ಚಳಿಗಾಲದಲ್ಲಿ ಹೊಡೆದ ಹಿಮ್ಮಡಿ ಸಮಸ್ಯೆ ಎದುರಿಸುತ್ತಿದ್ದೀರಾ ? ಹಾಗಾದ್ರೆ ಚಿಂತೆ ಬಿಟ್ಟು ಈ ಟಿಪ್ಸ್‌ ಫಾಲೋ ಮಾಡಿ

winter session tips: ಕೆಲವು ರೀತಿಯ ಮನೆಮದ್ದುಗಳನ್ನು ಬಳಸಿಕೊಂಡು  ಸುಲಭವಾಗಿ ಈ ಬಿರುಕು ಸಮಸ್ಯೆಗಳನ್ನು ತೊಡೆದು ಹಾಕಬಹುವುದು. ಚಳಿಗಾಲದಲ್ಲಿ ಬಿರುಕು ಬಿಡುವ ಸಮಸ್ಯೆಯನ್ನು ನಿವಾರಿಸಲು ನೀವು ಮನೆಯಲ್ಲಿಯೇ ಹೀಲ್ ಕ್ರ್ಯಾಕ್ ಕ್ರೀಮ್ ತಯಾರಿಸಬಹುದು. ಈ ಕ್ರೀಮ್ ಅನ್ನು ಹೇಗೆ ತಯಾರಿಸುವುದು? ಇದಕ್ಕೆ ಅಗತ್ಯವಿರುವ ಪದಾರ್ಥಗಳು ಯಾವುವು ಎಂದು ನೋಡೋಣ.

Written by - Zee Kannada News Desk | Last Updated : Dec 20, 2023, 03:14 PM IST
  • ಚಳಿಗಾಲದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಹೊಡೆದ ಹಿಮ್ಮಡಿ.
  • ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಹೊಡೆದ ಹಿಮ್ಮಡಿಗೆ ಮದ್ದು ತಯಾರಿಸಬಹುದು.
  • ಈ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಹುದು.
ಚಳಿಗಾಲದಲ್ಲಿ ಹೊಡೆದ ಹಿಮ್ಮಡಿ ಸಮಸ್ಯೆ ಎದುರಿಸುತ್ತಿದ್ದೀರಾ ? ಹಾಗಾದ್ರೆ ಚಿಂತೆ ಬಿಟ್ಟು ಈ ಟಿಪ್ಸ್‌ ಫಾಲೋ ಮಾಡಿ title=

cracked heels problem: ಚಳಿಗಾಲದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಹೊಡೆದ ಹಿಮ್ಮಡಿ. ಈ ಸಮಸ್ಯೆ ಗೃಹಿಣಿಯರಿಗೆ ಸಾಮಾನ್ಯವಾಗಿ ತಲೆನೋವಾಗಿ ಕಾಡುತ್ತದೆ. ಹಿಮ್ಮಡಿಯಲ್ಲಿ ಊತ, ಉರಿ ಕೂಡ ಕಾಡಲಾರಂಭಿಸುತ್ತದೆ. ಸರಿಯಾದ ಸಮಯದಲ್ಲಿ ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಭವಿಷ್ಯದಲ್ಲಿ ಇದು ಬಹಳಷ್ಟು ಸಮಸ್ಯೆಗಳನ್ನ ಉಂಟುಮಾಡುತ್ತದೆ.

ಇಂತಹ ಬಿರುಕುಗಳು ಪಾದಗಳಲ್ಲಿ ಅತೀಯಾದ ನೋವು ಹಾಗೂ ಉರಿತವನ್ನು ಉಂಟು ಮಾಡುತ್ತದೆ. ಇದರ ಪರಿಣಾಮ ಹೆಜ್ಜೆ ಹಿಡಲು ಕೂಡ ಕಷ್ಟವಾಗಿರುತ್ತದೆ. ಹೆಚ್ಚು ಸಮಯ ನಿಲ್ಲುವುದಕ್ಕು ಕೂಡ ಸಾಧ್ಯವಾಗುವುದಿಲ್ಲ. ಅಷ್ಟು ಮಾತ್ರ ಅಲ್ಲದೆ ಈ ಬಿರುಕುಗಳು ಪಾದಗಳಲ್ಲಿ ಊತವನ್ನೂ ಉಂಟುಮಾಡುತ್ತವೆ. ಈ ಊತಗಳು ಸರ್ವೇ ಸಾಮಾನ್ಯ ಎಂದು ನೀವು ನಿರ್ಲಕ್ಷಿಸಿದರೆ ಇದು ದೀರ್ಘಾವಧಿ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುವುದಂತು ಗ್ಯಾರಂಟಿ.

