ನಾಳೆ ಮೌನಿ ಅಮಾವಾಸ್ಯೆ, 20 ವರ್ಷಗಳ ಬಳಿಕ ಶುಭ ಕಾಕತಾಳೀಯ, 4 ರಾಜಯೋಗಗಳಿಂದ ಮೋಕ್ಷ ಪ್ರಾಪ್ತಿ

Mauni Amavasya 2023: ಈ ವರ್ಷದ ದರ್ಶ ಮೌನಿ ಅಮಾವಾಸ್ಯೆಯ ದಿನ 20 ವರ್ಷಗಳ ಬಳಿಕ ಶನಿ ಅಮಾವಾಸ್ಯೆಯ ಶುಭ ಕಾಕತಾಳೀಯ ರೂಪಗೊಳ್ಳುತ್ತಿದೆ. ಇದಲ್ಲದೆ ಮೌನಿ ಅಮಾವಾಸ್ಯೆಯ ದಿನ 4 ರಾಜಯೋಗಗಳು ಕೂಡ ನಿರ್ಮಾಣಗೊಳ್ಳುತ್ತಿವೆ. 30 ವರ್ಷಗಳ ಬಳಿಕ ಖಪ್ಪರ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗದಲ್ಲಿ ಶನಿ ದೇವನಿಗೆ ಸಂಬಂಧಿಸಿದ ಉಪಾಯಗಳನ್ನು ಮಾಡಿದರೆ, ಶನಿಯ ದುಷ್ಪ್ರಭಾವಗಳಿಂದ ಮುಕ್ತಿ ಸಿಗಲಿದೆ.  

Written by - Nitin Tabib | Last Updated : Jan 20, 2023, 12:08 PM IST
  • ಮೌನಿ ಅಮಾವಾಸ್ಯೆಯಂದು 30 ವರ್ಷಗಳ ನಂತರ ಖಪ್ಪರ ಯೋಗ ರೂಪುಗೊಂಡಿದೆ.
  • ಖಪ್ಪರ ಯೋಗದಲ್ಲಿ ಶನಿದೇವನ ಉಪಾಯಗಳನ್ನು ಅನುಸರಿಸುವುದರಿಂದ
  • ಶನಿಯ ದುಷ್ಪ್ರಭಾವಗಳಿಂದ ಮುಕ್ತಿ ಸಿಗುತ್ತದೆ.
ನಾಳೆ ಮೌನಿ ಅಮಾವಾಸ್ಯೆ, 20 ವರ್ಷಗಳ ಬಳಿಕ ಶುಭ ಕಾಕತಾಳೀಯ, 4 ರಾಜಯೋಗಗಳಿಂದ ಮೋಕ್ಷ ಪ್ರಾಪ್ತಿ title=
ದರ್ಶ ಮೌನಿ ಅಮಾವಾಸ್ಯೆ 2023

Mauni Amavasya 2023: ಈ ಬಾರಿಯ ಮೌನಿ ಅಮಾವಾಸ್ಯೆಯು ಜನವರಿ 21 ರ ಶನಿವಾರದಂದು ಬರುತ್ತಿದೆ. 20 ವರ್ಷಗಳ ನಂತರ ಮೌನಿ ಅಮಾವಾಸ್ಯೆಯ ದಿನ ಶನಿ ಅಮಾವಾಸ್ಯೆ ಶುಭ ಕಾಕತಾಳೀಯ ರೂಪಗೊಳ್ಳುತ್ತಿದೆ. 20 ವರ್ಷಗಳ ನಂತರ ಶನಿ ಅಮಾವಾಸ್ಯೆಯು ಮೌನಿ ಅಮಾವಾಸ್ಯೆಯಾಗಿರುವುದು ಒಂದು ಶುಭ ಸಂಯೋಗ. ಇದಲ್ಲದೇ ಮೌನಿ ಅಮವಾಸ್ಯೆಯಂದು ನಾಲ್ಕು ರಾಜಯೋಗಗಳೂ ರೂಪುಗೊಳ್ಳುತ್ತಿದ್ದು, ಈ ಕಾರಣದಿಂದ ಈ ಬಾರಿಯ ಮೌನಿ ಅಮಾವಾಸ್ಯೆ ಮತ್ತಷ್ಟು ವಿಶೇಷವಾಗಿದೆ. ಈ ದಿನ ಗಂಗಾಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುವುದಲ್ಲದೆ, ಶನಿದೇವನ ಕೃಪೆಯಿಂದ ಭಕ್ತರ ಸಂಕಷ್ಟಗಳೂ ದೂರಾಗಲಿವೆ.

