿದೆ. ಈ ದಿನ ಲಕ್ಷ್ಮೀ ದೇವಿ ಮತ್ತು ಗಣೇಶನ ಫೋಟೋ ಇರುವ ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನು ಖರೀದಿಸುವುದು ಕೂಡಾ ಶುಭ ಫಲ ನೀಡುತ್ತದೆ.
ಧನತ್ರಯೋದಶಿ ದಿನದಂದು ಈ ಕೆಲಸವನ್ನು ಮಾಡಲೇ ಬೇಡಿ :
1.ಧನತ್ರಯೋದಶಿ ದಿನದಂದು ಯಾರಿಗೂ ಸಾಲ ಕೊಡಬೇಡಿ ಅಥವಾ ಸಾಲ ತೆಗೆದುಕೊಳ್ಳಬೇಡಿ. ಈ ದಿನ ಸಾಲಗಾರರು ಮತ್ತು ಸಾಲ ನೀಡುವವರು ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ.
2. ಸ್ಟೀಲ್, ಗಾಜು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಅಥವಾ ಪಾತ್ರೆಗಳನ್ನು ಖರೀದಿಸಬೇಡಿ. ಇವು ರಾಹು ಮತ್ತು ಶನಿಗೆ (Shani) ಸಂಬಂಧಿಸಿವೆ ಮತ್ತು ಧನತ್ರಯೋದಶಿ ದಿನದಂದು ಅವುಗಳನ್ನು ಖರೀದಿಸಿದರೆ ದುರಾದೃಷ್ಟವನ್ನು ಆಹ್ವಾನಿಸಿದಂತೆ ಎನ್ನಲಾಗಿದೆ.
3.ಚಿನ್ನ-ಬೆಳ್ಳಿ (Gold - Silver), ತಾಮ್ರ-ಹಿತ್ತಾಳೆ ಪಾತ್ರೆಗಳನ್ನು ಖರೀದಿಸಿದರೆ ಮನೆಗೆ ತರುವಾಗ ಅದರಲ್ಲಿ ಸಿಹಿತಿಂಡಿ, ಅಕ್ಕಿ (Rice) ಇತ್ಯಾದಿಗಳನ್ನು ತುಂಬಿರಿ. ಧನತ್ರಯೋದಶಿ ದಿನದಂದು ಮನೆಯಲ್ಲಿ ಖಾಲಿ ಪಾತ್ರೆಗಳನ್ನು ತರುವುದು ಅಶುಭ ಎನ್ನಲಾಗಿದೆ.
ಇದನ್ನೂ ಓದಿ : Monthly Horoscope: ಈ 6 ರಾಶಿಯವರಿಗೆ ಅದ್ಭುತವಾಗಿರಲಿದೆ ನವೆಂಬರ್, ಹೊಳೆಯಲಿದೆ ಅದೃಷ್ಟ
4. ಧನತ್ರಯೋದಶಿ ದಿನದಂದು ಸಂಪತ್ತಿನ ದೇವರು ಕುಬೇರ, ಲಕ್ಷ್ಮಿ (Godess Lakshmi), ಧನ್ವಂತರಿ ಮತ್ತು ಯಮರಾಜನನ್ನು ಪೂಜಿಸಲಾಗುತ್ತದೆ. ಆದರೆ ಪೂಜೆಯ ವೇಳೆ ಗಾಜಿನ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ವಿಗ್ರಹಗಳನ್ನು ಪೂಜಿಸಬೇಡಿ.
5. ಈ ದಿನದಂದು ನಿಮ್ಮ ಮನೆಯ ಮುಖ್ಯ ಬಾಗಿಲಿನ ಮುಂದೆ ಶೂ ಮತ್ತು ಚಪ್ಪಲಿಯನ್ನು ಇಡಬೇಡಿ. ಬೆಳಿಗ್ಗೆಯಿಂದಲೇ ಮನೆಯ ಬಾಗಿಲು ಮತ್ತು ಮುಂಭಾಗವನ್ನು ತೊಳೆದು ಸ್ವಚ್ಛಗೊಳಿಸಿ.
6. ಧನತ್ರಯೋದಶಿ ಮತ್ತು ದೀಪಾವಳಿಯಂದು (Diwali) ತಪ್ಪಿಯೂ ಹಗಲಿನಲ್ಲಿ ಮಲಗಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಬರುತ್ತದೆ.
7. ಧನತ್ರಯೋದಶಿ ದಿನದಂದು ಚಾಕು, ಕತ್ತರಿ ಮುಂತಾದ ಯಾವುದೇ ಹರಿತವಾದ ವಸ್ತುಗಳನ್ನು ಖರೀದಿಸಬೇಡಿ.
ಇದನ್ನೂ ಓದಿ : Diwali 2021 Remedies: ಕುಂಕುಮ-ಸಾಸಿವೆ ಎಣ್ಣೆಯ ಈ ಸುಲಭ ಪರಿಹಾರವನ್ನು ಅನುಸರಿಸಿ ದೇವಿ ಲಕ್ಷಿ ಕೃಪೆಗೆ ಪಾತ್ರರಾಗಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