Side Effects Of Cauliflower : ಹೂಕೋಸು ಭಾರತದ ಮೂಲೆ ಮೂಲೆಯಲ್ಲಿ ಇಷ್ಟಪಡುವ ತರಕಾರಿಯಾಗಿದೆ. ಇದನ್ನು ಪಲ್ಯ, ಸಾಂಬಾರ್, ಪಕೋಡ ಹೀಗೆ ಬೇರೆ ಬೇರೆ ರೀತಿಯ ಅಡುಗೆಗಳಲ್ಲಿ ಬಳಸಬಹುದು. ಹೂ ಕೋಸು ಬಹಳ ಬೇಗನೆ ಬೇಯುವ ತರಕಾರಿಯಾಗಿದೆ. ಈ ತರಕಾರಿಯನ್ನು ಬಟಾಣಿ ಕಾಳು ಜೊತೆ ಆಲೂಗಡ್ಡೆ ಜೊತೆ ಸೇರಿಸಿ ಅಡುಗೆಯಲ್ಲಿ ಬಳಸಲಾಗುತ್ತದೆ. ಇನ್ನು ಗೋಬಿ ಮಂಚೂರಿ ಇಷ್ಟಪಡದವರು ತೀರಾ ವಿರಳ ಎಂದೇ ಹೇಳಬಹುದು. ಆದರೆ ರುಚಿ ಎಂದು ಹೂಕೋಸನ್ನು ಮಿತಿ ಮೀರಿ ತಿನ್ನಬಾರದು.
ಹೂಕೋಸುಗಳ ಅತಿಯಾದ ಸೇವನೆಯು ಏಕೆ ಹಾನಿಕಾರಕ?
ಹೂಕೋಸು ನೋಡಲು ಎಷ್ಟು ಸುಂದರವಾಗಿದೆ ಆರೋಗ್ಯಕ್ಕೆ ಕೂಡಾ ಅಷ್ಟೇ ಪ್ರಯೋಜನಕಾರಿಯಾಗಿದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇಷ್ಟಿದ್ದ ಮೇಲೂ ಹೂ ಕೋಸಿನ ಅತಿಯಾದ ಸೇವನೆಯು ಹಾನಿಕಾರ ಎಂದು ಹೇಳಲು ಏನು ಕಾರಣ ? ಯಾವ ಸಮಸ್ಯೆಗಳಿದ್ದವರು ಹೂ ಕೋಸನ್ನು ತಿನ್ನಬಾರದು ನೋಡೋಣ.
ಇದನ್ನೂ ಓದಿ : Weight Loss : ಒಂದು ಲೋಟ ಬೆಚ್ಚಗಿನ ಹಾಲು ನಿಮ್ಮ ತೂಕ, ಸಕ್ಕರೆ ಮಟ್ಟ ನಿಯಂತ್ರಿಸುತ್ತೆ
1. ಗ್ಯಾಸ್ :
ಹೂಕೋಸು ರಾಫಿನೋಸ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ನಮ್ಮ ದೇಹವು ನೈಸರ್ಗಿಕವಾಗಿ ಒಡೆಯಲು ಅಸಮರ್ಥವಾಗಿರುವ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದ್ದು ಅದು ಸಣ್ಣ ಕರುಳಿನ ಮೂಲಕ ದೊಡ್ಡ ಕರುಳನ್ನು ತಲುಪುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉದ್ಭವಿಸಲು ಪ್ರಾರಂಭಿಸುತ್ತದೆ. ಹೀಗಾಗಿ ಗ್ಯಾಸ್ ಸಮಸ್ಯೆ ಇರುವವರು ಹೂ ಕೊಸಿನಿಂದ ಸಾಧ್ಯವಾದಷ್ಟು ದೂರ ಇರಬೇಕು.
2. ಥೈರಾಯ್ಡ್ ಸಮಸ್ಯೆಗಳು :
ಹೂಕೋಸು ಸೇವನೆಯು ಥೈರಾಯ್ಡ್ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಹಾನಿಕಾರಕವಾಗಿ ಪರಿಣಮಿಸುತ್ತದೆ.ಇದರಿಂದ T-3 ಮತ್ತು T-4 ಹಾರ್ಮೋನುಗಳ ಸ್ರವಿಸುವಿಕೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದವರ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಿ ಬಿಡಬಹುದು.
ಇದನ್ನೂ ಓದಿ : ಆಲೂಗೆಡ್ಡೆ ಸಿಪ್ಪೆಯ ಈ ಪ್ರಯೋಜನಗಳನ್ನು ತಪ್ಪದೇ ತಿಳಿಯಿರಿ
3. ರಕ್ತವು ದಪ್ಪವಾಗುತ್ತದೆ :
ಹೂಕೋಸು ಪೊಟ್ಯಾಸಿಯಮ್ ನ ಶ್ರೀಮಂತ ಮೂಲ ಎಂದು ಹೇಳಲಾಗುತ್ತದೆ. ಇದನ್ನು ಹೆಚ್ಚು ಸೇವಿಸುವ ಜನರ ರಕ್ತವು ಕ್ರಮೇಣ ದಪ್ಪವಾಗಲು ಪ್ರಾರಂಭಿಸುತ್ತದೆ. ಹೃದಯ ರೋಗದಿಂದ ಬಳಲುತ್ತಿರುವವರಿಗೆ ರಕ್ತ ತೆಳುಗೊಳಿಸುವ ಔಷಧಿಗಳನ್ನು ನೀಡಲಾಗುತ್ತದೆ. ಆದ್ದರಿಂದ ಹೂಕೋಸು ಸೇವನೆಯು ಅವರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.