Brass Idols: ಹಿತ್ತಾಳೆ ವಿಗ್ರಹಗಳನ್ನು ಎರಡೇ ನಿಮಿಷಗಳಲ್ಲಿ ಈ ರೀತಿ ಹೊಳೆಯುವಂತೆ ಮಾಡಿ

ಮನೆಯಲ್ಲಿರುವ ಹಿತ್ತಾಳೆ ವಿಗ್ರಹಗಳು ಮತ್ತು ಪಾತ್ರೆಗಳು ಕಪ್ಪು ಬಣ್ಣಕ್ಕೆ ತಿರುಗಿದೆಯೇ? ಅದನ್ನು ಸ್ವಚ್ಛಗೊಳಿಸುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ಹಿತ್ತಾಳೆ ವಿಗ್ರಹಗಳನ್ನು ಬಹಳ ಸುಲಭವಾಗಿ ಸ್ವಚ್ಚಗೊಳಿಸಬಹುದು. ಜೊತೆಗೆ ಅವುಗಳಿಗೆ ಹೊಸ ಹೊಳಪನ್ನೂ ನೀಡಬಹುದು. 

Written by - Yashaswini V | Last Updated : Aug 28, 2021, 02:30 PM IST
  • ಸಾಮಾನ್ಯವಾಗಿ ಪಾತ್ರೆ ತೊಳೆಯುವ ಪುಡಿ, ಸೋಪು ಅಥವಾ ದ್ರವದಿಂದ ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛಗೊಳಿಸಬಾರದು
  • ಈ ವಸ್ತುಗಳಿಂದ ನೀವು ಹಿತ್ತಾಳೆಯನ್ನು ಸ್ವಚ್ಛಗೊಳಿಸಿದರೆ, ಅವುಗಳ ಹೊಳಪು ಕಡಿಮೆಯಾಗಲು ಆರಂಭವಾಗುತ್ತದೆ
  • ಹಿತ್ತಾಳೆ ವಿಗ್ರಹಗಳನ್ನು ಹೊಳೆಯುವಂತೆ ಮಾಡಲು ಈ ಸರಳ ಸಲಹೆಗಳನ್ನು ಅನುಸರಿಸಿ
Brass Idols: ಹಿತ್ತಾಳೆ ವಿಗ್ರಹಗಳನ್ನು ಎರಡೇ ನಿಮಿಷಗಳಲ್ಲಿ ಈ ರೀತಿ ಹೊಳೆಯುವಂತೆ ಮಾಡಿ title=
How To Clean Brass

ಬೆಂಗಳೂರು: ಮನೆಯಲ್ಲಿ ಇರಿಸಲಾಗಿರುವ ಹಿತ್ತಾಳೆಯ ವಿಗ್ರಹಗಳು ಮತ್ತು ಪಾತ್ರೆಗಳು ಕಪ್ಪಾಗಿವೆ ಎಂದು ಯೋಚಿಸುತ್ತಿದ್ದೀರಾ? ನೀವು ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿಕೊಂಡು ಅವುಗಳನ್ನು ಸ್ವಚ್ಛಗೊಳಿಸಬಹುದು. ಆದರೆ, ಪಾತ್ರೆ ತೊಳೆಯುವ ಸಾಮಾನ್ಯ ಪುಡಿ ಮತ್ತು ಪಾತ್ರೆ ತೊಳೆಯುವ ದ್ರವದಿಂದ ಅವುಗಳನ್ನು ಸ್ವಚ್ಛಗೊಳಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ಈ ವಸ್ತುಗಳಿಂದ ಹಿತ್ತಾಳೆಯನ್ನು ಸ್ವಚ್ಛಗೊಳಿಸಿದರೆ, ಅವುಗಳ ಬಣ್ಣ ಮಸುಕಾಗಲು ಆರಂಭವಾಗುತ್ತದೆ. ಜೊತೆಗೆ ಕ್ರಮೇಣ ಅವುಗಳು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ.