20 ವರ್ಷಗಳ ನಂತರ ಶುಭ ಕಾಕತಾಳೀಯ
ಜೋತಿಷ್ಯ ಪಂಡಿತರು ಹೇಳುವ ಪ್ರಕಾರ, ಫೆಬ್ರವರಿ 2003 ರಲ್ಲಿ ಮೌನಿ ಅಮವಾಸ್ಯೆಯ ದಿನ ಶನಿವಾರವಾಗಿತ್ತು. ಅಂದು ಶನಿ ಅಮಾವಾಸ್ಯೆಯ ಕಾಕತಾಳೀಯ ಕೊನೆಯ ಬಾರಿಗೆ ನಿರ್ಮಾಣಗೊಂಡಿತ್ತು. ಇದೀಗ 20 ವರ್ಷಗಳ ನಂತರ ಜನವರಿ 21 ರಂದು ಮೌನಿ ಅಮವಾಸ್ಯೆಯಂದು ಶನಿವಾರ ಬಂದಿರುವ ಶುಭ ಕಾಕತಾಳೀಯ ಮತ್ತೊಮ್ಮೆ ರೂಪಗೊಂಡಿದೆ. ಈ ದಿನ ಗಂಗಾ ಸ್ನಾನದ ನಂತರ ಶನಿ ದೇವನನ್ನು ಪೂಜಿಸುವುದರಿಂದ ಶನಿಯ ಸಾಡೆಸಾತಿ ಮತ್ತು ಎರಡೂವರೆ ವರ್ಷಗಳ ಕಾಟ ಇರುವವರಿಗೆ ಸಾಕಷ್ಟು ಪ್ರಯೋಜನ ಸಿಗಲಿದೆ.

ಮೌನಿ ಅಮವಾಸ್ಯೆಯ ದಿನ ನಾಲ್ಕು ರಾಜಯೋಗಗಳ ನಿರ್ಮಾಣ
ಈ ವರ್ಷ ಮೌನಿ ಅಮಾವಾಸ್ಯೆಯಂದು ಸತ್ಕೀರ್ತಿ, ಹರ್ಷ, ಭಾರತಿ ಮತ್ತು ವರಿಷ್ಠ ಎಂಬ ನಾಲ್ಕು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇದಲ್ಲದೇ ಮಕರ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಇರುವುದರಿಂದ ಈ ದಿನ ಖಪ್ಪರ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಹಾಗೆ ನೋಡಿದರೆ ಮೌನಿ ಅಮವಾಸ್ಯೆಯಂದು ನಿರ್ಮಾಣಗೊಳ್ಳುತ್ತಿರುವ ಈ 5 ಯೋಗಗಳು ಅಪರೂಪದ ಕಾಕತಾಳೀಯವಾಗಿದೆ.