ಇದನ್ನೂ ಓದಿ- ಕೂದಲುದುರುವಿಕೆ ಸಮಸ್ಯೆಗೆ ಪರಿಹಾರ ಈ ಹಳದಿ ಹೂವಿನಲ್ಲಡಗಿದೆ, ಹೇಗೆ ಬಳಸಬೇಕು? ಇಲ್ಲಿದೆ ವಿಧಾನ!

ಇನ್ನು ಈ ಸಮಸ್ಯೆಗೆ ಪರಿಹಾರನೇ ಇಲ್ವ ಅಂತ ಕೇಳೋದಾದ್ರೆ, ಕಂಡಿತ ಪಾರಿಹಾರ ಇದೆ. ಈ ಸಮಸ್ಯೆಗೆ ಪರಿಹಾರ ನಮ್ಮಲ್ಲಿಯೇ ಇದೆ. ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ  ಇದಕ್ಕೆ ಮದ್ದು ತಯಾರಿಸಬಹುದು. ಹಿಮ್ಮಡಿ ಬಿರುಕನ್ನು ತೊಡೆದು ಹಾಕಲು ಯಾವ್ಯಾವ ಪದಾರ್ಥಗಳ ಅಗತ್ಯವಿದೆ ಎಂಬುದನ್ನು ತಿಳಿಯೋಣ.

ಬೇಕಾಗುವ ಸಾಮಗ್ರಿಗಳು

ಸಾಸಿವೆ ಎಣ್ಣೆ - 2 ಚಮಚಗಳು, ತೆಂಗಿನ ಎಣ್ಣೆ - 2 ಚಮಚಗಳು, ವ್ಯಾಸಲೀನ್, ವಿಟಮಿನ್ ಇ ಕ್ಯಾಪ್ಸುಲ್‌ಗಳು -ಒಂದು ಚಮಚ, ಕರ್ಪೂರ - ಅರ್ಧ ಟೀ ಚಮಚ. 

ಇದನ್ನೂ ಓದಿ- ಅಡುಗೆ ಮನೆಯಲ್ಲಿರುವ ಈ ಹಳದಿ ಮಸಾಲೆ ಬೋಳು ತಲೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇ!

ತಯಾರಿಸುವ ವಿಧಾನ

ಒಂದು ಸಣ್ಣ ಪಾತ್ರೆಯನ್ನು ತೆಗೆದುಕೊಂಡು ಮೇಲೆ ತಿಳಿಸಿದಂತೆ ತೆಂಗಿನ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ. ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕರ್ಪೂರವನ್ನು ಸೇರಿಸಿ ಮತ್ತು ನಯವಾದ ತನಕ ಮಿಶ್ರಣ ಮಾಡಿ. ಈಗ ಅದೇ ಮಿಶ್ರಣದಲ್ಲಿ ವ್ಯಾಸಲೀನ್ ಮತ್ತು ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಮಿಶ್ರಣ ಮಾಡಿ ಮತ್ತು ಪಕ್ಕಕ್ಕೆ ಇರಿಸಿ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದ ನಂತರ ನಿಧಾನ ಪ್ಲೇಮ್‌ನಲ್ಲಿ ಪೇಸ್ಟ್‌ ಆಗುವವರೆಗು ಬಾಯ್ಲ್‌ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಈ ಪೇಸ್ಟ್‌ ಪ್ರತಿದಿನ ರಾತ್ರಿ ಮಲಗುವ ಮೊದಲು ಹಿಮ್ಮಡಿಯನ್ನು ಸ್ವಚ್ಛಗೋಳಿಸಿದ ನಂತರ ಇದನ್ನು ಅಪ್ಲೇ ಮಾಡಿಕೊಂಡು ಬಂದಲ್ಲಿ ಒಂದೇ ವಾರದಲ್ಲಿ ಇದರ ಉತ್ತಮ ಫಲಿತಾಂಶ ಸಿಗುವುದು. ಜೊತೆಗೆ ಹಿಮ್ಮಡಿ ನೋವು ಮತ್ತು ಊತದಂತ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ. ಈ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಹುದು.

ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News