ಬೆಂಗಳೂರು : ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನವನ್ನೂ ಯಾವುದಾದರೊಂದು ದೇವರಿಗೆ ಮೀಸಲಿಡಲಾಗಿದೆ. ಶನಿವಾರದ ದಿನ ಕರ್ಮಫಲದಾತ, ನ್ಯಾಯದ ದೇವರಾದ ಶನಿಗೆ (Shani deva)ಸಮರ್ಪಣೆ. ಈ ದಿನ ಶನಿ ದೇವನನ್ನು ಪೂಜಿಸುವುದರಿಂದ ಶನಿದೇವನ ಕೃಪೆಗೆ ಪಾತ್ರರಾಗಬಹುದು (How to get Shanidev blessings). ಶನಿ ಗ್ರಹವು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ, ಶುಭ ಫಲಗಳನ್ನೇ ನೀಡುತ್ತಾನೆ. ಉತ್ತಮ ಜೀವನವನ್ನು ಪಡೆಯಲು, ಶನಿದೇವನ ಅನುಗ್ರಹವನ್ನು ಹೊಂದುವುದು ಬಹಳ ಮುಖ್ಯ. ಏಕೆಂದರೆ ಶನಿಯ ಅತೃಪ್ತಿ ಜೀವನವನ್ನು ನಾಶಪಡಿಸುತ್ತದೆ ಎಂದು ಹೇಳಲಾಗುತ್ತದೆ.
ಶನಿಯ ಆಶೀರ್ವಾದ ಪಡೆಯುವ ಲಕ್ಷಣಗಳಿವು :
ಶನಿವಾರದಂದು ಕೆಲವು ವಿಶೇಷ ವಸ್ತುಗಳು ಕಣ್ಣಿಗೆ ಬಿದ್ದರೆ, ಶನಿಯ (Shani deva) ಆಶೀರ್ವಾದ ಸಿಗಲಿದೆ ಎಂದರ್ಥ. ಇವುಗಳು ಶನಿವಾರದ ದಿನ ಕಣ್ಣಿಗೆ ಬಿದ್ದರೆ, ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : ಈ ರಾಶಿಯವರು ಸದಾ ಶ್ರೀಮಂತರಾಗಿಯೇ ಇರುತ್ತಾರೆ, ಮಹಾಲಕ್ಷ್ಮೀ ಯ ವಿಶೇಷ ಅನುಗ್ರಹ ಇವರ ಮೇಲಿರುತ್ತದೆ
ಸಫಾಯಿ ಕರ್ಮಿ : ಶನಿವಾರದಂದು ಕಸಗುಡಿಸುವವರು ರಸ್ತೆಯನ್ನು ಶುಚಿಗೊಳಿಸುವುದನ್ನು ನೋಡಿದರೆ ತುಂಬಾ ಶುಭ ಎನ್ನಲಾಗಿದೆ (Saturday remedies). ನೀವು ಯಾವ ಕೆಲಸಕ್ಕೆ ಮನೆಯಿಂದ ಹೊರಟಿರುತ್ತಿರೋ, ಆ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗಲಿದೆ ಎಂದರ್ಥ. ಸಾಧ್ಯವಾದರೆ, ಸ್ವೀಪರ್‌ಗೆ ಏನಾದರೂ ದಾನ ಮಾಡಿ.
ಭಿಕ್ಷುಕ : ನಿರ್ಗತಿಕರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡುವವರ ಮೇಲೆ ಶನಿ ದೇವನು (Shanideva)ಯಾವಾಗಲೂ ಕೃಪೆ ತೋರುತ್ತಾನೆ. ಶನಿವಾರದಂದು, ನಿರ್ಗತಿಕರನ್ನು ಕಂಡರೆ, ಅವರಿಗೆ ಏನನ್ನಾದರೂ ದಾನ ಮಾಡಿ. ಹಾಗೆ ಮಾಡುವುದರಿಂದ ಶನಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ಯಾವುದೇ ಭಿಕ್ಷುಕರನ್ನು ಅಥವಾ ಅಸಹಾಯಕರನ್ನು ತಪ್ಪಿ ಕೂಡಾ ಅವಮಾನಿಸಬೇಡಿ.
ಇದನ್ನೂ ಓದಿ : ಅಂಗೈ ವಿನ್ಯಾಸ ಹೀಗಿದ್ದರೆ ಅದೃಷ್ಟ ಸದಾ ನಿಮ್ಮ ಪಾಲಿಗಿರುತ್ತದೆ
ಕಪ್ಪು ನಾಯಿ : ಕಪ್ಪು ನಾಯಿಯನ್ನು (Black dog)ಶನಿದೇವನ ವಾಹನವೆಂದು ಪರಿಗಣಿಸಲಾಗುತ್ತದೆ . ಶನಿವಾರ ಬೆಳಗ್ಗೆ ರಸ್ತೆಯಲ್ಲಿ ಕಪ್ಪು ನಾಯಿ ಕಂಡರೆ, ಶನಿಯ ಕೃಪೆ ನಿಮ್ಮ ಇರಲಿದೆ ಎನ್ನಲಾಗಿದೆ. ಕಪ್ಪು ನಾಯಿ ಕಂಡರೆ ತಿನ್ನಲು ಏನಾದರೂ ಕೊಡಿ. ಸಾಧ್ಯವಾದರೆ, ಹಾಲು ರೊಟ್ಟಿ, ಸಾಸಿವೆ ಎಣ್ಣೆ ಪರಾಠ ಅಥವಾ ಬ್ರೆಡ್ ನೀಡಿ. ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದಾಗ ಬೀದಿ ನಾಯಿಗಳಿಗೆ ತಿನ್ನಲು ಏನನ್ನಾದರೂ ನೀಡುವುದರಿಂದ ಹೆಚ್ಚಿನ ಲಾಭವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.