Sri Krishnajanmashtami: ಶ್ರೀಕೃಷ್ಣನನ್ನು ಸಂತೋಷಪಡಿಸಲು ಜನ್ಮಾಷ್ಟಮಿಯಂದು ಈ ಕೆಲಸ ಮಾಡಿ

Sri Krishnajanmashtami: ಶ್ರೀಕೃಷ್ಣನನ್ನು ಮೆಚ್ಚಿಸಲು ಮತ್ತು ಆತನ ಆಶೀರ್ವಾದ ಪಡೆಯಲು ಜನ್ಮಾಷ್ಟಮಿ ಅತ್ಯುತ್ತಮ ದಿನವಾಗಿದೆ. ಈ ದಿನ ಕೆಲವು ಸರಳವಾದ ಕೆಲಸಗಳನ್ನು ಮಾಡುವುದರಿಂದ ದೊಡ್ಡ ಲಾಭಗಳು ಸಿಗುತ್ತವೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾ ತುಂಬಿರಲಿದೆ.

Written by - Yashaswini V | Last Updated : Aug 30, 2021, 10:07 AM IST
  • ಜನ್ಮಾಷ್ಟಮಿಯಂದು ಈ ಕೆಲಸವನ್ನು ಮಾಡಿದರೆ ತುಂಬಾ ಶುಭ
  • ಬಾಲ ಗೋಪಾಲನ್ನು ಈ ರೀತಿ ಪೂಜಿಸಿದರೆ ಅವನು ಬೇಗ ಸಂತೋಷಗೊಳ್ಳುವನು
  • ಕನ್ಹಾಗೆ ಹರಸಿಂಗರ ಅಥವಾ ಪಾರಿಜಾತದ ಹೂವುಗಳನ್ನು ಅರ್ಪಿಸಿ, ಈ ಹೂವುಗಳು ದೇವರಿಗೆ ಬಹಳ ಪ್ರಿಯವಾದವು
Sri Krishnajanmashtami: ಶ್ರೀಕೃಷ್ಣನನ್ನು ಸಂತೋಷಪಡಿಸಲು ಜನ್ಮಾಷ್ಟಮಿಯಂದು ಈ ಕೆಲಸ ಮಾಡಿ  title=
Krishnajanmashtami 2021

ಬೆಂಗಳೂರು: ನೀವು ಭಗವಾನ್ ಶ್ರೀಕೃಷ್ಣನನ್ನು ಶ್ರದ್ಧಾ-ಭಕ್ತಿಯಿಂದ ಭಜಿಸಿದರೆ  ನಿಮ್ಮ ಕನಸು ನನಸಾಗುತ್ತದೆ ಎಂದು ಹೇಳಲಾಗುತ್ತದೆ. ಶ್ರೀ ಕೃಷ್ಣನ ಆಶೀರ್ವಾದವನ್ನು ಪಡೆಯುವ ಮೂಲಕ ನೀವು ಸಂತೋಷದ ಜೀವನವನ್ನು ನಡೆಸಬಹುದು. ಏಕೆಂದರೆ ಸಂಬಂಧಗಳು, ಸಂತೋಷ, ಪ್ರೀತಿ, ಗುರಿಯನ್ನು ಸಾಧಿಸುವುದಕ್ಕೆ ಸಂಬಂಧಿಸಿದಂತೆ ಉತ್ತಮವಾಗಿ  ಕಲಿಸಲು ಶ್ರೀಕೃಷ್ಣನಿಗಿಂತ ಬೇರಾರಿಗೂ ಸಾಧ್ಯವಿಲ್ಲ. ಅವನು ತನ್ನ ಭಕ್ತರ ಸಣ್ಣ ಕಾರ್ಯಗಳಿಂದಲೂ ಸಂತೋಷಪಡುತ್ತಾನೆ. ಇಂದು (ಆಗಸ್ಟ್ 30, ಸೋಮವಾರ) ಜನ್ಮಾಷ್ಟಮಿಯಂದು (Sri Krishnajanmashtami 2021), ಶ್ರೀಕೃಷ್ಣನನ್ನು ಮೆಚ್ಚಿಸಲು ಮತ್ತು ಆತನ ಆಶೀರ್ವಾದ ಪಡೆಯಲು ಸುಲಭವಾದ ಮಾರ್ಗಗಳಿವೆ. ನೀವು ಈ ದಿನ ಸಣ್ಣ ಕೆಲಸ ಮಾಡುವ ಮೂಲಕ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬಹುದು.

ಜನ್ಮಾಷ್ಟಮಿಯಂದು ಈ ಕೆಲಸವನ್ನು ಮಾಡಿ ಕೃಷ್ಣನ ಕೃಪೆಗೆ ಪಾತ್ರರಾಗಿ:
ಶ್ರೀ ಕೃಷ್ಣ ಜನ್ಮಾಷ್ಟಮಿ (Sri Krishnajanmashtami 2021) ಹಬ್ಬವನ್ನು ನೇಮ, ನಿಷ್ಠೆಯಿಂದ ಆಚರಿಸಿ. ಮೊದಲಿಗೆ ಬಾಲ ಗೋಪಾಲ ರೂಪವನ್ನು ಪೂಜಿಸಿ. ಈ ಸಂದರ್ಭದಲ್ಲಿ ಶಂಖದಿಂದ ಹಾಲಿನ ಅಭಿಷೇಕ ಮಾಡಿ. ಇದಲ್ಲದೆ ಪಂಚಾಮೃತದೊಂದಿಗೆ ಕೂಡ ಅಭಿಷೇಕ ಮಾಡಬಹುದು.