30 ವರ್ಷಗಳ ನಂತರ ಮೌನಿ ಅಮಾವಾಸ್ಯೆಯಂದು ಖಪ್ಪರ ಯೋಗ
ಮೌನಿ ಅಮಾವಾಸ್ಯೆಯಂದು 30 ವರ್ಷಗಳ ನಂತರ ಖಪ್ಪರ ಯೋಗ ರೂಪುಗೊಂಡಿದೆ. ಖಪ್ಪರ ಯೋಗದಲ್ಲಿ ಶನಿದೇವನ ಉಪಾಯಗಳನ್ನು ಅನುಸರಿಸುವುದರಿಂದ ಶನಿಯ ದುಷ್ಪ್ರಭಾವಗಳಿಂದ ಮುಕ್ತಿ ಸಿಗುತ್ತದೆ. ಖಪ್ಪರ ಯೋಗವನ್ನು ಸಾಡೇಸಾತಿ,  ಎರಡೂವರೆ ವರ್ಷಗಳ ಕಾಟ ಇರುವವರಿಗೆ ಅಥವಾ ಶನಿ ದೋಷ ಎದುರಿಸುತ್ತಿರುವವರಿಗೆ ಉಪಾಯಗಳನ್ನು ಅನುಸರಿಸಲು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ-ವರ್ಷದ ಮೊದಲ ಶನಿಚರಿ ಅಮಾವಾಸ್ಯೆಯ ದಿನ 5 ರಾಶಿಗಳ ಜನರ ಮೇಲೆ ಶನಿಯ ವಕ್ರ ದೃಷ್ಟಿ, ಈ ಉಪಾಯ ಮಾಡಿ

ಕಷ್ಟ ನಿವಾರಿಸಲಿದ್ದಾನೆ ಶನಿ 
ಈ ವರ್ಷ ಮೌನಿ ಅಮಾವಾಸ್ಯೆಯ ದಿನ ಸ್ನಾನ ಮಾಡಿ ಶನಿ ದೇವರನ್ನು ಪೂಜಿಸಿ. ಖಪ್ಪರ ಯೋಗದಿಂದಾಗಿ ಛಾಯಾ ದಾನ, ಕಪ್ಪು ಎಳ್ಳು ದಾನ, ಕಪ್ಪು ಉಂಡೆ ಪರಿಹಾರ, ಶನಿ ರಕ್ಷಾ ಕವಚ ಪಾರಾಯಣ ಇತ್ಯಾದಿಗಳನ್ನು ಈ ದಿನ ಮಾಡಬಹುದು. ಇದರಿಂದ ಶನಿಯ ವಕ್ರ ದೃಷ್ಟಿ ಇರುವವರಿಗೆ ಲಾಭ ಸಿಗುತ್ತದೆ ಮತ್ತು ಶನಿದೇವನು ಅವರ ಜೀವನದಲ್ಲಿನ ಸಂಕಷ್ಟಗಳನ್ನು ನಿವಾರಿಸುತ್ತಾನೆ.

ಇದನ್ನೂ ಓದಿ-ಧನ-ವ್ಯಾಪಾರದ ಕಾರಕ ಬುಧನ ನೇರನಡೆ ಆರಂಭ, ಏಪ್ರಿಲ್ 20ರವರೆಗೆ ಈ ರಾಶಿಗಳ ಜನರಿಗೆ ಬಂಪರ್ ಲಾಭ

ಮೌನಿ ಅಮವಾಸ್ಯೆಯಂದು ಸ್ನಾನ-ದಾನದ ಮಹತ್ವ
ಮೌನಿ ಅಮವಾಸ್ಯೆಯ ದಿನದಂದು ಸೂರ್ಯೋದಯದ ಸಮಯದಿಂದ ನೀವು ಸ್ನಾನ ಮಾಡಬಹುದು. ಸಾಧ್ಯವಾದರೆ ಈ ದಿನ ಗಂಗಾಸ್ನಾನ ಮಾಡಿ ಪುಣ್ಯ ಫಲ ಪ್ರಾಪ್ತಿ ಮಾಡಿಕೊಳ್ಳಿ. ಇದು ನಿಮ್ಮ ಪಾಪಗಳನ್ನು ತೊಡೆದುಹಾಕುತ್ತದೆ ಮತ್ತು ನಿಮಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಮೌನಿ ಅಮವಾಸ್ಯೆಯ ದಿನ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News