ಹಿತ್ತಾಳೆ ವಿಗ್ರಹಗಳನ್ನು ಹೊಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್:
ನಿಂಬೆಯೊಂದಿಗೆ ಬೇಕಿಂಗ್ ಸೋಡಾ:

ನೀವು ಹಿತ್ತಾಳೆ ಮೂರ್ತಿಗಳನ್ನು ಅಡಿಗೆ ಸೋಡಾ ಮತ್ತು ನಿಂಬೆಯೊಂದಿಗೆ (Lemon) ಸ್ವಚ್ಛಗೊಳಿಸಬಹುದು. ನಿಂಬೆ ರಸದಲ್ಲಿ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ ಮತ್ತು ನಂತರ ಈ ಪೇಸ್ಟ್ ಅನ್ನು ಬಟ್ಟೆಯೊಂದಿಗೆ ವಿಗ್ರಹಗಳ ಮೇಲೆ ಹಚ್ಚಿ. ಸ್ವಲ್ಪ ಹೊತ್ತು ಹಾಗೆ ಬಿಡಿ. ಇದರ ನಂತರ ವಿಗ್ರಹವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ- Krishna Janmashtami 2021: ಶ್ರೀಕೃಷ್ಣನು ಸದಾ ತನ್ನ ಮುಡಿಯಲ್ಲಿ ನವಿಲುಗರಿ ಧರಿಸುವುದರ ಹಿಂದಿನ ರಹಸ್ಯವೇನು ಗೊತ್ತೇ!

ವಿನೆಗರ್:
ನಿಮ್ಮ ಬಳಿ ನಿಂಬೆ ಇಲ್ಲದಿದ್ದರೆ, ನೀವು ಹಿತ್ತಾಳೆಯ ವಿಗ್ರಹಗಳನ್ನು ವಿನೆಗರ್ ನೊಂದಿಗೆ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಮೊದಲು ಹಿತ್ತಾಳೆಯ ವಸ್ತುಗಳ ಮೇಲೆ ವಿನೆಗರ್ ಹಚ್ಚಿ ಮತ್ತು ನಂತರ ಉಪ್ಪನಿಂದ ಅವುಗಳನ್ನು ಉಜ್ಜಿ ಸ್ವಚ್ಛಗೊಳಿಸಿ. ಬಳಿಕ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ನಿಂಬೆ ಮತ್ತು ಉಪ್ಪು:
ನಿಂಬೆ ರಸಕ್ಕೆ ಒಂದು ಚಮಚ ಉಪ್ಪನ್ನು ಬೆರೆಸಿ ಮತ್ತು ಈ ಮಿಶ್ರಣವನ್ನು ಹಿತ್ತಾಳೆ ಪಾತ್ರೆಗಳು ಮತ್ತು ವಿಗ್ರಹಗಳ ಮೇಲೆ ಉಜ್ಜಿರಿ. ನಂತರ ಅವುಗಳನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಸರಳ ವಿಧಾನವು ಹಿತ್ತಾಳೆ ಪಾತ್ರೆಗಳು (How To Clean Brass) ಮತ್ತು ವಿಗ್ರಹಗಳು ಹೊಸದಾಗಿ ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ- Shani Dev: ಶನಿದೇವನನ್ನು ಸಂತೋಷಪಡಿಸಲು ಈ ಎರಡು ಕೆಲಸ ಮಾಡಿದರೆ ಸಾಕಂತೆ!

ಹುಣಸೆಹಣ್ಣು:
ಹುಣಸೆಹಣ್ಣನ್ನು ಸುಮಾರು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ನಂತರ ತಿರುಳನ್ನು ಹಿತ್ತಾಳೆಯ ವಿಗ್ರಹಗಳಲ್ಲಿ ಅಥವಾ ಪಾತ್ರೆಗಳ ಮೇಲೆ ಉಜ್ಜಿರಿ. ಹುಣಸೆ ಹಣ್ಣಿನ ತಿರುಳನ್ನು ಬಳಸಿ ಹಿತ್ತಾಳೆ ವಿಗ್ರಹ ಅಥವಾ ಪಾತ್ರೆಗಳನ್ನು ಉಜ್ಜುವುದರಿಂದ ಅದರ ಮೇಲಿರುವ ಕಲೆ, ಜಿಡ್ಡು ಕಡಿಮೆಯಾಗುತ್ತದೆ. ನಂತರ ಅದನ್ನು ನೀರಿನಿಂದ ತೊಳೆಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News