Funny Memes on Singles : ಫೆಬ್ರವರಿ 14 ರಂದು ಪ್ರೇಮಿಗಳ ದಿನ. ಇಂದಿನಿಂದ ವ್ಯಾಲೆಂಟೈನ್ಸ್ ವೀಕ್ ಆರಂಭವಾಗಿದೆ. ವ್ಯಾಲೆಂಟೈನ್ಸ್ ವೀಕ್ ನ ಮೊದಲ ದಿನವೇ ರೋಜ್ ಡೇಯೊಂದಿಗೆ ಆರಂಭವಾಗುತ್ತದೆ. ಪ್ರೀತಿಯನ್ನು ಸಂಭ್ರಮಿಸಲು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಈ ವಾರ ಮೀಸಲು. ಪ್ರೇಮ ಪಕ್ಷಿಗಳು, ಪ್ರಣಯ ಜೋಡಿಗಳು ಈ ವಾರ ತುಂಬಾ ಗಿಫ್ಟ್, ಟ್ರಾವೆಲ್ ಎನ್ನುವ ಪ್ಲಾನ್ ಮಾಡಿಕೊಂಡಿರುತ್ತಾರೆ. ಆದರೆ ಒಂಟಿಯಾಗಿರುವವರ ಪಾಲಿಗೆ ಈ ವಾರ ಅದ್ಯಾವ ರೀತಿಯ ಪರಿಣಾಮವೂ ಬೀರುವುದಿಲ್ಲ. ಈ ವಾರವೂ ಅವರ ಪಾಲಿಗೆ ಸಾಮಾನ್ಯ ದಿನಗಳಂತೆ ಕಳೆದು ಹೋಗುತ್ತದೆ. ಇದೀಗ ಒಂಟಿಯಾಗಿರುವವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ತಮಾಷೆಯ ಮೇಮ್ಗಳು ವೈರಲ್ ಆಗುತ್ತಿವೆ. ಪ್ರೇಮಿಗಳ ದಿನದಂದು ಒಂಟಿಯಾಗಿರುವವರ ಪ್ರತಿಕ್ರಿಯೆ ಹೇಗಿರುತ್ತದೆ? ಎನ್ನುವ ಫನ್ನಿ ಮೆಸೇಜ್ ಗಳು ಇಲ್ಲಿವೆ.
ರೋಸ್ ಡೇ 2023: ಫನ್ನಿ ಮೀಮ್ಸ್ :
ಈ ದಿನ ಒಂಟಿಯಾಗಿರುವವರಿಗೆ ಯಾವ ರೀತಿ ಅನ್ನಿಸುತ್ತದೆ ಎನ್ನುವುದನ್ನು ಈ ಮೆಸೇಜ್ ವಿವರಿಸುತ್ತದೆ. ಇಲ್ಲಿ ವ್ಯಕ್ತಿ ರೋಸ್ ಡೇ ಎನ್ನುವುದನ್ನು ನೆನೆದು ಖುಷಿಯಿಂದ ಎದ್ದು ನಿಲ್ಲುತ್ತಾನೆ. ಆದರೆ ಮರು ಕ್ಷಣವೇ ರೋಸ್ ಡೇ ಆ ಚರಿಸಲು ತನ್ನ ಬಳಿ ಸಂಗಾತಿಯೇ ಇಲ್ಲ ಎನ್ನುವುದನ್ನು ತಿಳಿದು ಮತ್ತೆ ಮಲಗುತ್ತಾನೆ.
ಇದನ್ನೂ ಓದಿ : Rose Day 2023: Rolls Royce ಕಾರಿಗಿಂತಲೂ ದುಬಾರಿ ಈ ಗುಲಾಬಿ ! ಬೆಲೆ ಕೇಳಿದರೆ ಬೆಚ್ಚಿ ಬೀಳುವುದು ಖಂಡಿತಾ !
ಮತ್ತೊಬ್ಬ ಬಳಕೆದಾರರು ತನಗೆ ಗುಲಾಬ್ ಅಲ್ಲ, ಗುಲಾಬ್ ಜಾಮೂನ್ ಬೇಕು ಎಂದು ಕೇಳುತ್ತಾರೆ.
ಇಂದು ವ್ಯಾಲೆಂಟೈನ್ಸ್ ಡೇ, ರೋಸ್ ಡೇ, ಹಗ್ ಡೇ ಹೀಗೆ ಪ್ರೀತಿಯನ್ನು ವ್ಯಕ್ತಪಡಿಸಲು ವಾರ ಪೂರ್ತಿ ಇದೆ. ಆದರೆ ಸಿಂಗಲ್ಗಳು ಅದನ್ನು ತಿಳಿದುಕೊಂಡು ಏನು ಮಾಡುತ್ತಾರೆ ಎಂದು ಈ ಬಳಕೆದಾರರು ಹೇರಾ ಫೇರಿ ಚಿತ್ರದ ಫೋಟೋ ಬಳಸಿ ತಮ್ಮ ಮನಸ್ಸಿನ ಭಾವನೆ ಹೇಳಿದ್ದಾರೆ.
Friend : Tujhe pata hai Valentine's Day se pehle Rose Day, Hug Day aise days aate hai.
Le Single Me : pic.twitter.com/xEdenGrGQD
— Suyog Arvind Vengsarkar (@SuyogSr) February 4, 2023
ಇದನ್ನೂ ಓದಿ : ಪ್ರೀತಿಯಲ್ಲಿ ಬಿದ್ದ ಹುಡಗನ ಮೊದಲ ತೊದಲ ನುಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.