ಇದನ್ನೂ ಓದಿ- Guru Rashi Parivartan: 15 ದಿನಗಳಲ್ಲಿ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ

- ಶ್ರೀ ಕೃಷ್ಣನಿಗೆ (Lord Krishna) ಗಂಗಾಜಲದಿಂದ ಅಭಿಷೇಕ ಮಾಡಿದ ನಂತರ, ಅವನಿಗೆ ಹೊಸ ಬಟ್ಟೆಗಳನ್ನು ಧರಿಸಿ, ಬಳಿಕ ಹಳದಿ ಶ್ರೀಗಂಧವನ್ನು ಹಚ್ಚಿ. ಶ್ರೀ ಕೃಷ್ಣನನ್ನು ಸುಂದರವಾಗಿ ಅಲಂಕರಿಸಿ, ಅವನ ತಲೆಯನ್ನು ನವಿಲು ಗರಿಗಳಿಂದ ಅಲಂಕರಿಸಲು ಮರೆಯಬೇಡಿ. ಜೊತೆಗೆ ಆತನಿಗೆ ತಪ್ಪದೇ ಕೊಳಲನ್ನೂ ಕೂಡ ನೀಡಿ. ಪೂಜೆಯ ಬಳಿಕ ಈ ಕೊಳಲನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಿ. ಇದರಿಂದ ನಿಮ್ಮ ಮನೆಯು ಸದಾ ಕಾಲ ಹಣ, ಸಂಪತ್ತಿನಿಂದ ಕೂಡಿರುವುದು ಮಾತ್ರವಲ್ಲ, ಕೊಳಲಿನ ಸುಮಧುರ ನಾದದಂತೆ ನಿಮ್ಮ ಮನೆಯಲ್ಲೂ ಯಾವಾಗಲು ಸುಖ-ಸಮೃದ್ಧಿ ತುಂಬಿರುತ್ತದೆ ಎಂದು ನಂಬಲಾಗಿದೆ.

- ಕನ್ಹಾಗೆ ಹರಸಿಂಗರ ಅಥವಾ ಪಾರಿಜಾತದ ಹೂವುಗಳನ್ನು ಅರ್ಪಿಸಿ, ಈ ಹೂವುಗಳು ದೇವರಿಗೆ ಬಹಳ ಪ್ರಿಯವಾದವು. 

- ಬಾಲ ಗೋಪಾಲನಿಗೆ (Bala Gopala) ಬೆಣ್ಣೆ-ಮಿಶ್ರಿ, ಪಂಜಿರಿ ನೀಡಿ. ಅವನಿಗೆ ತುಳಸಿಯನ್ನು ಅರ್ಪಿಸಿ, ದೇವರು ಇದರಿಂದ ತುಂಬಾ ಸಂತೋಷಪಟ್ಟು ನಿಮ್ಮ ಇಷ್ಟಾರ್ಥವನ್ನು ಈಡೇರಿಸುವನು.

ಇದನ್ನೂ ಓದಿ- Janmashtami 2021 : ಧನ ಸಂಪತ್ತು ಪ್ರಾಪ್ತಿಯಾಗಬೇಕಾದರೆ ಕೃಷ್ಣ ಜನ್ಮಾಷ್ಟಮಿಯ ದಿನ ಈ ಕೆಲಸ ಮಾಡಿ

- ತೊಟ್ಟಿಲಿನಲ್ಲಿ ಬಾಲ ಗೋಪಾಲನ ವಿಗ್ರಹವನ್ನಿಟ್ಟು ತೂಗಿರಿ. ಮಗುವಿನ ಸಂತೋಷವನ್ನು ಬಯಸುವ ದಂಪತಿಗಳು ಈ ರೀತಿ ಮಾಡುವುದು ತುಂಬಾ ಶುಭಕರವಾಗಿದೆ.

- ಜನ್ಮಾಷ್ಟಮಿಯ ದಿನ ಹಸುವನ್ನು ಆಹ್ವಾನಿಸಿ. ಹಸುವಿಗೆ ಮೇವು ಅಥವಾ ರೊಟ್ಟಿ ತಿನ್ನಿಸಿ. ಇಂದಿನ ದಿನ ತಪ್ಪದೇ ನಿಮ್ಮ ಕೈಲಾದದ್ದನ್ನು ದಾನ ಮಾಡಿ.

- ಹಸುವಿನ ಜೊತೆ ಕರು ಇರುವ ಮೂರ್ತಿಯನ್ನು ಮನೆಗೆ ತರುವುದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಈ ದಿನ ಹಸು-ಕರುವಿನ ಮೂರ್ತಿಯನ್ನು ತಂದು ಪೂಜಿಸಿ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News