Suryaನ ಬಳಿಕ ಇದೀಗ ಮತ್ತೊಂದು ಮಹತ್ವದ ಗ್ರಹದ ರಾಶಿ ಪರಿವರ್ತನೆಯ ಸರದಿ, ಯಾರ ಜೀವನದಲ್ಲಾಗಲಿದೆ ಮಹತ್ತರ ಬದಲಾವಣೆ?

December Rashi Parivartan 2022: ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವಿದೆ. ಡಿಸೆಂಬರ್ 16 ರಂದು ಗ್ರಹಗಳ ರಾಜ ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಿ ಧನು ರಾಶಿಗೆ ಪ್ರವೇಶಿಸಿದ್ದಾನೆ. ಸೂರ್ಯನ ಬಳಿಕ ಇದೀಗ ಶುಕ್ರ ದೇವ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.  

Written by - Nitin Tabib | Last Updated : Dec 17, 2022, 03:26 PM IST
  • ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವಿದೆ.
  • ಡಿಸೆಂಬರ್ 16 ರಂದು ಗ್ರಹಗಳ ರಾಜ ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಿ ಧನು ರಾಶಿಗೆ ಪ್ರವೇಶಿಸಿದ್ದಾನೆ.
  • ಸೂರ್ಯನ ಬಳಿಕ ಇದೀಗ ಶುಕ್ರ ದೇವ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.
Suryaನ ಬಳಿಕ ಇದೀಗ ಮತ್ತೊಂದು ಮಹತ್ವದ ಗ್ರಹದ ರಾಶಿ ಪರಿವರ್ತನೆಯ ಸರದಿ, ಯಾರ ಜೀವನದಲ್ಲಾಗಲಿದೆ ಮಹತ್ತರ ಬದಲಾವಣೆ? title=
Planet Transit December 2022

Shukra Rashi Parivartan 2022: ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವಿದೆ. ಡಿಸೆಂಬರ್ 16 ರಂದು ಗ್ರಹಗಳ ರಾಜ ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಿ ಧನು ರಾಶಿಗೆ ಪ್ರವೇಶಿಸಿದ್ದಾನೆ. ಸೂರ್ಯನ ಬಳಿಕ ಇದೀಗ ಶುಕ್ರ ದೇವ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಒಂದು ಮಹತ್ವಪೂರ್ಣ ಗ್ರಹ ಎಂದು ಭಾವಿಸಲಾಗಿದೆ. ಜಾತಕದಲ್ಲಿ ಶುಕ್ರನ ಸ್ಥಾನ ಪ್ರಬಲವಾಗಿದ್ದರೆ, ವ್ಯಕ್ತಿಗೆ ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇನ್ನೊಂದೆಡೆ ಜಾತಕದಲ್ಲಿ ಶುಕ್ರ ಅಶುಭನಾಗಿದ್ದರೆ, ವ್ಯಕ್ತಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶುಕ್ರ ಡಿಸೆಂಬರ್ 29ರಂದು ಮಕರ ರಾಶಿಗೆ ಪ್ರವೇಶಿಸಲಿದೆ. ಶುಕ್ರನ ಈ ರಾಶಿ ಪರಿವರ್ತನೆ ಯಾರ ಮಲಗಿರುವ ಭಾಗ್ಯವನ್ನು ಬಡಿದೆಬ್ಬಿಸಲಿದೆ ತಿಳಿದುಕೊಳ್ಳೋಣ ಬನ್ನಿ .

ಮಿಥುನ ರಾಶಿ - ಆತ್ಮವಿಶ್ವಾಸದಲ್ಲಿ ವೃದ್ಧಿ, ಕಾರ್ಯಕ್ಷೇತ್ರದಲ್ಲಿ ನೀವು ಮಾಡಿದ ಕಾರ್ಯಗಳಲ್ಲಿ ಪ್ರಶಂಸೆ, ಧನಲಾಭ, ಆದಾಯದ ಮೂಲಗಳು ಹೆಚ್ಚಾಗಲಿವೆ, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಭಾರಿ ಯಶಸ್ಸು ಕಾದಿದೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ.

ಕರ್ಕ ರಾಶಿ - ಆರ್ಥಿಕ ಸ್ಥಿತಿ ಗಟ್ಟಿಯಾಗಲಿದೆ, ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಂಪಾದಿಸಲು ಹೆಚ್ಚು ಪರಿಶ್ರಮ ಪಡಬೇಕಾಗುವುದಿಲ್ಲ. ವ್ಯವಹಾರಕ್ಕೆ ಈ ಸಮಯ ಅನುಕೂಲಕರವಾಗಿದೆ. ಹೂಡಿಕೆಯಿಂದ ಲಾಕಷ್ಟು ಲಾಭ ಸಿಗಲಿದೆ . ನೌಕರಿ ಹಾಗೂ ವ್ಯಾಪಾರದಲ್ಲಿ ಬಡ್ತಿಯ ಯೋಗಗಳು ಗೋಚರಿಸುತ್ತಿವೆ. ಘನತೆ-ಗೌರವ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ - ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ನೌಕರಿ ಹಾಗೂ ವ್ಯಾಪಾರಕ್ಕೆ ಈ ಸಮಯ ಶುಭ ಮತ್ತು ಅನುಕೂಲಕರವಾಗಿದೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ. ಸ್ನೇಹಿತರ ಬೆಂಬಲ ಸಿಗಲಿದೆ. ನೀವು ಮಾಡಿರುವ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ವೃಶ್ಚಿಕ ರಾಶಿಯ ಜನರ ಪಾಲಿಗೆ ಈ ಸಮಯ ವರದಾನ ಸಾಬೀತಾಗಲಿದೆ. 

ಇದನ್ನೂ ಓದಿ-Lucky Zodiac Signs: ಈ ರಾಶಿಗಳ ಜನರ ಮೇಲಿರುತ್ತೆ ಶ್ರೀಗಣೇಶನ ವಿಶೇಷ ಅನುಗ್ರಹ, ನಿಮ್ ರಾಶಿ ಯಾವ್ದು?

ಮೀನ ರಾಶಿ - ನಿಮ್ಮ ಭಾಗ್ಯೋದಯ ನಿಶ್ಚಿತ, ಸಾಕಷ್ಟು ಧನಲಾಭ, ಕೌಟುಂಬಿಕ ನೀವನ ಸುಖಮಯವಾಗಿರಲಿದೆ. ಸಾಕಷ್ಟು ಘನತೆ-ಗೌರವ ಸಿಗಲಿದೆ. ಹುದ್ದೆ, ಪ್ರತಿಷ್ಠೆಯಲ್ಲಿ ವೃದ್ಧಿಯಾಗಲಿದೆ. ಹೂಡಿಕೆಯಿಂದ ಲಾಭ ಸಿಗಲಿದೆ.

ಇದನ್ನೂ ಓದಿ-New Year 2023: ಹೊಸ ವರ್ಷದ ಮೊದಲ ದಿನವೇ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಯಾರಿಗೆ ಲಾಭ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News