Feng Shui Tips: ಕಪ್ಪೆಗೆ ಸಂಬಂಧಿಸಿದ ಈ ಉಪಾಯ ಮಾಡಿ, ಮನೆ, ನೌಕರಿ, ವ್ಯಾಪಾರದಲ್ಲಿ ಹಣದ ಕೊರತೆ ಎಂದಿಗೂ ಎದುರಾಗಲ್ಲ

Feng Shui Frog: ಫೆಂಗ್ ಶೂಯಿಯಲ್ಲಿ, ಮಾನವನ ಜೀವನಕ್ಕೆ ಸಂಬಂಧಿಸಿದಂತೆ ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಈ ಉಪಾಯಗಳನ್ನು ಅನುಸರಿಸಿ ಹಲವು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಫೆಂಗ್ ಶ್ಯೂಯಿಯಲ್ಲಿ ನೀಡಲಾಗಿರುವ ಅಂತಹ ಕೆಲ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.   

Written by - Nitin Tabib | Last Updated : Dec 17, 2022, 04:34 PM IST
  • ಫೆಂಗ್ ಶೂಯಿ ಕಪ್ಪೆಯನ್ನು ಇಂಗ್ಲಿಷ್‌ನಲ್ಲಿ ಮನಿ ಫ್ರಾಗ್ ಎಂದು ಕರೆಯಲಾಗುತ್ತದೆ.
  • ಇದು ಮೂರು ಕಾಲುಗಳನ್ನು ಹೊಂದಿದೆ
  • ಮತ್ತು ಅದರ ಬಾಯಿಯಲ್ಲಿ ಒಂದು ನಾಣ್ಯ ಇದೆ.
Feng Shui Tips: ಕಪ್ಪೆಗೆ ಸಂಬಂಧಿಸಿದ ಈ ಉಪಾಯ ಮಾಡಿ, ಮನೆ, ನೌಕರಿ, ವ್ಯಾಪಾರದಲ್ಲಿ ಹಣದ ಕೊರತೆ ಎಂದಿಗೂ ಎದುರಾಗಲ್ಲ title=
Feng Shuei Frog

Feng Shui Money Frog: ಜ್ಯೋತಿಷ್ಯ, ವಾಸ್ತು ಮತ್ತು ಹಸ್ತಸಾಮುದ್ರಿಕ ಶಾಸ್ತ್ರದಂತೆ, ಚೀನಾದ ಫೆಂಗ್ ಶೂಯಿ ಶಾಸ್ತ್ರ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಇದರಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹಲವಾರು ಉಪಾಯಗಳನ್ನು ಸೂಚಿಸಲಾಗಿದೆ. ಈ ಉಪಾಯಗಳನ್ನು ಅನುಸರಿಸುವುದರಿಂದ ಓರ್ವ ವ್ಯಕ್ತಿಯು ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದು. ಜೀವನದಲ್ಲಿ ಅಪಾರ ಧನಲಾಭ ಪಡೆದುಕೊಳ್ಳಬಹುದು ಮತ್ತು ವಿವಿಧ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಇಂದು ನಾವು ಫೆಂಗ್ ಶೂಯಿ ಕಪ್ಪೆಯ ಉಪಾಯದ ಕುರಿತು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಫೆಂಗ್ ಶೂಯಿಯಲ್ಲಿ ಈ ಕಪ್ಪೆಯನ್ನು ಸಂತೋಷ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಅದೃಷ್ಟದ ಸಂಕೇತ
ಫೆಂಗ್ ಶೂಯಿ ಕಪ್ಪೆಯನ್ನು ಇಂಗ್ಲಿಷ್‌ನಲ್ಲಿ ಮನಿ ಫ್ರಾಗ್ ಎಂದು ಕರೆಯಲಾಗುತ್ತದೆ. ಇದು ಮೂರು ಕಾಲುಗಳನ್ನು ಹೊಂದಿದೆ ಮತ್ತು ಅದರ ಬಾಯಿಯಲ್ಲಿ ಒಂದು ನಾಣ್ಯ ಇದೆ. ಫೆಂಗ್ ಶೂಯಿಯಲ್ಲಿ, ಈ ಕಪ್ಪೆಯನ್ನು ಸಂಪತ್ತು, ಸಂತೋಷ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಜನರು ಅದನ್ನು ಮನೆಗಳಲ್ಲಿ ಇಡುತ್ತಾರೆ.

ಮುಖ್ಯದ್ವಾರ
ಫೆಂಗ್ ಶೂಯಿ ಪ್ರಕಾರ, ಫೆಂಗ್ ಶೂಯಿ ಕಪ್ಪೆಯನ್ನು ಮನೆಯ ಮುಖ್ಯ ಬಾಗಿಲಿನ ಬಳಿ ಇಡಬೇಕು. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ. ಇದೇ ವೇಳೆ, ಮನೆಯ ಸಕಾರಾತ್ಮಕ ಶಕ್ತಿಯು ಹೊರಗೆ ಹೋಗುವುದಿಲ್ಲ. ಇದರಿಂದಾಗಿ ಮನೆಯಲ್ಲಿ ಹಣದ ಹರಿವು ಹೆಚ್ಚಾಗಿ ಮನೆ ಸಮೃದ್ಧಿಯಿಂದ ತುಂಬಿ ತುಳುಕುತ್ತದೆ.

ಇದನ್ನೂ ಓದಿ-Suryaನ ಬಳಿಕ ಇದೀಗ ಮತ್ತೊಂದು ಮಹತ್ವದ ಗ್ರಹದ ರಾಶಿ ಪರಿವರ್ತನೆಯ ಸರದಿ, ಯಾರ ಜೀವನದಲ್ಲಾಗಲಿದೆ ಮಹತ್ತರ ಬದಲಾವಣೆ?

ಎತ್ತರದ ಸ್ಥಳದಲ್ಲಿರಿಸಿ
ಫೆಂಗ್ ಶೂಯಿ ಕಪ್ಪೆಯನ್ನು ಯಾವಾಗಲೂ ಎತ್ತರದ ಸ್ಥಳದಲ್ಲಿ ಇಡಬೇಕು. ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮಾತ್ರ ಅದು ಪ್ರಯೋಜನವನ್ನು ನೀಡುತ್ತದೆ. ಅದನ್ನು ತಪ್ಪಾದ ಸ್ಥಳದಲ್ಲಿ ಇಡುವುದರಿಂದ, ಒಬ್ಬ ವ್ಯಕ್ತಿಯು ನಷ್ಟವನ್ನು ಅನುಭವಿಸಬೇಕಾಗಬಹುದು. ಫೆಂಗ್ ಶೂಯಿ ಕಪ್ಪೆಯನ್ನು ಅಡುಗೆ ಮನೆ, ಸ್ನಾನಗೃಹ ಮತ್ತು ತಗ್ಗು ಸ್ಥಳದಲ್ಲಿ ಇಡಬಾರದು.

ಇದನ್ನೂ ಓದಿ-Lucky Zodiac Signs: ಈ ರಾಶಿಗಳ ಜನರ ಮೇಲಿರುತ್ತೆ ಶ್ರೀಗಣೇಶನ ವಿಶೇಷ ಅನುಗ್ರಹ, ನಿಮ್ ರಾಶಿ ಯಾವ್ದು?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News