ಬೆಂಗಳೂರು : ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಧನ್ತೇರಸ್ ಅಥವಾ ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ದೀಪಾವಳಿ ಹಬ್ಬವು ಧನ್ತೇರಸ್ ನೊಂದಿಗೆ ಪ್ರಾರಂಭವಾಗುತ್ತದೆ. ಈ ದಿನಕ್ಕೆ ವಿಶೇಷ ಮಹತ್ವ ಕೂಡಾ ಇದೆ. ಧನ್ತೇರಸ್ ದಿನದಂದು ಚಿನ್ನ, ಬೆಳ್ಳಿ, ವಾಹನಗಳು, ಪಾತ್ರೆಗಳು ಅಥವಾ ಯಾವುದೇ ಹೊಸ ವಸ್ತುಗಳನ್ನು ಖರೀದಿಸುವುದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಧನ್ತೇರಸ್ ದಿನದಂದು ಪೂಜೆಯೊಂದಿಗೆ, ದಾನಕ್ಕೂ ವಿಶೇಷ ಮಹತ್ವವಿದೆ. ಈ ದಿನದಂದು ದಾನ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಶಾಸ್ತ್ರದ ಪ್ರಕಾರ ಧನ್ತೇರಸ್ ದಿನದಂದು ಯಾವ ಯಾವ ವಸ್ತುಗಳನ್ನು ದಾನ ಮಾಡುವುದು ಪ್ರಯೋಜನಕಾರಿ ಎಂಬ ಮಾಹಿತಿ ಇಲ್ಲಿದೆ.
ಧಾನ್ಯ :
ಧಾರ್ಮಿಕ ನಂಬಿಕೆಗಳ ಪ್ರಕಾರ, ಧಾನ್ಯಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಧನ್ತೇರಸ್ ದಿನದಂದು ಧಾನ್ಯಗಳನ್ನು ದಾನ ಮಾಡಿದರೆ, ಮನೆಯಲ್ಲಿರುವ ಆಹಾರದ ಕೊರೆತೆ ಕಾಡುವುದೇ ಇಲ್ಲ. ಆದ್ದರಿಂದ, ಧನ್ತೇರಸ್ ದಿನದಂದು ಧಾನ್ಯಗಳನ್ನು ದಾನ ಮಾಡಬೇಕು. ಇದಲ್ಲದೇ ಬಡವರಿಗೆ ಅಥವಾ ನಿರ್ಗತಿಕರಿಗೆ ಅನ್ನ ನೀಡಿದರೆ ಪುಣ್ಯ ಸಿಗುತ್ತದೆ.
ಇದನ್ನೂ ಓದಿ : ಧನತ್ರಯೋದಶಿ ದಿನ ಪೊರಕೆ ಖರೀದಿ ಮತ್ತು ಪೂಜಾ ನಿಯಮ ಹೀಗಿದ್ದರೆ ಶುಭ . !
ಕಬ್ಬಿಣ :
ಧನ್ತೇರಸ್ ದಿನದಂದು ಕಬ್ಬಿಣವನ್ನು ದಾನ ಮಾಡುವುದು ತುಂಬಾ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಜೀವನದಲ್ಲಿ ಎದುರಾಗುವ ಅಥವಾ ಅನುಭವಿಸುತ್ತಿರುವ ಸಮಸ್ಯೆಯ ಮುಕ್ತಿಗೆ ಧನ್ತೇರಸ್ ದಿನದಂದು ಕಬ್ಬಿಣವನ್ನು ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ದುರಾದೃಷ್ಟವು ಅದೃಷ್ಟವಾಗಿ ಬದಲಾಗುವುದು ಮಾತ್ರವಲ್ಲ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ.
ಪೊರಕೆ :
ಸಾಮಾನ್ಯವಾಗಿ ಧನ್ತೇರಸ್ ದಿನದಂದು ಪೊರಕೆ ಕೊಳ್ಳುವ ಸಂಪ್ರದಾಯವಿದ್ದು, ಈ ದಿನ ಪೊರಕೆ ಕೊಳ್ಳುವುದರಿಂದ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಧನ್ತೇರಸ್ ದಿನದಂದು ಪೊರಕೆಯನ್ನು ದಾನ ಮಾಡುವುದು ಮಂಗಳಕರ ಎನ್ನಲಾಗಿದೆ. ದೇವಸ್ಥಾನದ ಕಸ ಗುಡಿಸುವವರಿಗೆ ಪೊರಕೆ ದಾನ ಮಾಡಿದರೆ ಸಂಪತ್ತಿಗೆ ಎಂದೂ ಕೊರತೆಯಾಗುವುದಿಲ್ಲ.
ಇದನ್ನೂ ಓದಿ : Astro Tips : ಲವಂಗದ ಈ ಪರಿಹಾರ ಜೀವನದ ದಿಕ್ಕನ್ನೇ ಬದಲಾಯಿಸುತ್ತೆ!
ಬಟ್ಟೆ :
ನಿರ್ಗತಿಕರಿಗೆ ವಸ್ತ್ರದಾನ ಮಾಡುವುದು ಪುಣ್ಯಡ ಕೆಲಸ. ಆದ್ದರಿಂದ, ಧನ್ತೇರಸ್ ದಿನದಂದು, ಬಡ ಅಥವಾ ನಿರ್ಗತಿಕರಿಗೆ ವಸ್ತ್ರವನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಕುಬೇರ ದೇವ ಪ್ರಸನ್ನನಾಗಿ ತನ್ನ ಕೃಪೆಯನ್ನು ಧಾರೆಯೆರೆಯುತ್ತಾನೆ. ಕುಬೇರನು ಪ್ರಸನ್ನನಾದರೆ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇರುವುದಿಲ್ಲ.
( ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. )
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.